ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಎಸ್ ಅಧಿಕಾರಿಗಳು, ಜಡ್ಜ್ ಗಳ ಮನೆಗೇ ನೀರು ಕಟ್ ಮಾಡಿದ ಜಲಮಂಡಳಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್‌ 2: ಬಡವರು ವಾಸಿಸುವ ಮನೆಯ ನೀರಿನ ಬಿಲ್‌ ತುಂಬಿಲ್ಲ ಎಂಬ ಕಾರಣಕ್ಕೆ ನೀರಿನ ಸಂಪರ್ಕ ಕಡಿತ ಮಾಡಿರುವುದನ್ನು ನೋಡಿದ್ದೇವೆ. ಆದರೆ ರಾಜ್ಯವನ್ನೇ ನಡೆಸುವ ಐಎಎಸ್‌ ಅಧಿಕಾರಿಗಳು, ಹೈಕೋರ್ಟ್‌ನ ನ್ಯಾಯಾಧೀಶರು ಸೇರಿದಂಎತ ಸರ್ಕಾರದ ಬಹುಮುಖ್ಯ ಹುದ್ದೆಯಲ್ಲಿರುವ ಅಧಿಕಾರಿಗೇ ವಾಸಿಸುವ ಬಂಗಲೆಗಳಲ್ಲಿ ನೀರಿನ ಸಂಪರ್ಕ

ಕಡಿತಗೊಳಿಸಿರುವ ವಿಚಿತ್ರ ಸುದ್ದಿಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೋರಮಂಗಲದಲ್ಲಿರುವ ಸರ್ಕಾರಿ ವಸತಿ ಸಮುಚ್ಛಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕರ್ನಾಟಕ ಗೃಹಮಂಡಳಿ ನೀರಿನ ಬಿಲ್‌ ಪಾವತಿ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ನೀರು ಕಡಿತಗೊಳಿಸಿದೆ.

ಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿ

ಕೋರಮಂಗಲದಲ್ಲಿರುವ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ನಲ್ಲಿ ಸರ್ಕಾರಿ ವಸತಿ ಸಮುಚ್ಛಯದಲ್ಲಿ ತೊಂದರೆ ಉಂಟಾಗಿದೆ, ಕರ್ನಾಟಕ ಗೃಹಮಂಡಳಿ ಒಟ್ಟು 1.95 ಕೋಟಿ ರೂ ನೀರಿನ ಬಿಲ್‌ ಪಾವತಿ ಮಾಡದಿರುವ ಕಾರಣ ನೀರಿನ ಸರಬರಾಜು ಕಡಿತಗೊಳಿಸಲಾಗಿದೆ.

ಈ ವಸತಿಗೃಹಗಳ ಪೈಕಿ ಎ ಮತ್ತು ಬಿ ಶ್ರೇಣಿಯ ವಿವಿಧ ಇಲಾಖೆಯ ಅಧಿಕಾರಿಗಳು ವಾಸವಾಗಿದ್ದಾರೆ.ಪ್ರತಿ ಮನೆಗೆ ಮಾಸಿಕ 450 ರೂ. ನಿಗದಿಪಡಿಸಲಾಗಿದೆ. ಹಾಗಾಗಿ ಅಧಿಕಾರಿಗಳ ತಿಂಗಳ ಸಂಬಳದಲ್ಲಿ 450 ರೂ. ಕಡಿತಗೊಂಡು ಲೋಕೋಪಯೋಗಿ ಇಲಾಖೆ ಖಾತೆಗೆ ಜಮೆಯಾಗುತ್ತದೆ.

