ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಿನದಿಂದ ಮುರಿದುಬಿದ್ದ ಟೊಂಗೆಗೆ ಇನ್ನೂ ಇಲ್ಲ ಮುಕ್ತಿ

By Prasad
|
Google Oneindia Kannada News

ಬೆಂಗಳೂರು, ಅಕ್ಟೋಬರ್ 14 : ಜಯನಗರ 3ನೇ ಬ್ಲಾಕ್ ನಲ್ಲಿರುವ ವಿಜಯಾ ಹೈಸ್ಕೂಲ್ ಮುಂದೆ ಮುರಿದು ಬಿದ್ದಿರುವ ಬೃಹತ್ ಮರದ ಟೊಂಗೆ ಎರಡು ದಿನಗಳಾದರೂ ಮುಕ್ತಿ ಕಂಡಿಲ್ಲ. ರಸ್ತೆಗೆ ಅಡ್ಡವಾಗಿ ಬಿದ್ದು ಎರಡು ದಿನಗಳು ಕಳೆದಿದ್ದರೂ ಇನ್ನೂ ತೆರವು ಮಾಡಿಲ್ಲ.

ರಾಜಾಕಾಲುವೆಗೆ ಕೊಚ್ಚಿ ಹೋಗಿದ್ದ ಅರ್ಚಕನ ಮೃತ ದೇಹ ಪತ್ತೆರಾಜಾಕಾಲುವೆಗೆ ಕೊಚ್ಚಿ ಹೋಗಿದ್ದ ಅರ್ಚಕನ ಮೃತ ದೇಹ ಪತ್ತೆ

ಸೌತ್ ಎಂಡ್ ರಸ್ತೆಯಿಂದ ಉಪಾಹಾರ ದರ್ಶಿನಿಗೆ ಹೋಗುವ ಎಲಿಫೆಂಟ್ ರಾಕ್ ರಸ್ತೆಯಲ್ಲಿ ಸಾಗುವಾಗ, ಮೊದಲ ಎಡತಿರುವು ತೆಗೆದುಕೊಂಡಾಗ ಸಿಗುವ ವಿಜಯಾ ಹೈಸ್ಕೂಲ್ ಎದುರೇ ಈ ಬೃಹದಾಕಾರದ ಮರದ ಬೃಹತ್ ಟೊಂಗೆ ಮುಗಿರು ರಸ್ತೆಗೆ ಅಡ್ಡಡ್ಡಲಾಗಿ ಬಿದ್ದಿದೆ.

In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

Huge branch of tree posing danger in Jayanagar 3rd block

ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳಿಗೆ ಅಡ್ಡಾಡಲು ತೊಂದರೆಯಾಗಿದೆ. ವಿಜಯಾ ಶಾಲೆಗೆ ಬರುವ ಮಕ್ಕಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಮುರಿದಿರುವ ಟೊಂಗೆ ಯಾರ ಮೇಲಾದರೂ ಬಿದ್ದರೆ ಪ್ರಾಣ ಹೋಗುವ ಅಪಾಯವೂ ಇರುತ್ತದೆ. ಇದು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಬಂದಿದೆಯೋ ಇಲ್ಲವೋ, ಆದರೆ ಮತ್ತೆ ಅನಾಹುತವಾಗುವ ಮೊದಲೇ ಇದನ್ನು ತೆರವುಗೊಳಿಸಬೇಕಾಗಿರುವುದು ಬಿಬಿಎಂಪಿ ಸಿಬ್ಬಂದಿಗಳ ಕರ್ತವ್ಯ.

ಬೆಂಗಳೂರಲ್ಲಿ ಮಳೆಗೆ 4 ಬಲಿ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರಬೆಂಗಳೂರಲ್ಲಿ ಮಳೆಗೆ 4 ಬಲಿ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಕಳೆದೆರಡು ದಿನಗಳಿಂದ ವಿಜಯಾ ಹೈಸ್ಕೂಲು ಮುಂದಿರುವ ಚಾಮರಾಜ ಕಲ್ಯಾಣ ಮಂಟಪದಲ್ಲಿ ಯಾವುದೇ ಕಾರ್ಯಕ್ರಮಗಳು ಜರುಗದಿರುವುದೂ ಬಿದ್ದ ಟೊಂಗೆ ಸ್ಟೇಟಸ್ ಕೋ ಮೇಂಟೇನ್ ಮಾಡಲು ಕಾರಣವಾಗಿದೆ. ಈ ರಸ್ತೆಯಲ್ಲಿ ಅಡ್ಡಾಡುವವರಾದರೂ ಬಿಬಿಎಂಪಿಗೆ ದೂರು ನೀಡಬಹುದಾಗಿತ್ತಲ್ಲ?

ಬೆಂಗಳೂರಿನಲ್ಲಿ ಪ್ರತಿದಿನವೂ ಹಗಲುರಾತ್ರಿಯೆನ್ನದೆ ಮಳೆ ಸುರಿಯುತ್ತಿದೆ, ಸಾಯಂಕಾಲವಾದರೆ ಜೋರಾದ ಬಿರುಗಾಳಿ ಕೂಡ ಬೀಸುತ್ತಿದೆ. ಈ ಬಿರುಗಾಳಿ ಹೊಡೆತಕ್ಕೆ ಮರಕ್ಕೆ ನೇತಾಡುತ್ತಿರುವ ಟೊಂಗೆ ಯಾವುದೇ ಕ್ಷಣವಾದರೂ ಬೀಳುವ ಸಾಧ್ಯತೆಯಿದೆ.

ಅದು ಯಾರ ಮೇಲಾದರೂ ಬಿದ್ದು, ಅವರ ಕೈಕಾಲು ಮುರಿದು ಅಥವಾ ಪ್ರಾಣವನ್ನೇ ತೆಗೆಯುವ ಮುನ್ನ ಈ ಭಾಗದ ಕಾರ್ಪೊರೇಟರ್ ಆಗಿರುವ ಪೂರ್ಣಿಮಾ ರಮೇಶ್ (9880011999) ಅವರು ಮರದ ಟೊಂಗೆಯನ್ನು ತೆರವುಗೊಳಿಸಿ, ಜನರ ಪ್ರಾಣ ಉಳಿಸಬೇಕಾಗಿ ವಿನಂತಿ.

English summary
Huge branch of tree, which is broken and hanging on the tree is posing danger in Jayanagar 3rd block. The tree branch in front of Vijaya high school has not been cleared by BBMP personnel for the past 2 days. Poornima Ramesh, the corporator should take action immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X