ನೋ ಪಾರ್ಕಿಂಗ್ ದಂಡ ಮೂರು ಪಟ್ಟು ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 22: ಇನ್ನುಮುಂದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಡಿ. ಯಾಕೆಂದರೆ 'ಒಂದೈದೇ ನಿಮಿಷ ಬಂದ್ಬಿಟ್ಟೆ' ಎಂಬ ಮಾತಿನ ಬೆಲೆ ಸಾವಿರಾರು ರುಪಾಯಿ ಎಂಬುದನ್ನು ತಿಳಿದುಕೊಳ್ಳಿ. ರಸ್ತೆ ಪಕ್ಕ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋದಾಗ ಅದನ್ನು ಎತ್ತಾಕಿಕೊಂಡು ಹೋದಾಗ ಹಿಂದೆ ಕಟ್ಟುತ್ತಿದ್ದ ದಂಡಕ್ಕೂ ಈಗಲೂ ಭಾರೀ ಬದಲಾವಣೆ ಆಗಿದೆ.

ಇನ್ನು ಮುಂದೆ ವಾಹನಗಳನ್ನು ಎತ್ತಾಕಿಕೊಂಡು ಹೋಗೋದಿಕ್ಕೆ ಖಾಸಗಿಯವರಿಂದ ಬಾಡಿಗೆ ಆಧಾರದಲ್ಲಿ ವಾಹನ ಪಡೆಯಲಾಗುತ್ತದೆ. ಮನಸೋ ಇಚ್ಛೆ ನಿಲ್ಲಿಸಿದ ವಾಹನಗಳನ್ನು ಟೋ ಮಾಡುವುದಕ್ಕೆ ಮಾಲೀಕರು ಅಥವಾ ಚಾಲಕರಿಂದ ಟೋಯಿಂಗ್ ಶುಲ್ಕ ಜತೆಗೆ ದಂಡವನ್ನೂ ವಸೂಲಿ ಮಾಡಲಾಗುತ್ತದೆ.[ಬೆಂಗಳೂರಿನ 12 ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ?]

No parking fee

ಈ ಹಿಂದೆ ವಸೂಲು ಮಾಡುತ್ತಿದ್ದ ದಂಡ ಹಾಗೂ ಖಾಸಗಿ ಟೋ ವಾಹನಗಳ ಮಾಲೀಕರಿಗೆ ನೀಡುತ್ತಿದ್ದ ಮೊತ್ತದ ವಿವರ ಹೀಗಿದೆ: ಭಾರಿ ಸಾಗಣೆ ವಾಹನಗಳಿಂದ 500 ವಸೂಲಿ ಮಾಡಿದರೆ ಟೋ ಮಾಡುವವರಿಗೆ 200 ನೀಡಲಾಗುತ್ತಿತ್ತು. ಇನ್ನು ಮಧ್ಯಮ ಗಾತ್ರದ ವಾಹನಗಳಿಂದ 400 ದಂಡ 175 ಟೋ ವಾಹನಕ್ಕೆ, ಇನ್ನು ಲಘು ವಾಹನಗಳಿಂದ 300 ದಂಡ ಶುಲ್ಕ, ಟೋ ಮಾಡಿದವರಿಗೆ 150, ಇನ್ನು ದ್ವಿ ಚಕ್ರ ವಾಹನಗಳಿಂದ 200 ದಂಡ, 100 ರುಪಾಯಿ ಟೋ ಮಾಡಿದ ವಾಹನಗಳ ಮಾಲೀಕರಿಗೆ ನೀಡಲಾಗುತ್ತಿತ್ತು.

ಪರಿಷ್ಕೃತ ದರದ ಮಾಹಿತಿ: ಭಾರಿ ಸಾಗಣೆ ವಾಹನಕ್ಕೆ ದಂಡ 1500, ಟೋ ಮಾಡಿದ ವಾಹನಕ್ಕೆ 750, ಮಧ್ಯಮ ಗಾತ್ರದ ವಾಹನ 1250 ದಂಡ, 625 ಟೋ ವಾಹನ ಮಾಲೀಕರಿಗೆ, ಇನ್ನು ಲಘು ವಾಹನಗಳಿಗೆ 1,000 ದಂಡ, ಟೋ ವಾಹನಕ್ಕೆ 500, ಟೂ ವ್ಹೀಲರ್ ಗಳಿಗೆ 650 ದಂಡ, 325 ರುಪಾಯಿ ಟೋ ವಾಹನಗಳ ಮಾಲೀಕರಿಗೆ ನೀಡಲಾಗುತ್ತದೆ.[ಡಿಸೈನ್ ನಂಬರ್ ಪ್ಲೇಟ್ ಇಟ್ಟುಕೊಂಡ್ರೆ ದಂಡ ಗ್ಯಾರಂಟಿ!]

ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ವಾಹನ ನಿಲ್ಲಿಸೋದು ಖಂಡಿತಾ ತಪ್ಪು. ಈಗ ಅಂಥ ತಪ್ಪಿಗೆ ಭಾರೀ ದಂಡವನ್ನೇ ಕಟ್ಟಬೇಕಾಗುತ್ತದೆ. ಎಚ್ಚರ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Toeing fine for vehicle increased by three folds in Bengaluru. Now minimum fine for toeing vehicle in Bengaluru is Rs. 325
Please Wait while comments are loading...