ಕೆಎಸ್‌ಟಿಡಿಸಿಯಿಂದ ಶ್ರೀಶೈಲ, ಹೈದರಾಬಾದ್ ಪ್ರವಾಸ ಪ್ಯಾಕೇಜ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಶ್ರೀಶೈಲ, ಮಹಾನಂದಿ, ಹೈದರಾಬಾದ್ ಮತ್ತು ರಾಮೋಜಿ ಫಿಲ್ಮ್‌ಸಿಟಿ ಪ್ರವಾಸವನ್ನು ಆರಂಭಿಸಲಾಗಿದೆ. ಪ್ರತಿ ಬುಧವಾರ ಸಂಜೆ ಪ್ರವಾಸ ಹೊರಡಲಾಗುತ್ತದೆ. ಸೋಮವಾರ ಬೆಳಗ್ಗೆ ವಾಪಸ್ ಬರಲಾಗುವುದು. ಒಟ್ಟು ಆರು ದಿನಗಳ ಪ್ರವಾಸ ಇದಾಗಿದ್ದು, ಪ್ರವಾಸದ ದರ 8 ಸಾವಿರ ರುಪಾಯಿ ನಿಗದಿಯಾಗಿದೆ.

ಇದರ ಜತೆಗೆ 5 ದಿನದ ಮಿನಿ ಸೌತ್ ಇಂಡಿಯಾ ಪ್ರವಾಸಕ್ಕೆ ಪ್ರತಿ ಗುರುವಾರ ಸಂಜೆ ಹೊರಟು ಸೋಮವಾರ ಬೆಳಗ್ಗೆ ವಾಪಸ್ ಬರಲಾಗುವುದು. ಈ ಪ್ರವಾಸಕ್ಕೆ ಒಬ್ಬರಿಗೆ ದರ 5,400 ರುಪಾಯಿ ನಿಗದಿ ಮಾಡಲಾಗಿದೆ. ಈ ಎರಡೂ ಪ್ರವಾಸಗಳಲ್ಲಿ ಬಸ್ ಹಾಗೂ ವಸತಿಗಳು ಹವಾನಿಯಂತ್ರಿತವಾಗಿರುತ್ತವೆ.[ಮೈಸೂರು : ಕೆಎಸ್ ಟಿಡಿಸಿ ಟೂರ್ ಪ್ಯಾಕೇಜ್ ವಿವರಗಳು]

Ramoji film city

ಪ್ರವಾಸಗಳನ್ನು ಬಾದಾಮಿ ಹೌಸ್ ನಲ್ಲಿ ಅರಂಭಿಸಲಾಗುವುದು, ಅಲ್ಲದೆ ನಿಗಮದಿಂದ ಪ್ರವಾಸ ಹಾಗೂ ವಸತಿ ಕಾಯ್ದಿರಿಸುವ ವ್ಯವಸ್ಥೆಯೂ ಇದೆ. ಹೆಚ್ಚಿನ ವಿವರವನ್ನು ನಮ್ಮ ನಿಗಮದ ವೆಬ್‌ಸೈಟ್ http://karnatakatravelguide.in/kstdc-tour-packages ನಿಂದ ಪಡೆದುಕೊಳ್ಳಬಹುದು ಮತ್ತು ಮೊಬೈಲ್ ಆಪ್ ಕೂಡ ಬಳಸಬಹುದು.

ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು, ಕರಾಪ್ರಅನಿನಿ, ಬಾದಾಮಿ ಹೌಸ್, ಮಹಾನಗರಪಾಲಿಕೆ ಎದುರು, ದೂರವಾಣಿ ಸಂಖ್ಯೆ : 43344334, 22275869, 222755883, 8970650070, ಟೂರಿಸಂ ಹೌಸ್ ದೂರವಾಣಿ ಸಂಖ್ಯೆ 22352901, 22352902, 22352903, ರೈಲು ನಿಲ್ದಾಣ ; 22870068, ಕೆಂಪೇಗೌಡ ಬಸ್ ನಿಲ್ದಾಣ : 8970650075 ಇಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KSTDC has started tour packages to Srishyla, Mahanandi, Hyderabad and Ramoji film city. One more tour package called 'Mini South India' also started by KSTDC.
Please Wait while comments are loading...