ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾದಕ ವ್ಯಸನ ಜಾಗೃತಿಗೆ 'ಹಗ್ಸ್ ನೋ ಡ್ರಗ್ಸ್' ಅಭಿಯಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಕುರಿತು ಹೆಲ್ಪಿಂಗ್ ಹಾರ್ಟ್ಸ್ ಸಂಸ್ಥೆಯು 'ಹಗ್ಸ್ ನೋ ಡ್ರಗ್ಸ್'ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿತು.

ಈ ಸಂಸ್ಥೆಯು ಸಮಾಜದ ದುರ್ಬಲ ವರ್ಗಗಳಿಗೆ ಪೌಷ್ಠಿಕತೆ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ವೃದ್ಧಾಪ್ಯ, ಮಕ್ಕಳ ಆರೈಲೆ ಇತ್ಯಾದಿ ಕ್ಷೇತ್ರಗಳಲ್ಲಿ ಬೆಂಬಲ ನೀಡುತ್ತಿದೆ.

ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವು ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವು

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ಬಹುಬೇಗ ದಾಸರಾಗಿಬಿಡುತ್ತಾರೆ ಅದು ಇಡೀ ನಮ್ಮ ಜೀವನವನ್ನೇ ಹಾಳುಮಾಡುತ್ತದೆ. ಯಾರೂ ಕೂಡ ಇಂತಹ ದುಶ್ಚಟಗಳಿಗೆ ಬಲಿಯಾಗಬೇಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಉತ್ತಮ ಪ್ರಜೆಯಾಗಿ ಎಂದು ಕಿವಿಮಾತು ಹೇಳಿದರು.

Hugs no Drugs Anti -Drugs campaign

ಶಾಸಕ ಅಶ್ವತ್ಥ ನಾರಾಯಣ್ ಮಾತನಾಡಿ, ಯಾವುದೇ ಮಾದಕ ವಸ್ತು ಉಂಟುಮಾಡುವ ಸಂಭವನೀಯ ಅಪಾಯ ಬರೀ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಉಂಟಾಗುತ್ತದೆ ಎಂಬುದನ್ನು ಎಲ್ಲ ವಯೋಮಾನದವರು ಗುರುತಿಸುವುದು ಅಗತ್ಯ ಎಂದರು.ಈ ಸಂಸ್ಥೆಯ ತಂಡವು ಬಹಳಷ್ಟು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿತು.

ಡ್ರಗ್ಸ್ ಮುಕ್ತ ತುಮಕೂರು ವಿವಿ: ಡಿಸಿಎಂ ಕಟ್ಟುನಿಟ್ಟಿನ ಸೂಚನೆ ಡ್ರಗ್ಸ್ ಮುಕ್ತ ತುಮಕೂರು ವಿವಿ: ಡಿಸಿಎಂ ಕಟ್ಟುನಿಟ್ಟಿನ ಸೂಚನೆ

Hugs no Drugs Anti -Drugs campaign

ವಿದ್ಯಾರ್ಥಿಗಳ ಉತ್ಸಾಹ ಮತ್ತು ಶಕ್ತಿಯನ್ನು ಗಮನಿಸಿದ ಸಂಸ್ಥೆಯ ಸದಸ್ಯರು ಈ ಉಪಕ್ರಮವನ್ನು ಇನ್ನೂ ಹೆಚ್ಚು ಶಾಲೆಗಳಿಗೆ ವಿಸ್ತರಿಸುವ ಹಾಗೂ ಮಕ್ಕಳಿಗೆ, ಸಮಾಜಕ್ಕೆ ಉತ್ತಮ ಭವಿಷ್ಯ ನಿರ್ಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುನಿಲ್ ಕುಮಾರ್ ಪಾಲ್ಗೊಂಡಿದ್ದರು.

ಮಂಗಳೂರು: ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ ಮಂಗಳೂರು: ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ

Hugs no Drugs Anti -Drugs campaign

ಪ್ರತಿ ವಿದ್ಯಾರ್ಥಿಯೂ ಜೀವನದ ಒಳ್ಳೆಯ ಅಂಶಗಳ ಕುರಿತು ಚಿಕ್ಕ ವಯಸ್ಸಿನಲ್ಲೇ ಅರಿವು ಹೊಂದುವುದನ್ನು ದೃಢೀಕರಿಸಲು ಜಿ ಗ್ರೂಪ್‍ನ ಸಿಎಸ್‍ಆರ್ ಅಂಗವಾದ ಹೆಲ್ಪಿಂಗ್ ಹಾಟ್ರ್ಸ್ ಸಂಸ್ಥೆಯು ಒಂದು ಹೆಜ್ಜೆ ಮುಂದಿಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆಯ ದೈಹಿಕ ಹಾನಿಗಳ ಕುರಿತು ಅರಿವು ಮೂಡಿಸುತ್ತಿರುವುದಲ್ಲದೆ ಅವರನ್ನು ಜೀವನ ಕೌಶಲ್ಯಗಳೊಂದಿಗೆ ಸನ್ನದ್ಧಗೊಳಿಸುತ್ತಿದೆ.

English summary
Helping Hearts, the CSR Arm of G Group, flagged off the ‘Hugs-No-Drugs Walkathon’ – An initiative of anti-drug awareness program. campaign held in presence of chief guestsSri VeerendraHeggade (DharmasthalaDharmadhikari), Sri Dr. C. N. Aswath Narayan (MLA Malleswaram), Sri Sunil Kumar (IPS, Bangalore City police commissioner).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X