ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸವರ್ಷಕ್ಕೆ ಬೆಂಗಳೂರಿಗರು ಗುಂಡು ಹಾಕದಿದ್ದರೆ ಸರ್ಕಾರಕ್ಕೆಷ್ಟು ನಷ್ಟ?

|
Google Oneindia Kannada News

Recommended Video

ಬೆಂಗಳೂರಿಗರು ಹೊಸ ವರ್ಷದಂದು ಗುಂಡು ಹಾಕದಿದ್ದರೆ ಸರ್ಕಾರಕ್ಕೆಷ್ಟು ನಷ್ಟ ? | Oneindia Kannada

ಬೆಂಗಳೂರು, ಡಿಸೆಂಬರ್ 15 : ಹೊಸ ವರ್ಷದ ಹಿಂದಿನ ದಿನ ಮತ್ತು ಹೊಸ ವರ್ಷದಂದು ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದರೆ ಸರ್ಕಾರಕ್ಕೆ 70 ಕೋಟಿ ನಷ್ಟ ಉಂಟಾಗಲಿದೆ.

ಹೊಸ ವರ್ಷದ ಮುನ್ನಾದಿನ ಹಾಗೂ ಹೊಸ ವರ್ಷದ ಮೊದಲ ದಿನದಂದು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದರೆ 80 ಲಕ್ಷ ಲೀಟರ್ ಮದ್ಯ ಮಾರಾಟ ನಿಂತು ಹೋಗಿ ಸುಮಾರು 70 ಕೋಟಿ ನಷ್ಟ ಉಂಟಾಗಲಿದೆ.

ಹೊಸ ವರ್ಷಾಚರಣೆಗೆ ಮದ್ಯ ನಿಷೇಧ, ಸರ್ಕಾರದ ನಿಲುವು ಕೇಳಿದ ಕೋರ್ಟ್ಹೊಸ ವರ್ಷಾಚರಣೆಗೆ ಮದ್ಯ ನಿಷೇಧ, ಸರ್ಕಾರದ ನಿಲುವು ಕೇಳಿದ ಕೋರ್ಟ್

ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯ ಸೇವನೆ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರುವ ಡಿಸೆಂಬರ್ 31 ಹಾಗೂ 2018 ರ ಜನವರಿ 1 ರಂದು ಬೆಂಗಳೂರು ನಗರದಲ್ಲಿ ಮದ್ಯ ಮಾರಾಟ ನಿರ್ಬಂಧಿಸುವಂತೆ ಸೂಚನೆ ನೀಡಬೇಕು ಎಂದು ಪುರುಷ ರಕ್ಷಣಾ ವೇದಿಕೆ ಕಾರ್ಯಕರ್ತ ನಾಗೇಶ್ ಎಂಬುವವರು ಕರ್ನಾಟಕ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಡಿ.15 ರಂದು ಈ ಕುರಿತು ಆದೇಶ ಹೊರ ಬೀಳುವ ನಿರೀಕ್ಷೆ ಇದೆ.

If dry day on year end, 70 crore loss for Govt

ಒಂದು ವೇಳೆ ಹೈಕೋರ್ಟ್ ಎರಡು ದಿನಗಳ ಕಾಲ ಮದ್ಯ ಮಾರಾಟ ಬೇಡ ಎಂದು ಹೇಳಿದಲ್ಲಿ ಬೆಂಗಳೂರು ನಗರದಲ್ಲಿ ಸರಿಸುಮಾರು 80 ಲಕ್ಷ ಲೀಟರ್ ಮದ್ಯ ಮಾರಾಟಕ್ಕೆ ತಡೆ ಬೀಳಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ 70 ಕೋಟಿ ರು.ಗಳಷ್ಟು ಆದಾಯ ಖೋತಾ ಆಗುವ ಸಾದ್ಯತೆಗಳಿವೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಪ್ರತಿ ತಿಂಗಳು ರಾಜ್ಯದಲ್ಲಿ 45 ಲಕ್ಷ ಕಾರ್ಟೂನ್ ಬಾಕ್ಸ್‌ಗಳಷ್ಟು ಮದ್ಯ ಮಾರಾಟ ಆಗುತ್ತದೆ. ಒಂದು ಕಾರ್ಟೂನ್ ಬಾಕ್ಸ್‌ನಲ್ಲಿ 9 ಲೀಟರ್ ಮದ್ಯ ಇರುತ್ತದೆ. ಅಂದರೆ ತಿಂಗಳಿಗೆ 4.5 ಕೋಟಿ ಲೀಟರ್ ಮದ್ಯ ಮಾರಾಟ ಆಗುತ್ತದೆ. ಆ ಪೈಕಿ ಶೇ.೩೫ರಷ್ಟು ಮದ್ಯ ಬೆಂಗಳೂರು ನಗರವೊಂದರಲ್ಲೇ ಮಾರಾಟ ಆಗುತ್ತದೆ.

