ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನಗೆ ಮುಖ್ಯಮಂತ್ರಿಯಾಗೋಕೆ ಇಷ್ಟವಿರಲಿಲ್ಲ: ಕುಮಾರಸ್ವಾಮಿ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಗೆ ಸಿ ಎಂ ಆಗೋದು ಇಷ್ಟ ಇರ್ಲಿಲ್ವಂತೆ | Oneindia Kannada

ಬೆಂಗಳೂರು, ಜೂನ್ 11: "ನನಗೆ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್ಸಿಗರು ಮತ್ತು ದೆಹಲಿ ನಾಯಕರ ಒತ್ತಾಯದಿಂದಾಗಿ ನಾನು ಮುಖ್ಯಮಂತ್ರಿಯಾಗಿದ್ದೇನೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಎಂ ಸ್ಥಾನ ತಮಗೆ ಬಯಸಿ ಬಂದಿದ್ದಲ್ಲ' ಎಂದರು.

'ಚುನಾವಣೆಯ ನಂತರ ಯಾವ ಪಕ್ಷಕ್ಕೂ ಸಂಪೂರ್ಣ ಬಹುಮತ ಬಾರದಿದ್ದಾಗ, ಕಾಂಗರೆಸ್ ನಾಯಕರೇ ಮುಂದೆಬಂದು ಸರ್ಕಾರ ರಚನೆಗೆ ಬೇಷರತ್ ಬೆಂಬಲವನ್ನು ಜೆಡಿಎಸ್ ಗೆ ನೀಡಿದರು. ಆದರೆ ಮುಖ್ಯಮಂತ್ರಿಯಾಗಲು ನಾನು ಸಿದ್ಧನಿರಲಿಲ್ಲ. ಆದರೆ ನೀವೇ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು' ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಆಘಾತ ತಂದ ಎಚ್ಡಿಕೆ-ರಾಹುಲ್ ಗಾಂಧಿ ಮಾತುಕತೆ! ಕಾಂಗ್ರೆಸ್ ನಾಯಕರಿಗೆ ಆಘಾತ ತಂದ ಎಚ್ಡಿಕೆ-ರಾಹುಲ್ ಗಾಂಧಿ ಮಾತುಕತೆ!

"ನನ್ನ ಮಗನಿಗೆ ಆರೋಗ್ಯ ಸರಿಯಿಲ್ಲ. ಆತ ಮುಖ್ಯಮಂತ್ರಿಯಾಗುವುದು ಬೇಡ ಎಂದು ತಂದೆಯವರಾದ ದೇವೇಗೌಡರೂ ಹೇಳಿದ್ದರು. ಆದರೆ ದೆಹಲಿ ನಾಯಕರೂ ನೀವೇ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಡ ಹೇರಿದ್ದರಿಂದ ಮಣಿದು ಮುಖ್ಯಮಂತ್ರಿಯಾಗಿದ್ದೇನೆ" ಎಂದು ಅವರು ಹೇಳಿದರು.

I did not want to be CM: HD Kumaraswamy in Bengaluru

ಈ ಮೊದಲು ಸಹ ಹಲವು ಬಾರಿ ಇದೇ ಮಾತನ್ನು ಎಚ್ ಡಿ ಕುಮಾರಸ್ವಾಮಿ ಪುನರುಚ್ಛರಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
Karnataka chief minister HD Kumaraswamy told, he did not want to be chief minister, But Congress leaders forced him to be so.HDK told to press in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X