ಬೆಂಗಳೂರಿನಲ್ಲಿ ಐಬಿಎಂ ಉದ್ಯೋಗಿ ಕೊಲೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 31 : ಐಬಿಎಂ ಉದ್ಯೋಗಿಯನ್ನು ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪಂತರಪಾಳ್ಯದಲ್ಲಿ ನಡೆದಿದೆ. ಬ್ಯಾಟರಾಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆಯಾದವರನ್ನು ಐಬಿಎಂ ಉದ್ಯೋಗಿ ಅಭಿಷೇಕ್ (24) ಎಂದು ಗುರುತಿಸಲಾಗಿದೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಸಮೀಪದಲ್ಲಿರುವ ಪಂತರಪಾಳ್ಯದಲ್ಲಿರುವ ಅಭಿಷೇಕ್ ಮನೆಯಲ್ಲಿ ಗುರುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. [8 ಜನರ ಬದುಕಿಗೆ ಆಶಾಕಿರಣವಾದ ಬೆಂಗಳೂರು ಯುವಕ]

byatarayanapura

ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಅಭಿಷೇಕ್ ಮನೆಗೆ ಬಂದ ಮೇಲೆ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಚಾಕುವಿನಿಂದ ಹಲವು ಬಾರಿ ಅಭಿಷೇಕ್‌ಗೆ ಚುಚ್ಚಿ ಕೊಲೆ ಮಾಡಲಾಗಿದೆ. ಮನೆಯ ದರೋಡೆಗೆ ಬಂದವರು ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. [ನಾಪತ್ತೆಯಾಗಿದ್ದ ಇನ್ಫಿ ಟೆಕ್ಕಿ ಗಣೇಶನ್ ಶವವಾಗಿ ಪತ್ತೆ]

8 ಬಾರಿ ಅಭಿಷೇಕ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಆಸ್ತಿ ವಿವಾದ ಅಥವ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬ್ಯಾಟರಾಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣದ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
24-year old IBM techie Abhishek murdered in Pantharapalya near Nayandahalli, Mysuru road, Bengaluru. Abhishek body found in his house on Thursday morning. Byatarayanapura police visited the spot.
Please Wait while comments are loading...