• search

ಟ್ರೋಲ್ ಗೂಂಡಾಗಿರಿ ವಿರುದ್ಧ ಸಿಡಿದೆದ್ದ ರೈ, ಸಿಂಹಗೆ ನೋಟಿಸ್

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಪ್ರತಾಪ್ ಸಿಂಹಾಗೆ ಲೀಗಲ್ ನೋಟೀಸ್ ಕಳುಹಿಸಿದ ಪ್ರಕಾಶ್ ರಾಜ್ ( ರೈ ) | Oneindia Kannada

    ಬೆಂಗಳೂರು, ನವೆಂಬರ್ 23: ತಕ್ಕುದಾದ ಇಮೇಜ್ ಗಳನ್ನು ಬಳಸಿಕೊಂಡು ಮತ್ತೊಬ್ಬರ ಮನಸ್ಸನ್ನು ನೋಯಿಸಿ ಸಖತ್ ಮಜಾ ಅನುಭವಿಸುವ ಟ್ರೋಲ್ ಮಹಾರಾಜರುಗಳ ವಿರುದ್ಧ ಧ್ವನಿ ಎತ್ತಲು ನಟ ಪ್ರಕಾಶ್ ರೈ ಸಿದ್ಧರಾಗಿದ್ದಾರೆ.

    ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಟ್ರೋಲ್ ಗೂಂಡಾಗಿರಿ ವಿರುದ್ಧ just asking ಹೆಸರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ, "ಯಾವುದೇ ಹೇಳಿಕೆಗಳನ್ನ ಕೊಟ್ಟರು ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದೆ. ಇದು ಒಂದು ರೀತಿಯ ಗೂಂಡಾ ಪ್ರವೃತ್ತಿ. ನನ್ನ ರಿಯಲ್ ಲೈಫ್ ನಲ್ಲೂ ಖಳನಾಯಕ ಅಂತ ಕರೆಯೋದಕ್ಕೆ ಶುರು ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಂಸದ ಪ್ರತಾಪ್ ಸಿಂಹ ಅವರಿಗೆ ನಾನು ಇಂದು ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಟ್ರೋಲ್ ಮಾಡಿ ನನ್ನ ವೈಯುಕ್ತಿಕ ಜೀವನದ ಬಗ್ಗೆ ಅಪಹಾಸ್ಯ ಮಾಡಿದ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದೇನೆ.

    ಈ ನೋಟಿಸ್ ಗೆ ಅವರು ಉತ್ತರಿಸದಿದ್ದರೆ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ, ನನ್ನ ಬಗ್ಗೆ ಪ್ರತಾಪ್ ನೀಡಿರುವ ಅವಹೇಳನಕಾರಿ ಹೇಳಿಕೆಗಳ ಸಂಬಂಧ ಅವರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ರೈ ಎಚ್ಚರಿಕೆ ನೀಡಿದರು.

    ಪ್ರಕಾಶ್ ರೈ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು

    ನೀನು ನಟನೇ ಅಲ್ಲ ತಮಿಳುನಾಡಿಗೆ ಹೋಗು ಅಂತಾರೆ. ಪದ್ಮಾವತಿ ಚಿತ್ರದ ನಟಿ ದೀಪಿಕಾಳ ಮೂಗು ಕತ್ತರಿಸ್ತೀವಿ ಅಂತಾರೆ ಅಂದ್ರೆ, ನಾವು ಎಲ್ಲಿಗೆ ತಲುಪಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

