ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ಅಪರಾಧಿ ಹಿಡಿಯಲು ಬಂದಿದೆ ಹೊಸ ಸಾಫ್ಟ್‌ವೇರ್

By Prasad
|
Google Oneindia Kannada News

ಬೆಂಗಳೂರು, ಮಾ. 9 : ಸೈಬರ್ ಅಪರಾಧ ದೇಶದಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕೆಫೆಗಳ ನಿರ್ವಹಣೆಗಾಗಿ ಪೊಲೀಸರು ರಾಜ್ಯದಾದ್ಯಂತ ಹಲವಾರು ಕಟ್ಟುನಿಟ್ಟಿನ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಪೊಲೀಸರ ಕಳಕಳಿಗೆ ಪೂರಕವಾಗಿ ಐಡಿಯಾಕ್ಟ್ಸ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ 'ಐಕೆಫೆ ಮ್ಯಾನೇಜರ್' ಎಂಬ ಹೊಸ ಇಂಟರ್‌ನೆಟ್ ಕೆಫೆ ನಿರ್ವಹಣಾ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ.

ಸೈಬರ್ ಕೆಫೆಯವರು ಎಂತಹ ಭದ್ರತಾ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಐಡಿಯಾಕ್ಟ್ಸ್ ಇನ್ನೋವೇಶನ್ಸ್ ಅರಿವು ಮೂಡಿಸಲಿದೆ. ಇದರ ಮೊದಲ ಹಂತವಾಗಿ ನಗರದಾದ್ಯಂತ ಸೈಬರ್ ಕೇಂದ್ರಗಳಲ್ಲಿ ಅರಿವು ಮೂಡಿಸುವುದು ಪ್ರಮುಖ ಉದ್ದೇಶ.

ಮಾಹಿತಿ ತಂತ್ರಜ್ಞಾನ (ಸೈಬರ್ ಕೆಫೆಗಳಿಗೆ ಮಾರ್ಗದರ್ಶನ) ನಿಯಮ 2011ರ ಪ್ರಕಾರ ಸೈಬರ್ ಕೆಫೆ ಮಾಲೀಕರು ಸೈಬರ್ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿ ಕನಿಷ್ಠ ಒಂದು ವರ್ಷ ಕಾಲ ಸಂಗ್ರಹಿಸಿ ಇಡಬೇಕಾಗುತ್ತದೆ. ಇಂತಹ ಮಾಹಿತಿಯನ್ನು ಸ್ಥಳೀಯ ಪೊಲೀಸರೊಂದಿಗೆ ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಹಂಚಿಕೊಳ್ಳುತ್ತಿರಬೇಕು. ಆದರೆ ಬಳಕೆದಾರರ ದೊಡ್ಡ ಪಟ್ಟಿಯನ್ನು ದೀರ್ಘ ಕಾಲ ಇಟ್ಟುಕೊಳ್ಳುವುದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಸೈಬರ್ ಮಾಲೀಕರು ತಪ್ಪು ಮಾಹಿತಿ ನೀಡುವ ಸಾಧ್ಯತೆ ಇರುತ್ತದೆ. ಸೈಬರ್ ಮಾಲೀಕರಿಗೆ ತಮ್ಮ ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸೈಬರ್ ಭದ್ರತಾ ವ್ಯವಸ್ಥೆಯನ್ನು ಐಕೆಫೆ ಮ್ಯಾನೇಜರ್ ಹೆಸರಲ್ಲಿ ಅಭಿವೃದ್ಧಿ ಪಡಿಸಿದೆ. [ಸೈಬರ್ ಕ್ರೈಂ ಪಟ್ಟಿಯಲ್ಲಿ ಕರ್ನಾಟಕ ಟಾಪ್ 3]