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮದ್ಯ ಮಾರಾಟ ಇರುತ್ತಾ, ಇಲ್ವಾ?ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮದ್ಯ ಮಾರಾಟ ಇರುತ್ತಾ, ಇಲ್ವಾ?

ಇದೇ ವೇಳೆ ಮಾಸಿಕ 1,418 ಕೋಟಿ ರು.ಗಳು ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಅಂದರೆ ದಿನಕ್ಕೆ 48 ಕೋಟಿ ರು. ಬರುತ್ತದೆ. ಆ ಪೈಕಿ ಶೇ.35ರಷ್ಟು ಆದಾಯ ಬೆಂಗಳೂರು ನಗರದಿಂದ ಸಂಗ್ರಹವಾಗುತ್ತದೆ. ಹೀಗಾಗಿ ದಿನದ 18 ಕೋಟಿ ರು.ಗಳ ಆದಾಯ ಬೆಂಗಳೂರು ನಗರದ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ದಕ್ಕುತ್ತದೆ.

ವರ್ಷದ ಕೊನೆಯ ದಿನ ಹಾಗೂ ಮೊದಲ ದಿನ ಮದ್ಯ ಮಾರಾಟದ ಪ್ರಮಾಣ ಸಾಮಾನ್ಯಕ್ಕಿಂತ ಒಂದೂವರೆಯಿಂದ ಎರಡು ಪಟ್ಟು ಹೆಚ್ಚಾಗಿರುತ್ತದೆ. ಅಂದರೆ ವರ್ಷಾಂತ್ಯಕ್ಕೆ ಬೆಂಗಳೂರು ನಗರವೊಂದರಲ್ಲೇ 80 ಲಕ್ಷದಿಂದ ಒಂದು ಕೋಟಿ ಲೀಟರ್ ಮದ್ಯ ಮಾರಾಟವಾಗುತ್ತದೆ. ಅದರಿಂದ 70 ಕೋಟಿ ರು.ಗಳ ಆದಾಯ ಸಂದಾಯವಾಗುತ್ತದೆ ಎನ್ನುತ್ತವೆ ಅಬಕಾರಿ ಇಲಾಖೆಯ ಮೂಲಗಳು.

ಹೀಗಾಗಿ ಬೆಂಗಳೂರಿನ ನಾಗರಿಕರು ಮಾತ್ರವಲ್ಲ, ರಾಜ್ಯ ಸರ್ಕಾರ ಕೂಡ ಶುಕ್ರವಾರ ಕರ್ನಾಟಕ ಹೈಕೋರ್ಟ್ ನೀಡುವ ಆದೇಶದತ್ತ ದೃಷ್ಟಿ ನೆಟ್ಟಿದೆ. ವಿಶೇಷವಾಗಿ ಅಬಕಾರಿ ಇಲಾಖೆ ಲಾಭ-ನಷ್ಟ ಲೆಕ್ಕಾಚಾರದಲ್ಲಿ ತೊಡಗಿದೆ.

English summary
If High court decides to ban liquor on year end, New year as well, it will cost 70 crore loss to Government exchequer.Karnataka High Court will give order on Public interest litigation filed by Purusha Rakshana vedike activist Nagesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X