ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಲಾಲ್‌ ಬಾಗ್‌ ರೋಸ್‌ ಗಾರ್ಡನ್‌

By Nayana
|
Google Oneindia Kannada News

ಬೆಂಗಳೂರು, ಜೂನ್ 23: ಲಾಲ್‌ ಬಾಗ್‌ನಲ್ಲಿ ಪ್ರತಿ ವರ್ಷ ಆಗಸ್ಟ್‌ 15 ಸ್ವಾತಂತ್ರ್ಯಾ ದಿನಾಚರಣೆ ಅಂಗವಾಗಿ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇದೀಗ ಪುಷ್ಪ ಪ್ರದರ್ಶನಕ್ಕೆ ಲಾಲ್‌ ಬಾಗ್‌ ಸಜ್ಜಾಗುತ್ತಿದೆ. ಜತೆಗೆ ಅಲ್ಲಿರುವ ರೋಸ್‌ ಗಾರ್ಡ್‌ನ್‌ ಕೂಡ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲಾಗುತ್ತಿದೆ.

ಲಾಲ್‌ಬಾಗ್‌ನಲ್ಲಿ ಚಿಟ್ಟೆ ಪಾರ್ಕ್: ಅಳಿವಿನಂಚಿನ ಚಿಟ್ಟೆಗಳನ್ನು ಉಳಿಸಲು ಕ್ರಮಲಾಲ್‌ಬಾಗ್‌ನಲ್ಲಿ ಚಿಟ್ಟೆ ಪಾರ್ಕ್: ಅಳಿವಿನಂಚಿನ ಚಿಟ್ಟೆಗಳನ್ನು ಉಳಿಸಲು ಕ್ರಮ

ಸುಮಾರು ಮೂರುವರೆ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಗುಲಾಬಿ ಗಿಡಗಳನ್ನು ಏಕ ಕಾಲಕ್ಕೆ ಕತ್ತರಿಸಲಾಯಿತು. ಎಲ್ಲ ಗಿಡಗಳನ್ನು ಒಂದೇ ದಿನ ಕತ್ತರಿಸಿ ತಕ್ಕ ಆರೈಕೆ ಮಾಡಿದರೆ ಎಲ್ಲವೂ ಒಂದೇ ಅಳತೆಯಲ್ಲಿ ಬೆಳೆದು, ಏಕಕಾಲಕ್ಕೆ ಹೂವು ಬಿಡಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ ಜಗದೀಶ್ ಮಾಹಿತಿ ನೀಡಿದ್ದಾರೆ.

ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ

I-Day celebration: Rose garden trimming in Lalbagh

ಲಾಲ್‌ಬಾಗ್‌ನ ಗುಲಾಬಿ ವನದಲ್ಲಿ ಹಳದಿ, ಕೆಂಪು, ನೇರಳೆ, ಬಿಳಿ ಹೀಗೆ ವಿವಿಧ ಬಣ್ಣದ ವಿವಿಧ ಆಕಾರದ ಸುಮಾರು 1500 ಕ್ಕೂ ಹೆಚ್ಚು ಗುಲಾಬಿ ಗಿಡಗಳಿವೆ. ಇದೇ ಮೊದಲ ಬಾರಿಗೆ ಗಾಂಧೀಜಿಯವರು ಮೊದಲ ಬಾರಿಗೆ ಸತ್ಯಾಗ್ರಹ ಆರಂಭಿಸಿದ ಮದ್ದೂರಿನ ಸತ್ಯಾಗ್ರಹ ಕಟ್ಟಡದ ಮಾದರಿಯನ್ನು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಮಳೆ ಬರುವ ಸಾಧ್ಯತೆ ಇದ್ದರೆ ಹೆಚ್ಚು ಹಣದಲ್ಲಿ ಬೇರೆ ಯಾವುದಾದರೂ ಮಾದರಿಯನ್ನು ನಿರ್ಮಿಸಲಾಗುವುದು ಎಂದು ಮೈಸೂರು ಉದ್ಯಾನ ಕಲಾಸಂಘ ಸದಸ್ಯರು ತಿಳಿಸಿದ್ದಾರೆ.

English summary
Department of horticulture has resumed preparations for Independence Day celebration. As part of flora exhibition, rose garden trimming was done on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X