ನೈಋತ್ಯ ರೈಲ್ವೆ: ಕಾಗದ ರಹಿತ ಟಿಕೆಟ್ ಖರೀದಿಯತ್ತ ಪ್ರಯಾಣಿಕರ ಒಲವು

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 14: ಡಿಜಿಟಲ್ ಯುಗದಲ್ಲಿ ರೈಲು ಪ್ರಯಾಣಿಕರು ಕೂಡ ಇದೀಗ ಸ್ಮಾರ್ಟ್ ಆಗಿದ್ದು, ನೈಋತ್ಯ ರೈಲ್ವೆಯು ಹೊಸದಾಗಿ ಆರಂಭಿಸಿರುವ ಕಾಗದ ರಹಿತ ಟಿಕೆಟ್ ಬಳಕೆಗೆ ಪ್ರಯಾಣಿಕರು ಸಹಕರಿಸಿದ್ದಾರೆ.

ತಮ್ಮ ಸ್ಮಾರ್ಟ್ ಫೋನು ಗಳ ಮೂಲಕವೇ ಟಿಕೆಟ್ ಖರೀದಿಸುವತ್ತ ಜನರು ಉತ್ಸುಕರಾಗಿದ್ದಾರೆ. ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್ ನಲ್ಲಿ ಸರತಿ ಸಾಲಲ್ಲಿ ನಿಂತು ಕಾಯ್ದಿರಿಸದ ಟಿಕೆಟ್ ಪಡೆದುಕೊಳ್ಳುವವರಿಗಾಗಿ ಫೆ.8ರಂದು ನೂತನ ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ ಅಪ್ಲಿಕೇಷನ್ ನೈಋತ್ಯ ರೈಲ್ವೆ ಬಿಡುಗಡೆ ಮಾಡಿತ್ತು.

ಶೀಘ್ರ ಕನ್ನಡದಲ್ಲೂ ರೈಲ್ವೆ ಟಿಕೆಟ್ ಮುದ್ರಣ: ಪಿಯುಷ್ ಗೋಯೆಲ್

ಬೆರಳತುದಿಯಲ್ಲೇ ಟಿಕೆಟ್ ಖರೀದಿಸಲು ಅವಕಾಶವಾಗುವಂತೆ ಈ ಅಪ್ಲಿಕೇಷನ್ ಕಾರ್ಯನಿರ್ವಹಿಸುತ್ತಿದ್ದು, ಕಳೆದೊಂದು ತಿಂಗಳಲ್ಲೇ 17,235 ಪ್ರಯಾಣಿಕರು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

Huge response for unreserved tickets booking through online

ನಿತ್ಯ ಸರಾಸರಿ 1500 ಟಿಕೆಟ್ ಖರೀದಿ: ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡ ಒಟ್ಟು 17,235 ಪ್ರಯಾಣಿಕರ ಪೈಕಿ ಮೈಸೂರಿನ 3198,ಹುಬ್ಬಳ್ಳಿ ವಿಭಾಗದ 1,650 ಪ್ರಯಾಣಿಕರು ಸೇರಿದ್ದಾರೆ. ಬೆಂಗಳೂರು ವಿಭಾಗದಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಿತ್ಯ ಸರಾಸರಿ 1500-2ಸಾವಿರ ವರೆಗೆ ಟಿಕೆಟ್ ಅಪ್ಲಿಕೇಷನ್ ಮೂಲಕ ಖರೀದಿಯಾಗುತ್ತಿದೆ.ದಿನವೊಂದಕ್ಕೆ ಗರಿಷ್ಠ 2500 ಟಿಕೆಟ್ ಅಪ್ಲಿಕೇಷನ್ ಮೂಲಕ ಖರೀದಿಯಾದ ದಾಖಲೆಯೂ ಇದೆ. ಟಿಕೆಟ್ ಅಪ್ಲಿಕೇಷನ್ ನೀಂದ ದಿನಕ್ಕೆ 20ರಿಂದ 40ಸಾವಿರ ರೂ ವರೆಗೆ ಆದಾಯ ಬರುತ್ತಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Western Railway zone gets huge response for online purchasing for unreserved ticket booking. Passengers are fed up with queues in Railway stations to get unreserved tickets for the journey.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