ಇಂಗ್ಲಿಷ್ ಕಲಿಯಬೇಕು ಅಂತಿದ್ದಾರೆ ಜೈಲಿನಲ್ಲಿರುವ ಶಶಿಕಲಾ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 21: ರಾಜಕೀಯವಾಗಿ ಅಪ್ರಸ್ತುತವಾಗಿರುವ ಮತ್ತು ರಾಜಕಾರಣದ ಆಟದಲ್ಲಿ ಚಿತ್ ಆಗಿರುವ ಶಶಿಕಲಾ ನಟರಾಜನ್, ಇದೀಗ ಇಂಗ್ಲಿಷ್ ಮಾತನಾಡುವುದು ಹೇಗೆ ಎಂಬ ಪುಸ್ತಕ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ. ಅಕ್ರಮ ಆಸ್ತಿ ಹಗರಣದಲ್ಲಿ ನಾಲ್ಕು ವರ್ಷದ ಶಿಕ್ಷೆಯಾಗಿ ಬೆಂಗಳೂರಿನ ಜೈಲಿನಲ್ಲಿರುವ ಶಶಿಕಲಾ, ತನಗೆ ಇಂಗ್ಲಿಷ್ ಟ್ಯುಟರ್ ಒದಗಿಸಿ ಎಂದು ಜೈಲು ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಅಧಿಕಾರಿಗಳು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಯಾವುದೇ ಅಪರಾಧಿ ಇಂಥ ಕೋರ್ಸ್ ಮಾಡುವುದಕ್ಕೆ ಜೈಲಿನಲ್ಲಿ ಯಾವುದೇ ನಿಷೇಧವಿಲ್ಲ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಜಯಲಲಿತಾ ಆಗಲು ಶಶಿಕಲಾ ಪ್ರಯತ್ನಿಸಿದ ವಿಚಾರ ಎಲ್ಲರಿಗೂ ಗೊತ್ತಿದೆ. ಅದ್ಯಾವ ಮಟ್ಟಕ್ಕೆ ಅಂದರೆ, ಜಯಲಲಿತಾ ರೀತಿಯೇ ದಿರಿಸು ಧರಿಸುತ್ತಿದ್ದರು. ಹೇರ್ ಸ್ಟೈಲ್ ಬದಲಾಯಿಸಿದರು. ಗೆಲುವಿನ ಚಿಹ್ನೆ ಕೂಡ ಜಯಾರಂತೆಯೇ ತೋರಲಾರಂಭಿಸಿದರು.[ಶಶಿಕಲಾ ಕಿತ್ತೊಗೆದರೆ ಮಾತ್ರ ಪಕ್ಷಕ್ಕೆ ಬರ್ತೇನೆ - ಪನ್ನೀರ್ ಸೆಲ್ವಂ]

I want to learn English, Sasikala tells jail officials in Bengaluru

ಜಯಲಲಿತಾ ಸೊಗಸಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು. ಆ ಕಾರಣಕ್ಕೆ ದೆಹಲಿಯಲ್ಲಿ ಮಾಧ್ಯಮಗಳ ಜತೆಗೆ ಅವರ ಸಂಪರ್ಕ ಚೆನ್ನಾಗಿತ್ತು. ಒಳ್ಳೆ ಇಂಗ್ಲಿಷ್ ಮಾತನಾಡುವವರಿಗೆ ಮಾಧ್ಯಮಗಳು ದೆಹಲಿಯಲ್ಲಿ ಮಣೆ ಹಾಕುತ್ತವೆ. ಈಗ ಉದ್ಭವಿಸಿರುವ ಪ್ರಶ್ನೆ ಏನೆಂದರೆ ರಾಷ್ಟ್ರೀಯ ಮಾಧ್ಯಮಗಳನ್ನು ಸೆಳೆಯಲು ಶಶಿಕಲಾ ಪ್ರಯತ್ನಿಸುತ್ತಿದ್ದಾರಾ?

ಇಂಗ್ಲಿಷ್ ಕಲಿತರೆ ದೆಹಲಿಯಲ್ಲಿ ಮಾಧ್ಯಮಗಳು ಶಶಿಕಲಾ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆ ಎಂಬ ಆಲೋಚನೆ ಇರಬಹುದು. ಸದ್ಯಕ್ಕೆ ಆಕೆಗೆ ತಮಿಳು ಮಾತ್ರ ಓದಲು ಬರುತ್ತದೆ. ಆದ್ದರಿಂದ ತಮಿಳು ಪತ್ರಿಕೆಗಳ ಮೂಲಕ ಇಡೀ ದೇಶದ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Politically irrelevant and out of the thick of action, Sasikala Natarajan has decided to pick up a book and learn how to speak English. Lodged in the Bengaluru central jail after being sentenced to four years imprisonment in the disproportionate assets case, Sasikala has requested jail authorities to provide her an English tutor.
Please Wait while comments are loading...