ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ವಿರುದ್ಧ ದೇಶದ್ರೋಹದ ದೂರು ದಾಖಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ, ಕ್ಷಮೆಯಾಚಿಸಲ್ಲ ಎಂದಿದ್ದಾರೆ. ರಮ್ಯಾ ಪರವಾಗಿ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಪತ್ರಕರ್ತೆ ಬರ್ಖಾ ದತ್ ಕೂಡಾ ರಮ್ಯಾ ಪರ ಟ್ವೀಟ್ ಮಾಡಿದ್ದಾರೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಅಷ್ಟೇ, ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ ಎಂದು ರಮ್ಯಾ ಅವರು ಎಎನ್ ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ' ಎಂಬ ಹೇಳಿಕೆಯನ್ನು ಮಾಜಿ ಸಂಸದೆ ರಮ್ಯಾ ಆಕ್ಷೇಪಿಸಿದ್ದು, ಪಾಕಿಸ್ತಾನವನ್ನು ಹೊಗಳಿದ್ದಾರೆ. ನಾನು ಮೋದಿ ಅವರನ್ನು ದ್ವೇಷಿಸುವುದಿಲ್ಲ. ಅವರ ಕೆಲವು ನಿಲುವುಗಳಿಗೆ ನನ್ನ ಸಹಮತವಿಲ್ಲ ಎಂದು ರಮ್ಯಾ ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ]

ಆದರೆ, ರಮ್ಯಾ ಅವರ ಹೇಳಿಕೆ ಖಂಡಿಸಿ ಬಿಜೆಪಿ ಬೆಂಬಲಿತ ಸಂಘಟನೆಗಳು ವಿವಿಧೆಡೆ ಪ್ರತಿಭಟನೆ ನಡೆಸಿದ್ದು ವರದಿಯಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಳಿಕ ರಮ್ಯಾ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಟ್ವಿಟ್ಟ ಮೂಲಕ ಮಾತ್ರ ಉತ್ತರ ನೀಡುತ್ತಿದ್ದಾರೆ.ಟ್ವೀಟ್ ಗಳ ಸಂಗ್ರಹ ಮುಂದಿದೆ ಓದಿ...

 ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ,

ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ,

ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ, ಕ್ಷಮೆಯಾಚಿಸಲ್ಲ ಎಂದಿದ್ದಾರೆ. ರಮ್ಯಾ ಪರವಾಗಿ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಪತ್ರಕರ್ತೆ ಬರ್ಖಾ ದತ್ ಕೂಡಾ ರಮ್ಯಾ ಪರ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು ಎಂದು ರಮ್ಯಾ ಹೇಳಿದ್ದರು.

ಬರ್ಖಾ ಅವರು ರಮ್ಯಾ ಪರ ಟ್ವೀಟ್ ಮಾಡಿ

ಪತ್ರಕರ್ತೆ ಬರ್ಖಾ ಅವರು ರಮ್ಯಾ ಪರ ಟ್ವೀಟ್ ಮಾಡಿ ದೇಶದ್ರೋಹದ ಆರೋಪ ಹೊರೆಸುವ ಮುನ್ನ ಯೋಚಿಸುವುದು ಒಳಿತು, ಕಾನೂನನ್ನು ದುರುಪಯೋಗ ಪಡಿಸಿಕೊಂಡು ಅಪಹಾಸ್ಯಕ್ಕೀಡಾಗಬಾರದು ಎಂದಿದ್ದಾರೆ. ಟ್ವೀಟ್ ಗಳ ಸಂಗ್ರಹ ಮುಂದಿದೆ ಓದಿ...

ಇದೆಲ್ಲ ಆರೆಸ್ಸೆಸ್ ಬೆಂಬಲಿತರ ಕೃತ್ಯ

ಇದೆಲ್ಲ ಆರೆಸ್ಸೆಸ್ ಬೆಂಬಲಿತರ ಕೃತ್ಯ, ಪ್ರತಿ ಹೇಳಿಕೆಗಳಿಗೂ ದೇಶದ್ರೋಹದ ಲೇಬಲ್ ಹಚ್ಚುತ್ತಿದ್ದಾರೆ ಹೇಗೆ?

#WeStandWithRamya ಟ್ರೆಂಡ್ ಮಾಡುತ್ತಿರುವ ಫ್ಯಾನ್ಸ್

#WeStandWithRamya ಟ್ರೆಂಡ್ ಮಾಡುತ್ತಿರುವ ರಮ್ಯಾ ಫ್ಯಾನ್ಸ್

ಇದು ಪ್ರಚಾರ ತಂತ್ರ ಅಷ್ಟೆ ಎಂದ ಟ್ವೀಟ್ ಗಳು

ಸಿನಿಮಾದಿಂದ ರಾಜಕೀಯಕ್ಕೆ ಬಂದು ಪ್ರಚಾರ ಗಿಟ್ಟಿಸಿಕೊಳ್ಳುವ ಮಂದಿ

ಇದಕ್ಕೆ ಉದಾಸೀನತೆಯೇ ಮದ್ದು, ದೇಶದ್ರೋಹದ ಆರೋಪ ಏಕೆ?

ರಮ್ಯಾ ಅವರ ಹೇಳಿಕೆಗೆ ಉದಾಸೀನತೆಯೇ ಮದ್ದು, ದೇಶದ್ರೋಹದ ಆರೋಪ ಏಕೆ?

ದಾನೀಶ್ ಸೇಠ್ ಅವರು ಟ್ವೀಟ್ ಮಾಡಿದ್ದು ಹೀಗೆ

ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಂದಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಾರೆ, ಸಂತೋಷದ ಜೀವನ ನಡೆಸಿ, ದ್ವೇಷ ಬಿಡಿ

ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ನಲ್ಲಿ ನಂ. 1

ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ನಲ್ಲಿ ನಂ. 1 ಆಗಿದ್ದು ಹೀಗೆಲ್ಲ ಗಲಾಟೆಯಾಗುತ್ತಿದೆಯೇ? ಎಂಬ ತಮಾಷೆ ಟ್ವೀಟ್ ಇದೆ.

ಈ ರೀತಿ ಕೇಸ್ ಹಾಕುತ್ತಾರೆ ಎಂದರೆ ಭಯವಾಗುತ್ತೆ

ಈ ರೀತಿ ಹೇಳಿಕೆ ನೀಡಿದ್ದಕ್ಕೆಲ್ಲ ಕೇಸ್ ಹಾಕುತ್ತಾರೆ ಎಂದರೆ ಭಯವಾಗುತ್ತೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Congress MP Ramya faces sedition heat. A case has been filed in the court of the Judicial Magistrate First Class by advocate Vithal Gowda.But, Ramy said I am not anti national and I have not done any mistake to apologise
Please Wait while comments are loading...