ನಮ್ಮ ಮೆಟ್ರೋ ಟೋಕನ್ ಕಳೆದುಕೊಂಡರೆ 500 ರೂ. ದಂಡ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 27 :ನಮ್ಮ ಮೆಟ್ರೋ ಟೋಕನ್ ಕಳೆದುಕೊಂಡರೆ500 ರೂ. ದಂಡ ಪಾವತಿಸಬೇಕು ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

ಮೆಟ್ರೋದಲ್ಲಿ ಸಂಚಾರಕ್ಕಾಗಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್ ಕಾರ್ಡ್ ಗಳನ್ನು ಈಗಾಗಲೇ ನೀಡಿದ್ದಾರೆ. 50 ರೂ. ನೀಡಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಖರೀದಿಸಬಹುದು. ಹಾಗೆಯೇ ಟಿಕೆಟ್ ಟೋಕನ್ ಗಳನ್ನು ಕೂಡ ಖರೀದಿಸಬಹುದು. ಮೆಟ್ರೋ ಪ್ರಾರಂಭವಾದ ಸಮಯದಲ್ಲಿ ಟೋಕನ್ ಕಳೆದುಕೊಂಡವರಿಗೆ 200ರೂ. ದಂಡ ವಿಧಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಅದನ್ನು 50ರೂ.ಗೆ ಇಳಿಸಲಾಯಿಯತು.

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ 'ಸಿ' ಪ್ರವೇಶ ದ್ವಾರ ಮುಚ್ಚಲಾಗಿದೆ

ಒಂದು ವಾರದ ಹಿಂದೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ನಿರ್ಲಕ್ಷ್ಯದಿಂದ ಟೋಕನ್ ನ್ನು ರೈಲು ಹಳಿಯ ಮೇಲೆ ಬೀಳಿಸಿದ್ದಾಳೆ, ಇದಾದ ನಂತರ ಅದನ್ನು ತೆಗೆಯುವ ಪ್ರಯತ್ನ ಮಾಡಿದ್ದು ನಂತರದಲ್ಲಿ ಭದ್ರತಾ ಸಿಬ್ಬಂದಿಗಳು ಆಕೆಯನ್ನು ತಡೆದು ಅಧಿಕಾರಿಗಳ ಬಳಿಗೆ ಕೊಂಡೊಯ್ದು ದಂಡ ವಸೂಲಿ ಮಾಡಿದ್ದರು.

If you lost Metro token pay 500rs Penalty

ಆದರೇ ಇತ್ತೀಚೆಗೆ ಪ್ರತಿ ತಿಂಗಳಿಗೆ ಅಂದಾಜು 1500 ಟೋಕನ್​ ಕಳೆದುಹೋಗುತ್ತಿತ್ತು. ಹೀಗಾಗಿ ಟೋಕನ್​ ಬಗ್ಗೆ ಪ್ರಯಾಣಿಕರಿಗೆ ಕಾಳಜಿ ಬೆಳೆಸುವ ನಿಟ್ಟಿನಲ್ಲಿ ಮೆಟ್ರೋ 50 ರೂಪಾಯಿ ದಂಡದ ಮೊತ್ತವನ್ನು 500 ಕ್ಕೆ ಏರಿಸಿದೆ. ದಂಡ ಎಂದು ಸೂಚನೆ ನೀಡಲಾಗಿದೆ. ಹಾಗೂ ಒಂದು ಟೋಕನ್ ಗೆ 40 ರೂ. ತಗಲುತ್ತದೆ ಎಂದು ಅಂದಾಜಿಸಲಾಗಿದೆ.

ನಮ್ಮ ಮೆಟ್ರೋ ರೈಲು 3 ನಿಮಿಷಕ್ಕೊಂದರಂತೆ ಸಂಚಾರ: ಜಾರ್ಜ್

ಬಿಎಂಆರ್​ಸಿಎಲ್​ ಎಂಡಿ ಪ್ರದೀಪ ಸಿಂಗ್ ಖರೋಲ ಮಾತನಾಡಿ, ಕೆಲವು ಬಾರಿ ಪ್ರಯಾಣಿಕರು ಟೋಕನ್ ಪಡೆದು ಫ್ಲಾಟ್​ಪಾರಂ ಪ್ರವೇಶಿಸಿದರೂ, ಇಳಿಯುವ ನಿಲ್ದಾಣದಲ್ಲಿ ಟೋಕನ್ ಹಿಂದಕ್ಕೆ ನೀಡದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ದಂಡದ ಮೊತ್ತ ಹೆಚ್ಚಿಸಲಾಗಿದೆ ಎಂದಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮೆಟ್ರೋ ಟೋಕನ್ ಖರೀದಿಸಲೇಬೇಕು. ಮೆಟ್ರೋ ಕಾರ್ಡ್ ಹೊಂದಿರುವವರು ಟೋಕನ್ ಖರೀದಿಸುವ ಅಗತ್ಯವಿಲ್ಲ. ಈ ಟೋಕನ್ ಪ್ರಯಾಣಿಕರು ಮೆಟ್ರೋ ಹತ್ತಿದ ಸ್ಥಳದಿಂದ ಇಳಿಯುವ ಸ್ಥಳದವರೆಗೂ ಜೊತೆಯಲ್ಲಿಯೇ ಇರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BMRCL decided to impose 500rs penalty for token if the commuter lost the same.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