i-Cafe Manager, new software to nab cyber criminals

ಇದುವರೆಗೆ ಸೈಬರ್ ಅಪರಾಧ ಎಸಗುವವರು ವಿಚಾರಣಾಧಿಕಾರಿಗಳನ್ನು ತಪ್ಪು ದಾರಿಗೆಳೆಯುವ ರೀತಿಯಲ್ಲಿ ತಪ್ಪು ಮಾಹಿತಿ ಒದಗಿಸಿ ತಮ್ಮ ಅಪರಾಧ ಕೃತ್ಯ ಎಸಗುತ್ತಿದ್ದರು. ಅತ್ಯಾಧುನಿಕ ತಾಂತ್ರಿಕತೆಯ ಅಲಭ್ಯತೆಯ ಲಾಭ ಪಡೆದುಕೊಂಡ ಅಪರಾಧಿಗಳು ಇಂತಹ ಕೃತ್ಯ ಎಸಗುತ್ತಿದ್ದರು. ತನಿಖಾಧಿಕಾರಿಗಳಿಗೆ ಇದು ಬಹಳ ದೊಡ್ಡ ತಲೆನೋವಿನ ಸಂಗತಿಯಾಗಿತ್ತು. ಇಂದು ಬ್ಯಾಂಕಿಂಗ್, ಶಾಪಿಂಗ್ ಸಹಿತ ಜೀವನದ ಹೆಚ್ಚಿನ ಚಟುವಟಿಕೆಗಳು ಆನ್‌ಲೈನ್ ಆಗಿ ಬದಲಾಗಿವೆ. ಇಂತಹ ವಹಿವಾಟು ಮಾಡುವಾಗ ಸೈಬರ್ ಭದ್ರತೆ ಎಂಬುದು ಬಹಳ ದೊಡ್ಡ ಸವಾಲಾಗಿ ಕಂಡುಬಂದಿದೆ. ಈ ಎಲ್ಲಾ ಸವಾಲುಗಳಿಗೆ ಪರಿಹಾರ ರೂಪದಲ್ಲಿ ಬಂದಿದೆ ಐಕೆಫೆ ಮ್ಯಾನೇಜರ್. ಈ ಸಾಫ್ಟ್‌ವೇರ್‌ನ ಮಹತ್ವ, ಕಾರ್ಯಶೈಲಿಯನ್ನು ತಿಳಿಸುವ ರಾಜ್ಯವ್ಯಾಪಿ ತಿಳಿವಳಿಕಾ ಕಾರ್ಯ ಇದೀಗ ಆರಂಭವಾಗಿದೆ.

ಐಡಿಯಾಕ್ಟ್ಸ್ ಇನ್ನೋವೇಶನ್ಸ್ ಪ್ರೈ.ಲಿ. ಸೈಬರ್ ಭದ್ರತೆ ತಂತ್ರಜ್ಞಾನ ರೂಪಿಸುವ ದೇಶದ ಪ್ರಮುಖ ಕಂಪನಿಯಾಗಿದ್ದು ಐಕೆಫೆ ಮ್ಯಾನೇಜರ್ ಒಂದು ಅಭೂತಪೂರ್ವ ತಂತ್ರಜ್ಞಾನ ಎಂಬುದು ತಜ್ಞರ ಅಭಿಪ್ರಾಯ. ಸೈಬರ್ ಕೆಫೆ ಮಾಲೀಕರಿಗೆ ತಮ್ಮ ಗ್ರಾಹಕರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವಲ್ಲಿ ಇದು ಬಹಳ ದೊಡ್ಡ ಪಾತ್ರ ನಿರ್ವಹಿಸುತ್ತದೆ. ಇದು ಗ್ರಾಹಕರ ಎಲ್ಲ ಮಾಹಿತಿಗಳನ್ನು ಮತ್ತು ಬ್ರೌಸರ್ ಡಾಟಾವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದರ ಜತೆಗೆ ತನಿಖೆಗೆ ಅಗತ್ಯ ಇದ್ದಾಗಲೆಲ್ಲಾ ಅದನ್ನು ಒದಗಿಸುತ್ತದೆ. ಅಪರಾಧಿಗಳನ್ನು ಸುಲಭವಾಗಿ ಪತ್ತೆಹಚ್ಚಿ, ಸೈಬರ್ ಅಪರಾಧವನ್ನು ನಿಯಂತ್ರಿಸುವಲ್ಲಿ ಇದು ಪೊಲೀಸರಿಗೆ ಬಹಳಮಟ್ಟಿಗೆ ನೆರವು ನೀಡುತ್ತದೆ.

