ಸಿದ್ದು ವಿರುದ್ಧ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ

Posted By:
Subscribe to Oneindia Kannada

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಗೆ ರು 1 ಸಾವಿರ ಕೋಟಿ ನೀಡಿರುವ ವಿಚಾರ ಸಂಬಂಧ ತಾವು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿರುವ ವಿಷಯ ಸುಳ್ಳಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೋಮವಾರ ಸವಾಲು ಹಾಕಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ಖುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ಹಣ ನೀಡಿದ್ದಾರೆ ಎನ್ನುವ ಮಾತಿಗೆ ನಾನು ಈಗಲೂ ಬದ್ಧವಾಗಿದ್ದೇನೆ. ಕಾಂಗ್ರೆಸ್ ಹೈಕಮಂಡ್ ಗೆ ನೀವು ಸಾವಿರ ಕೋಟಿ ನೀಡಿದ್ದೀರಿ ಎಂದು ಯಡಿಯೂರಪ್ಪ ಮತ್ತೆ ನುಡಿದರು.[ನಾನು ಮತ್ತು ಈಶ್ವರಪ್ಪ ಅಣ್ಣತಮ್ಮ ಇದ್ದಂತೆ: ಯಡಿಯೂರಪ್ಪ]

If false allegations against the Siddaramaiah will have to retire from politics: BSY

ಉಕ್ಕಿನ ಸೇತುವೆ ವಿಚಾರ ಕುರಿತು ಕೂಡ 65 ಕೋಟಿ ರೂ. ಈಗಾಗಲೇ ಸಿಎಂಗೆ ಸಂದಾಯವಾಗಿದೆ. ಇದು ಎಂಎಲ್ ಸಿ ಗೋವಿಂದರಾಜು ಡೈರಿಯಲ್ಲಿದೆ. ಡೈರಿ ವಿವರಗಳು ಬಹಿರಂಗವಾದರೆ ನೀವು ನಿಮ್ಮ ಸ್ಥಾನ ತ್ಯಜಿಸುತ್ತೀರಾ? ನಾನು ಹೇಳಿದ್ದು ಸುಳ್ಳಾದರೆ ಕೂಡಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.

ಇದೇ ವೇಳೆ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸತತ ಎರಡನೇ ಬಾರಿ ಗೆಲುವು ಸಾಧಿಸಿದ ಭಾರತೀಯ ತಂಡಕ್ಕೆ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು

ಯಡಿಯೂರಪ್ಪನವರು ಮಾಡಿದ್ದ ಮೊದಲ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಪ್ರತಿಕ್ರಿಯಿಸಿ ಅವರು ಡೋಂಗಿ ರಾಜಕಾರಣಿ, ಅವರಿಗೆ ನೈತಿಕತೆ ಇಲ್ಲ ಸುಮ್ಮನೆ ಸುಳ್ಳುಹೇಳುತ್ತಿದ್ದಾರೆ. ಡೈರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If false allegations against the Chief Minister Siddaramaiah will have to retire from politics says BJP State President BS yaddyurappa in Bengaluru.
Please Wait while comments are loading...