ಹೈದರಾಬಾದಿನಲ್ಲಿ ಕನ್ನಡತಿಗೆ ಆಪದ್ಬಾಂಧವನಾದ ಆಟೋ ಚಾಲಕ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18: ಕಾಲ ಕೆಟ್ಟೋಗಿದೆ... ಇದು ಕಲಿಯುಗ ಅನ್ನೋ ಮಾತನ್ನು ತುಂಬಾ ಜನರ ಬಾಯಲ್ಲಿ ಕೇಳಿದ್ದೀವಿ. ಆದರೆ ಈ ಕಲಿಯುಗದಲ್ಲೇ ಇರುವ ಎಷ್ಟೆಲ್ಲ ಮಾನವೀಯ ಮನಸ್ಸುಗಳು ನಮ್ಮ ಅರಿವಿಗೆ ಬಂದೇ ಇರೋಲ್ಲ. ಯಾವ ಫಲಾಪೇಕ್ಷೆ ಇಲ್ಲದೆ, ಯಾರೋ ಅಪರಿಚಿತನೊಬ್ಬ ನಮಗೆ ಸಹಾಯ ಮಾಡುತ್ತಾನೆ, ಆಗೆಲ್ಲ ಈ ಕಲಿಯುಗ ಇನ್ನೂ ಕೆಟ್ಟಿಲ್ಲ ಎಂದು ನಮ್ಮಷ್ಟಕ್ಕೆ ನಾವೇ ಗೋಣಗಿಕೊಳ್ಳುತ್ತೇವೆ. ಅಂಥದೇ ಒಂದು ಮನಮಿಡಿಯುವ ಘಟನೆ ಇಲ್ಲಿದೆ.

ಹೈದರಾಬಾದಿಗೆ ವೀಸಾ ಸಂದರ್ಶನಕ್ಕೆಂದು ಹೋದಾಗ ತನಗಾದ ಅವೀಸ್ಮರಣೀಯ ಅನುಭವವನ್ನು ವಾರಿಜಶ್ರೀ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಈಕೆ ತನಗೆ ಸಹಾಯ ಮಾಡಿದ ಆಟೋ ಚಾಲಕ ಬಾಬಾ ಎಂಬುವವರೊಂದಿಗೆ ತೆಗೆದುಕೊಂಡ ಸೆಲ್ಫಿ ಮತ್ತು ಆಕೆಯ ಸ್ಟೇಟಸ್ ಅನ್ನು ಇದುವರೆಗೂ 6272 ಜನ ಶೇರ್ ಮಾಡಿದ್ದಾರೆ. ಆಕೆಯ ಈ ಪೋಸ್ಟ್ ಅನ್ನು 31 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ![ಮಾಲಕಿಯ ರಕ್ಷಿಸಲು ಹೋಗಿ ಪ್ರಾಣ ನೀಗಿಕೊಂಡ ನಾಯಿ]

Humanity never dies, here is an example for it

ಈ ಪೋಸ್ಟ್ ನಲ್ಲೇನಿದೆ? ನೀವೇ ಓದಿ...
ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಕನ್ನಡತಿ, ಬೆಂಗಳೂರಿನ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಇತ್ತೀಚೆಗೆ ವೀಸಾ ಸಂದರ್ಶನಕ್ಕಾಗಿ ಹೈದರಾಬಾದಿಗೆ ಹೋಗಿದ್ದರು. ಸಂದರ್ಶನದ ನಂತರ ಆಕೆ 5,000 ರೂ.ಗಳ ಫೀಸ್ ಕಟ್ಟಬೇಕಿತ್ತು. ಆದರೆ ಆಕೆಯ ಕೈಯಲ್ಲಿದ್ದಿದ್ದು ಕೇವಲ 2000 ರೂ. ಮಾತ್ರ! 10- 15 ಎಟಿಎಂ ಅಲೆದರೂ ದುಡ್ಡು ಸಿಗಲಿಲ್ಲ.

ಹತ್ತಿರದ ಅಂಗಡಿಯವರ ಬಳಿ ಹೋಗಿ ತನ್ನ ಕಾರ್ಡ್ ಕೊಟ್ಟು 3000 ರೂ. ಸ್ವೈಪ್ ಮಾಡಿ ಹಣ ನೀಡುವಂತೆ ಬೇಡಿಕೊಂಡರೂ ಅದಕ್ಕೆ ಯಾರೂ ಸಿದ್ಧವಿರಲಿಲ್ಲ. ಅಪರಿಚಿತ ಊರಲ್ಲಿ ಯಾರನ್ನಾಂತ ಹಣ ಕೇಳೋದು? ಪರಿಚಿತರೇ ಹಣ ಕೊಡೋಕೆ ಅಂಜುವಾಗ ಅಪರಿಚಿತರ್ಯಾರು ಕೊಡುತ್ತಾರೆ? ದಿಕ್ಕೇ ತೋಚದೆ ನಿಂತಿದ್ದ ಆಕೆಗೆ, "ನಾನು ನಿಮಗೆ 3000 ರೂ. ಕೊಡ್ತೀನಿ, ನೀವು ಹೊಟೇಲ್ ಗೆ ವಾಪಾಸಾದ ನಂತರ ನನಗೆ ಹಣ ವಾಪಾಸ್ ನೀಡಬಹುದು ಎಂದು ಆಟೋ ಚಾಲಕನೊಬ್ಬ ತಾನಾಗೇ ಬಂದು ಹೇಳಿದಾಗ ಅಚ್ಚರಿಯೋ ಅಚ್ಚರಿ![ಇದು ಫೇಸ್ ಬುಕ್ ಮಾಹಿತಿ, ತಾಯಿ-ಮಗುವಿನ ಜೀವವನ್ನು ವಾಟ್ಸ್ ಆಪ್ ಉಳಿಸಿತಾ?]
ಆತನಿಂದ ಹಣಪಡೆದು ಫೀಸ್ ಕಟ್ಟಿದ ಮೇಲೆ ಬಾಬ ಜೊತೆ ಸೆಲ್ಫಿ ತೆಗೆದುಕೊಂಡು ತನಗಾದ ಅನುಭವವನ್ನು ವಾರಿಜಶ್ರೀ ಬರೆದುಕೊಂದಿದ್ದಾರೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Humanity never dies. here is an example for it. A girl from Bengaluru posted here unforgettable experience in her facebook page.
Please Wait while comments are loading...