ಗರಬಡಿದಂತೆ ಸ್ಥಬ್ದವಾಗಿರುವ ಬೆಂಗಳೂರಿನ ಎಟಿಎಂಗಳು!

Posted By:
Subscribe to Oneindia Kannada

ಬೆಂಗಳೂರು, ಮೇ 19: ಎಟಿಎಂ ಗಳಿಗೆ 'ವಾನ ಕ್ರೈ' ಆ್ಯಂಟಿ ವೈರಸ್ ಗರ ಬಡಿದು ಮೂರ್ನಾಲ್ಕು ದಿನಗಳೇ ಕಳೆದಿವೆ. ಜನರು ತಮ್ಮ ನಿತ್ಯ ಬದುಕಿಗಾಗಿ ಹಣವಿಲ್ಲದೆ ಪರದಾಡುವಂತಾಗಿದೆ.

ಅಪನಗದೀಕರಣದ ಎಫೆಕ್ಟ್ ನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಎಂಟಿಎಂ ವ್ಯವಸ್ಥೆಯ ಮೇಲೆ ಈಗ ಮತ್ತೊಂದು ಬರೆ ಬಿದ್ದಿದೆ. ಆದರೆ, ನಿಜವಾದ ಬರೆ ಬಿದ್ದಿರುವುದು ಜನ ಜೀವನದ ಮೇಲೆ.[ರಾನ್ಸಮ್ವೇರ್ ಭೀತಿಗೆ ಎಟಿಎಂ ವ್ಯವಸ್ಥೆಯಲ್ಲಿ ವ್ಯತ್ಯಯ]

Hundreds of ATMs in Bengaluru shut due to ransomware, cashcrunch

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧಿಕಾರಿಗಳು, ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಡಿ ಕಾರ್ಯ ನಿರ್ವಹಿಸುತ್ತಿರುವ ಎಟಿಎಂಗಳಿಗೆ ಆ್ಯಂಟಿವೈರಸ್ ತೊಂದರೆ ಕೊಟ್ಟಿಲ್ಲ. ಆದರೆ, ಹಳೆಯ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಟಿಎಂ ಮೆಷೀನ್ ಗಳಿಗೆ ತೊಂದರೆಯಾಗಿದೆ. ಶೀಘ್ರದಲ್ಲೇ ಎಲ್ಲಾ ಎಟಿಎಂಗಳಿಗೂ ವಿಂಡೋಸ್ 10 ಹಾಕಲಾಗುತ್ತದೆ. ಅಲ್ಲಿಯವರೆಗೂ ತೊಂದರೆ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.[ಸಾರಿ, ನೋ ಕ್ಯಾಶ್, ಎಟಿಎಂ ಔಟ್ ಆಫ್ ಆರ್ಡರ್!]

ಅಲ್ಲಿಗೆ, ಜನಸಾಮಾನ್ಯರು ತಮ್ಮದೇ ಹಣಕ್ಕಾಗಿ ಪರದಾಡಲೇಬೇಕು ಎಂಬುದು ಸ್ಪಷ್ಟವಾಗಿದೆ. ವೈರಸ್ ತೊಂದರೆ ಇರುವುದರಿಂದ ಆನ್ ಲೈನ್ ಬ್ಯಾಂಕಿಂಗ್ ಕೂಡಾ ಸೇಫ್ ಅಲ್ಲ ಎಂದು ಕೆಲ ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ಅಲ್ಲೂ ಹಲವರಿಗೆ ಸಮಸ್ಯೆಗಳು ಎದುರಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hundreds of ATMs across India's tech hub remained shut for the second day due to possible virus attack by WannaCry ransomware and cash crunch, said a bank official on Friday.
Please Wait while comments are loading...