ಪೊಲೀಸರ ಶ್ಲಾಘನೆ : ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಬಹಳ ದೊಡ್ಡ ತಲೆನೋವಿನ ಸಂಗತಿಯಾಗಿತ್ತು. ಇದೀಗ ಐಕೆಫೆ ಮ್ಯಾನೇಜರ್‌ನಿಂದಾಗಿ ಪೊಲೀಸರು ಅಪರಾಧಿಗಳನ್ನು ಸುಲಭವಾಗಿ ಪತ್ತೆ ಹಚ್ಚುತ್ತಿದ್ದಾರೆ. ದೇಶದಾದ್ಯಂತ 50ಕ್ಕೂ ಅಧಿಕ ನಗರಗಳಲ್ಲಿ ಪೊಲೀಸರ ಮುಂದೆ ಹೊಸ ತಂತ್ರಜ್ಞಾನವನ್ನು ಪ್ರದರ್ಶಿಸಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಐಡಿಯಾಕ್ಟ್ಸ್ ಇನ್ನೋವೇಶನ್ಸ್‌ನ ತಂತ್ರಜ್ಞಾನದ ನೆರವಿನಿಂದ ಪೊಲೀಸರು ಈಗಾಗಲೇ ಹಲವಾರು ಮಹತ್ವದ ಸೈಬರ್ ಅಪರಾಧಗಳನ್ನು ಭೇದಿಸಿದ್ದಾರೆ. [ಹ್ಯಾಕರ್ ಗಳಿಗೆ ಬೆಂಗಳೂರು ಉತ್ತಮ ನಗರವಂತೆ! ]

ಅಪರಾಧಕ್ಕೆ ಕಡಿವಾಣ : ಐಕೆಫೆ ಮ್ಯಾನೇಜರ್ ಬಳಕೆದಾರರು ಮತ್ತು ಪರಿಣಿತರ ಪ್ರಕಾರ, ಈ ಹೊಸ ತಂತ್ರಜ್ಞಾನದಿಂದ ಸೈಬರ್ ಅಪರಾಧಗಳು ಬಹುಮಟ್ಟಿಗೆ ಕೊನೆಗೊಳ್ಳುವುದು ನಿಶ್ಚಿತ. ಕರ್ನಾಟಕದಲ್ಲಿ ಐಡಿಯಾಕ್ಟ್ಸ್ ಇನ್ನೋವೇಶನ್ಸ್ ಕಂಪನಿ ಈಗಾಗಲೇ ಹಲವಾರು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಐಕೆಫೆ ಮ್ಯಾನೇಜರ್‌ನ ಕಾರ್ಯವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದೆ. ಜನತೆಗೆ ಇನ್ನಷ್ಟು ಸಮಗ್ರವಾಗಿ ಮಾಹಿತಿ ಒದಗಿಸಬೇಕು ಎಂಬ ದೃಷ್ಟಿಕೋನದೊಂದಿಗೆ ಕಂಪನಿ ರಾಜ್ಯದಾದ್ಯಂತ ಇದೀಗ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು ಅರಿವು ಮೂಡಿಸಲಿದೆ. ಹೆಚ್ಚಿನ ಮಾಹಿತಿಗೆ ಟೋನಿ ಥಾಮಸ್ - 9886425095.

English summary
Ideacts innovations pvt ltd from Bengaluru has developed a new software i-cafe manager to nab the cyber criminals. Cyber cafes can install this software to keep the track of all the browsers for one year. The company is creating awareness about the new software.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X