ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರ ತಡೆಯಲು ಹೊರಟರೆ ಅಧಿಕಾರ ಉಳಿಯೋಲ್ಲ: ಎಚ್ಡಿಕೆ

|
Google Oneindia Kannada News

ಬೆಂಗಳೂರು, ಜೂನ್ 12: 'ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ' ಎಂದು ಮುಖ್ಯಮಮತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಸಾಕಷ್ಟಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ.

ನನಗೆ ಮುಖ್ಯಮಂತ್ರಿಯಾಗೋಕೆ ಇಷ್ಟವಿರಲಿಲ್ಲ: ಕುಮಾರಸ್ವಾಮಿ ನನಗೆ ಮುಖ್ಯಮಂತ್ರಿಯಾಗೋಕೆ ಇಷ್ಟವಿರಲಿಲ್ಲ: ಕುಮಾರಸ್ವಾಮಿ

ಬೆಂಗಳೂರಿನ ಗಾಂಧಿ ಭವನದಲ್ಲಿ ಜೂನ್ 11 ರಂದು ಮಾತನಾಡುತ್ತಿದ್ದ ಅವರು, 'ಭ್ರಷ್ಟಾಚಾರದ ಬೇರು ತುಂಬಾ ಆಳವಾಗಿದೆ. ಅದನ್ನು ಸ್ವಚ್ಛಗೊಳಿಸಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಿದರೆ ನನಗೇ ಅಪಾಯ' ಎಂದು ಅವರು ಕಳವಳ ವ್ಯಕ್ತಪಡಿಸಿದರು.

If I try to control corruption in Karnataka, i will definitely lose my power: HDK

ವಿಧಾನಸೌಧದ ಕಾರಿಡಾರ್ ಗಳಲ್ಲಿ ಮಧ್ಯವರ್ತಿಗಳು ಅಡ್ಡಾಡುತ್ತಾ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ. ರಾಜ್ಯದ ಕಾರ್ಯದರ್ಶಿ ಕಚೇರಿಯ ಮೂರೂ ಮಹಡಿಗಳಲ್ಲಿ ಭ್ರಷ್ಟಾಚಾರ ಅಧಿಕಾರ ಚಲಾಯಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ. ಇಲ್ಲಿಯವರೆಗೆ ಅವರು ಎಷ್ಟೇ ದುಡ್ಡು ಮಾಡಿಕೊಂದಿರಲಿ, ಆದರೆ ಇನ್ನು ಮುಂದೆ ರಾಜ್ಯ ಮತ್ತು ರಾಜ್ಯದ ಜನತೆಗಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

English summary
'If I try to control corruption in Karnataka, i will definitely lose my power' Chief minister HD Kumaraswamy told in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X