    ಮೂಗು ಕತ್ತರಿಸಬೇಕು, ತಲೆ ಕಡಿಯಬೇಕು ಅಂದರೆ ಅಸಹಿಷ್ಣುತೆ ಅಲ್ಲವೆ?: ರೈ

    Just asking ಹೆಸರಿನಲ್ಲಿ ನನ್ನ ಪ್ರತಿಭಟನೆ

    Just asking ಹೆಸರಿನಲ್ಲಿ ನನ್ನ ಪ್ರತಿಭಟನೆ

    ಟ್ರೋಲ್ ವಿರುದ್ಧ ನಾನು ಧ್ವನಿ ಎತ್ತಬೇಕು ಅಂದುಕೊಂಡಿದ್ದೇನೆ. Just asking ಹೆಸರಿನಲ್ಲಿ ನನ್ನ ಪ್ರತಿಭಟನೆ. ಇದು ಯಾವುದೇ ಪಕ್ಷದ ವಿರುದ್ಧ ಅಲ್ಲ, ಕೇವಲ ವ್ಯಕ್ತಿಯ ವಿರುದ್ಧ ಅಷ್ಟೇ. ನನ್ನ ಮಗನ ಸಾವನ್ನ ಅಣಕ ಮಾಡಿ ಟ್ರೋಲ್ ಮಾಡಿದರೆ ಹೇಗೆ ಸಹಿಸಿಕೊಳ್ಳಬೇಕು ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು.

    ಪ್ರತಾಪ್ ಸಿಂಹ ವಿರುದ್ಧ ಲೀಗಲ್ ನೋಟೀಸ್

    ಪ್ರತಾಪ್ ಸಿಂಹ ವಿರುದ್ಧ ಲೀಗಲ್ ನೋಟೀಸ್

    ಟ್ರೋಲ್ ವಿರುದ್ಧ Just asking ಹೆಸರಿನಲ್ಲಿ ನನ್ನ ಪ್ರತಿಭಟನೆ. ಹೀಗಾಗಿ ಮೊದಲು ಮೈಸೂರಿನ ಸಂಸದ ಪ್ರತಾಪ್ ಸಿಂಹ ವಿರುದ್ಧ ಲೀಗಲ್ ನೋಟೀಸ್ ಕಳುಹಿಸುತ್ತಿದ್ದೇನೆಎಂದರು.

    ಮೋದಿ ಸರ್ಕಾರವನ್ನು ಟೀಕಿಸಿದ್ದ ರೈ

    ಮೋದಿ ಸರ್ಕಾರವನ್ನು ಟೀಕಿಸಿದ್ದ ರೈ

    ಇತ್ತೀಚೆಗೆ ದೇಶದಲ್ಲಿ ಹಿಂದೂ ಭಯೋತ್ಪಾದನೆ, ಉತ್ತರ ಪ್ರದೇಶ ಮಕ್ಕಳ ಸಾವು, ಗೌರಿ ಲಂಕೇಶ್ ಹತ್ಯೆ ಹೀಗೆ ಸಾಕಷ್ಟು ಹಲವು ವಿಷಯಗಳಲ್ಲಿ ಮೋದಿ ಸರ್ಕಾರವನ್ನು ನಟ ಪ್ರಕಾಶ್ ರೈ ಟೀಕಿಸಿದ್ದರು. ಇದಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

    ಪ್ರಕಾಶ್ ರೈಗೆ ಸಿಂಹ ಕೊಟ್ಟ ತಿರುಗೇಟು

    ಪ್ರಕಾಶ್ ರೈಗೆ ಸಿಂಹ ಕೊಟ್ಟ ತಿರುಗೇಟು

    'ಕಾವೇರಿ ಬಗ್ಗೆ ಕೇಳಿದಾಗ ನಾನೊಬ್ಬ ನಟ ಅಂತ ಕೆಂಡಾಮಂಡಲವಾಗಿದ್ದವ ಕರ್ನಾಟಕದ ಕಾನೂನು ವ್ಯವಸ್ಥೆ ಬಗ್ಗೆ ಸಿಎಂ ಬಿಟ್ಟು ಮೋದಿಯನ್ನೇಕೆ ಎಳೆಯುತ್ತಿದ್ದೀಯಪ್ಪಾ ಖಳನಟ?!" ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಪ್ರಕಾಶ್ ರೈ ಹೇಳಿಕೆಗೆ ತಿರುಗೇಟು ನೀಡಿದ್ದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    I have sent a legal notice to Mr. Pratap Simha (BJP Mysuru MP), as a citizen of this country for the way he has trolled me which has disturbed my personal life. I am asking him to answer legally & if he doesn't, I will be taking criminal action against him said Actor Prakash Rai In Bengaluru press club on November 23.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more