 ನ್ಯಾಷನಲ್‌ ಗೇಮ್ಸ್‌ ವಿಲೇಜ್‌ನಲ್ಲಿ 300 ವಸತಿ ಸಮುಚ್ಛಯಗಳಿವೆ

ನ್ಯಾಷನಲ್‌ ಗೇಮ್ಸ್‌ ವಿಲೇಜ್‌ನಲ್ಲಿ 300 ವಸತಿ ಸಮುಚ್ಛಯಗಳಿವೆ

ನ್ಯಾಷನಲ್‌ ಗೇಮ್ಸ್‌ ವಿಲೇಜ್‌ನಲ್ಲಿ ನ್ಯಾಯಾಧೀಶರ ವಸತಿ ಸಮುಚ್ಛಯ, ಕೃಷ್ಣ, ಶರಾವತಿ, ಮಲಪ್ರಭ, ಘಟಪ್ರಭ ಸೇರಿದಂತೆ 10ಕ್ಕೂ ಹೆಚ್ಚು ಸಮುಚ್ಛಯಗಳಿವೆ. ಪ್ರತಿ ಸಮುಚ್ಛಯದಲ್ಲೂ ಸುಮಾರು 300 ಕ್ಕೂ ಹೆಚ್ಚು ವಸತಿ ಗೃಹಗಳಿವೆ.

 ನೀರು ಕಡಿತಗೊಳಿಸಲು ಕಾರಣವೇನು?

ನೀರು ಕಡಿತಗೊಳಿಸಲು ಕಾರಣವೇನು?

ನ್ಯಾಷನಲ್‌ ವಿಲೇಜ್‌ ನಲ್ಲಿರುವ ವಸತಿ ಸಮುಚ್ಛಯಗಳನ್ನು ಕೆಎಚ್‌ಬಿ ನಿರ್ಮಾಣ ಮಾಡಿದ್ದು, ನೀರಿನ ಸಂಪರ್ಕವನ್ನು ಸಹ ತನ್ನ ಹೆಸರಲ್ಲೇ ಪಡೆದಿದೆ. ಕಟ್ಟಡಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ಕೃಷ್ಣ ಬ್ಲಾಕ್‌ನಲ್ಲಿ ಸುಮಾರು 280 ಹಾಗೂ ಶರಾವತಿ ಬ್ಲಾಕ್‌ನಲ್ಲಿ ಸುಮಾರು 220 ವಸತಿ ಗೃಹಗಳಿವೆ.

 ಖಾಸಗಿ ವ್ಯಕ್ತಿಗಳಿಂದ ಸಮಸ್ಯೆ

ಖಾಸಗಿ ವ್ಯಕ್ತಿಗಳಿಂದ ಸಮಸ್ಯೆ

ಈ ವಸತಿ ಸಮುಚ್ಚಯದಲ್ಲಿ ಕೆಲವು ಬ್ಲಾಕ್‌ಗಳಲ್ಲಿರುವ ವಸತಿ ಗೃಹಗಳನ್ನು ಖಾಸಗಿಯವರಿಗೆ ಕೆಎಚ್‌ಬಿ ಮಾರಾಟ ಮಾಡಿದೆ. ಈ ಖಾಸಗಿ ವ್ಯಕ್ತಿಗಳು ಕೆಎಚ್‌ಬಿಗೆ ನೀರಿನ ಬಿಲ್‌ ಪಾವತಿ ಮಾಡಿಲ್ಲ, ಹಾಗಾಗಿ ಜಲಮಂಡಳಿಗೆ ನೀರಿನ ಬಿಲ್‌ ಪಾವಿ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

 ನೀರಿನ ಸಮಸ್ಯೆ ಹೆಚ್ಚಳ

ನೀರಿನ ಸಮಸ್ಯೆ ಹೆಚ್ಚಳ

ಬಿಲ್‌ ಪಾವತಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನೀರನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ನೀರನ್ನು ಹರಿಸುವ ಪ್ರಮಾಣದಲ್ಲಿ ಕಡಿತ ಮಾಡಿದೆ. ಕಳೆದ ಒಂದು ತಿಂಗಳಿಂದ ಪ್ರತಿನಿತ್ಯ ಕೇವಲ 10ರಿಂದ 15 ನಿಮಿಷ ಮಾತ್ರ ನೀರು ಹರಿಸಲಾಗುತ್ತದೆ.ಇದರಿಂದ ನಿತ್ಯ ಬಳಕೆಗೆ ಅಗತ್ಯವಾದಷ್ಟು ನೀರು ಲಭ್ಯವಾಗುತ್ತಿಲ್ಲ.

English summary
Can any one believe that the government quarters where IAS officers and high court judged are living are running out of water supply for few days. Do you know why? Here is the story about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X