ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್‌ ವೇಗೆ ಕಾರು ನುಗ್ಗಿಸಿದ ವಾಯುಸೇನೆ ಅಧಿಕಾರಿ ಹೆಂಡತಿ

|
Google Oneindia Kannada News

ಬೆಂಗಳೂರು, ಸೆ. 29 : ಮದ್ಯದ ನಶೆ ಏನೂ ಬೇಕಾದರೂ ಮಾಡಿಸಬಹುದು ಎಂಬುದಕ್ಕೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಅವಘಡವೇ ಸಾಕ್ಷಿ. ಶನಿವಾರ ರಾತ್ರಿ ಫುಲ್‌ ಟೈಟ್‌ ಆಗಿದ್ದ ಮಹಿಳೆ ಒನ್‌ ವೇ ಯಲ್ಲಿ ವಾಹನ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣಳಾಗಿದ್ದಾಳೆ. ಮಹಿಳೆಯನ್ನು ಪ್ರಶ್ನಿಸಿದ ಪೊಲೀಸರು ಮತ್ತು ನಾಗರಿಕರ ಮೇಲೂ ದರ್ಪ ತೋರಿಸಿದ್ದಾಳೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಮಹಿಳೆ ಯಲಹಂಕದ ವಾಯುಸೇನೆ ಅಧಿಕಾರಿಯೊಬ್ಬರ ಪತ್ನಿ ಎನ್ನಲಾಗಿದೆ. ಶನಿವಾರ ರಾತ್ರಿ ಸೇಂಟ್‌ಮಾರ್ಕ್ಸ್ ರಸ್ತೆಯಲ್ಲಿರುವ ಕೆಫೆಗೆ ಸೋದರ ಸಂಬಂಧಿ ಜತೆ ತೆರಳಿದ್ದವರು ಮದ್ಯಪಾನ ಮಾಡಿದ್ದಾರೆ ನಂತರ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. (ಪೊಲೀಸರ ಮೇಲೆ ಹಲ್ಲೆ ಮಾಡಿದ ಮಹಿಳೆ ಬಂಧನ)

bangalore

ಮ್ಯೂಸಿಯಂ ರಸ್ತೆಯಿಂದ ಕುಂಬ್ಳೆ ವೃತ್ತದ ಕಡೆಗೆ ಕಾರಿನಲ್ಲಿ ಬರುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಸುಭಾಷ್‌ ಎದುರಿಗಿನಿಂದ ಬರುತ್ತಿದ್ದ ಕಾರು ಕಂಡು ದಿಗಿಲುಗೊಂಡಿದ್ದಾರೆ. ಅಪಘಾತ ತಪ್ಪಿಸುವ ಉದ್ದೇಶದಿಂದ ಹಠಾತ್ ಬ್ರೇಕ್‌ ಹಾಕಿದ್ದಾರೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ನಿಯಂತ್ರಣ ತಪ್ಪಿ ಸುಭಾಷ್‌ ಕಾರಿಗೆ ಡಿಕ್ಕಿಯಾಗಿವೆ.

ಸುಭಾಷ್‌ ಕಾರಿನ ಪಾನಮತ್ತ ಚಾಲಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ದಂಡ ಕಟ್ಟಿ ಕೊಡುವಂತೆ ಹೇಳಿದ್ದಾರೆ. ಇದಕ್ಕೆ ಬಗ್ಗದ ಪಾನಮತ್ತ ಮಹಿಳೆ ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಮಧ್ಯಪ್ರವೇಶಿಸಿದ ಪೊಲೀಸರ ಮೇಲೂ ಕೂಗಾಡಿದ್ದಾಳೆ. ನಂತರ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು ಮಹಿಳೆಯ ಮೇಲೆ ಪಾನಮತ್ತ ಚಾಲನೆ ಮತ್ತು ಒನ್‌ ವೇ ರಸ್ತೆಯಲ್ಲಿ ವಾಹನ ಚಲಾಯಿಸಿದ ಪ್ರಕರಣ ದಾಖಲಿಸಿಕೊಂಡು ಕಾರು ಜಪ್ತಿ ಮಾಡಿದ್ದಾರೆ.

English summary
The wife of an Air Force squadron leader and her nephew, who were allegedly drunk, violated one-way rule and fought with a motorist who questioned them,on St Mark’s Road on Saturday night. According to police, the woman and her nephew had come to a cafe on St Mark’s Road. While returning, they drove their car in the opposite direction, violating the one-way rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X