ಬ್ರಿಗೇಡ್ ನಲ್ಲಿ ಭಾಗವಹಿಸ್ಬೇಡ ಅಂತ ಯಾರೂ ಹೇಳಿಲ್ಲ: ಈಶ್ವರಪ್ಪ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 11: ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ನಾನು ನೇರವಾಗಿ ಭಾಗವಹಿಸುತ್ತೇನೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ಶಾಸಕ ಭವನದಲ್ಲಿ ಇಂದು(ಫೆ.11) ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕುರಿತ ಸಭೆ ನಡೆಯಲಿದ್ದು ಈ ಸಭೆಯಲ್ಲಿ ನೇರವಾಗಿ ಭಾಗವಹಿಸುತ್ತೇನೆ, ಇದಕ್ಕೆ ಯಾರ ಅನುಮತಿಯ ಅವಶ್ಯಕತೆಯಿಲ್ಲ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷಕ್ಕೆ ತೊಂದರೆಯಾಗದಂತೆ ಸಂಘಟನೆಯಲ್ಲಿ ಪಾಲ್ಗೊಳ್ಳಲು ಹೇಳಿದ್ದಾರೆ ಎಂದರು.['ಧೈರ್ಯದಿಂದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸಿ']

I will directly involved in the Sangolli Rayanna brigade: Eshwarappa

ಹಾಗೆಯೇ ಆ ಸಮಯದಲ್ಲಿ ಇದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೂ ಸಹ ಇದಕ್ಕೆ ಸಮ್ಮಿತಿ ಸೂಚಿಸಿದ್ದಾರೆ. ಹೀಗಾಗಿ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವುದಾಗಿ ತಿಳಿಸಿದರು.

ನಿನ್ನೆ(ಶುಕ್ರವಾರ) ತಾನೇ ನಾನು ಮತ್ತು ಈಶ್ವರಪ್ಪ ಅಣ್ಣತಮ್ಮಂದಿರು, ಪಕ್ಷವನ್ನು ಸಂಘಟಿಸಿ ಮುಂದೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಎಂದು ಯಡಿಯೂರಪ್ಪನವರು ಹೇಳಿದ್ದರು. ಅದರೆ ಈಶ್ವರಪ್ಪ ನವರು ಬ್ರೆಗೇಡ್ ಅನ್ನು ಸಂಘಟಿಸಲು ಮುಂದಾಗಿದ್ದಾರೆ. ಇದು ಯಾವ ಬಿಕ್ಕಟ್ಟಿಗೆ ಸಿಲುಕಿಸುವುದೋ ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
I will directly involved in the Sangolli Rayanna brigade Meeting says Leader of Opposition in Legislative Council KS Eshwarappa in Bengaluru.
Please Wait while comments are loading...