ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಬಿಸಿ-ಬಿಸಿಯಾದ ಇಡ್ಲಿ-ವಡೆ, ದೋಸೆ ಬೆಲೆ 5 ರೂ. ಏರಿಕೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಅಕ್ಟೋಬರ್ 13 : ಇಡ್ಲಿ, ವಡೆ, ದೋಸೆ ತಿನ್ನಲು ಹೋಟೆಲ್‌ಗೆ ಹೋಗುವ ಮುನ್ನ ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳಿ. ಹೋಟೆಲ್ ಮಾಲೀಕರು ದರ ಏರಿಕೆಗೆ ಮುಂದಾಗಿದ್ದು, ಇಡ್ಲಿ-ವಡೆ ಮತ್ತು ದೋಸೆ ದರ ಸುಮಾರು 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

    ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ಉದ್ದಿನ ಬೇಳೆ, ತೊಗರಿ ಬೇಳೆ ಉತ್ಪಾದನೆ ಕುಸಿತಗೊಂಡಿದೆ. ಇದರ ಪರಿಣಾಮ ಬೆಲೆ ಏರಿಕೆಯಾಗಿದೆ. ಆದ್ದರಿಂದ ಇಡ್ಲಿ, ವಡೆ, ದೋಸೆಗಳ ಬೆಲೆಯನ್ನು ಸುಮಾರು 5 ರೂ. ವರೆಗೆ ಹೆಚ್ಚಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. [ಅಡುಗೆ ಮನೆಯಲ್ಲಿ ಅರಳಿದ ಘಮಘಮಿಸುವ ರವೆ ಇಡ್ಲಿ!]

    idli

    ಬೆಂಗಳೂರು ನಗರದ ಸಾಮಾನ್ಯ ಹೋಟೆಲ್‌ಗಳಲ್ಲಿ 2 ಇಡ್ಲಿ ಬೆಲೆ 20, ವಡೆ ಒಂದಕ್ಕೆ 15 ರಿಂದ 20 ರೂ. ದರವಿದೆ. 30 ರಿಂದ 35 ರೂ. ದರದಲ್ಲಿ ದೋಸೆ ದೊರೆಯುತ್ತದೆ. ಬೇರೆ-ಬೇರೆ ನಗರಗಳಲ್ಲಿ ದರದಲ್ಲಿ ಕೆಲವು ವ್ಯತ್ಯಾಸಗಳಿಗೆ. ಸದ್ಯ, ದರ ಏರಿಕೆಯಾದರೆ ಇಡ್ಲಿ, ವಡೆ, ದೋಸೆ ಬೆಲೆಗಳಲ್ಲಿ ಸುಮಾರು 5 ಹೆಚ್ಚಾಗಲಿದೆ. [ಇನ್ನು ಮುಂದೆ ಮಾ.30 ವಿಶ್ವ ಇಡ್ಲಿ ದಿನ]

    ಹೋಟೆಲ್ ಮಾಲೀಕರ ಸಂಘ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಹೋಟೆಲ್ ಮಾಲೀಕರಿಗೆ ಅವಕಾಶ ನೀಡಿದೆ. ಉತ್ತಮ ಗುಣಮಟ್ಟದ ಉದ್ದಿನ ಬೇಳೆ ಮತ್ತು ತೊಗರಿ ಬೇಳೆ ಬೆಲೆ ಕೆಜಿಗೆ 190 ರೂ. ಗಡಿದಾಟಿದೆ. ಆದ್ದರಿಂದ ದರ ಏರಿಕೆ ಮಾಡುತ್ತೇವೆ ಎಂಬುದು ಹೋಟೆಲ್ ಮಾಲೀಕರ ವಾದ. [ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!]

    5 ರೂ. ದರ ಏರಿಕೆ ಮಾಡುತ್ತೇವೆ : ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ಅನ್ನ ಕುಟೀರ ಹೋಟೆಲ್ ಮಾಲೀಕ ಮತ್ತು ಬೃಹತ್ ಬೆಂಗಳೂರು ಹೊಟೇಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಇಡ್ಲಿ, ದೋಸೆ, ವಡೆಗಳ ಬೆಲೆಗಳು ಮಾತ್ರ ಹೆಚ್ಚಾಗಲಿವೆ' ಎಂದು ಹೇಳಿದ್ದಾರೆ.

    'ದಕ್ಷಿಣ ಭಾರತದ ಉಪಹಾರಗಳಾದ ಇಡ್ಲಿ, ವಡೆ, ದೋಸೆಯನ್ನು ಹೆಚ್ಚಾಗಿ ಮಾಡುವ ಹೋಟೆಲ್‌ಗಳಿಗೆ ಉದ್ದಿನ ಬೇಳೆ ಮತ್ತು ತೊಗರಿ ಬೇಳೆ ಬೆಲೆಗಳ ಹೆಚ್ಚಳದಿಂದ ನಷ್ಟ ಉಂಟಾಗುತ್ತಿದೆ. ಆದ್ದರಿಂದ, ಬೆಲೆ ಹೆಚ್ಚಳ ಅನಿವಾರ್ಯವಾಗಿದೆ' ಎಂದು ಚಂದ್ರಶೇಖರ ಹೆಬ್ಬಾರ್ ತಿಳಿಸಿದ್ದಾರೆ. [ಬರೇ ಬೇಳೆ ಸಾರಲ್ಲ, ಬೇಳೆ ಕಾಳುಗಳ ಪೌಷ್ಟಿಕ ಸಾರು]

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The idli, vada and dosa will soon cost Rs 5 more. Failed monsoon have affected the production of urad dal (black gram) and tur dal (red gram). Hotels Association has given freedom to hotel owners to increase the rates of idli, vada and dosa.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more