ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ, ಸ್ವಾಮಿ ನಿತ್ಯಾನಂದ

|
Google Oneindia Kannada News

Recommended Video

ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ, ಸ್ವಾಮಿ ನಿತ್ಯಾನಂದ | Oneindia Kannada

ಬೆಂಗಳೂರು, ಸೆ 20: ಮಾಡರ್ನ್ ಸ್ವಾಮೀಜಿ ಎಂದೇ ಹೆಸರಾದ ಬಿಡದಿಯ ಸ್ವಾಮಿ ನಿತ್ಯಾನಂದ, ಹೊಸ ಆವಿಷ್ಕಾರದೊಂದಿಗೆ ಮತ್ತೆ ಸುದ್ದಿಯಾಗಿದ್ದಾರೆ. ತನ್ನ ಭಕ್ತರಿಗೆ ನೀಡಿದ ಪ್ರವಚನದಲ್ಲಿ ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ ಎಂದಿದ್ದಾರೆ. ಅವರ ಪ್ರವಚನದ ವಿಡಿಯೋ ಸದ್ಯ ವೈರಲ್ ಆಗಿದೆ.

ಹಸು, ಮಂಗ, ಹುಲಿ ಮುಂತಾದ ಪ್ರಾಣಿಗಳ ಅತಿಂದ್ರೀಯ ಶಕ್ತಿಗಳನ್ನು ಪ್ರಗತಿಗೊಳಿಸುವ ಮೂಲಕ, ವೈಜ್ಞಾನಿಕವಾಗಿ ಇದನ್ನು ರುಜುವಾತು ಪಡಿಸುತ್ತೇನೆ, ಇದನ್ನು ಒಂದು ದಿನದ ಹಿಂದೆ ಪರೀಕ್ಷೆ ಮಾಡಲಾಗಿದ್ದು, ಇದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.

ನಿತ್ಯಾನಂದ ಸ್ವಾಮಿ ಮಾಜಿ ಕಾರ್‌ ಚಾಲಕ ಲೆನಿನ್‌ ಕೋರ್ಟ್‌ಗೆ ಹಾಜರುನಿತ್ಯಾನಂದ ಸ್ವಾಮಿ ಮಾಜಿ ಕಾರ್‌ ಚಾಲಕ ಲೆನಿನ್‌ ಕೋರ್ಟ್‌ಗೆ ಹಾಜರು

ಮಂಗ ಮತ್ತು ಇತರ ಪ್ರಾಣಿಗಳು ಮನುಷ್ಯರಂತೆ ಅಂಗಾಂಗಳನ್ನು ಹೊಂದಿರುವುದಿಲ್ಲ, ಹಾಗಾಗಿ ಸೂಪರ್ ಕಾನ್ಸಿಯಸ್ ಮೂಲಕ ಪ್ರಗತಿಯನ್ನು ಸಾಧಿಸಿ, ಪ್ರಾಣಿಗಳೂ ಭಾಷೆಯನ್ನು ಮಾತನಾಡುವಂತೆ ಮಾಡಬಹುದು. ಇನ್ನೊಂದು ವರ್ಷದಲ್ಲಿ ಇದನ್ನು ಸಾಧಿಸಿ ತೋರಿಸುತ್ತೇನೆ ಎಂದು ನಿತ್ಯಾನಂದ ಹೇಳಿದ್ದಾರೆ.

Swami Nithyananda: I can make cows speak in Tamil and Sanskrit

ಇದಕ್ಕೆ ಸಂಬಂಧಪಟ್ಟ ಸಾಫ್ಟ್ ವೇರ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದ್ದು, ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ನಾನು ಹೇಳಿದ್ದು ರೆಕಾರ್ಡ್ ಆಗಲಿ, ಇನ್ನೊಂದು ವರ್ಷದಲ್ಲಿ ಜಗತ್ತಿಗೆ ಸಾಫ್ಟ್ ವೇರ್ ಅನ್ನು ಪರಿಚಯಿಸುತ್ತೇನೆ ಎಂದು ಭಕ್ತರ ಸಮ್ಮುಖದಲ್ಲಿ ಘೋಷಿಸಿದ್ದಾರೆ.

ಮಧುರೈ ಅಧೀನಂ ಪೀಠ ಪ್ರವೇಶಿಸದಂತೆ ನಿತ್ಯಾನಂದ ಸ್ವಾಮೀಜಿಗೆ ತಡೆ ಮಧುರೈ ಅಧೀನಂ ಪೀಠ ಪ್ರವೇಶಿಸದಂತೆ ನಿತ್ಯಾನಂದ ಸ್ವಾಮೀಜಿಗೆ ತಡೆ

ಕೋತಿ, ಸಿಂಹ, ಹುಲಿಗಳಿಗೂ ಭಾಷಾ, ಧ್ವನಿಶಾಸ್ತ್ರವನ್ನು ಕಲಿಯುವ ತಂತ್ರಜ್ಞಾನವನ್ನೂ ಅಭಿವೃದ್ದಿ ಪಡಿಸಲಿದ್ದೇನೆ ಎಂದಿರುವ ನಿತ್ಯಾನಂದ, ಸದ್ಯ ಹಸು ಮತ್ತು ಕೋಣಗಳು ತಮಿಳು ಮತ್ತು ಸಂಸ್ಕೃತ ಸುಲಲಿತವಾಗಿ ಮಾತನಾಡುವಂತೆ ಮಾಡುತ್ತೇನೆ ಎಂದಿದ್ದಾರೆ.

English summary
I can make cows speak in Tamil and Sanskrit, claims controversial godman Swami Nithyananda. Monkeys and other few animals which do not have many of the internal organs like us, by initiating them into superconscious breakthrough, they will grow these organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X