ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿರತ್ನ ಕುಕ್ಕರ್ ರಾಜಕಾರಣಕ್ಕೆ ಮುನಿದ ಹುಚ್ಚಾ ವೆಂಕಟ್‌

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 24; 'ನನ್ ಮಗಂದ್' ಬೇಕೇನೊ ನಿಂಗಿದೆಲ್ಲಾ ನಾನ್ ಮಾತಾಡೊದು, ರಾಜಕಾರಣಿ ಏನೊ ನೀನು, ನನ್ ಮಗಂದ್' ಹೀಗೆಂದು ಹುಚ್ಚಾ ವೆಂಕಟ್ ಅಬ್ಬರಿಸುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಕೂತಿದ್ದ ಆ ರಾಜಕಾರಣಿ ತೆಪ್ಪಗೆ ಹುಚ್ಚಾ ವೆಂಕಟ್ ಬೈಗುಳ ಕೇಳಿಸಿಕೊಳ್ಳುತ್ತಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆಗಿದ್ದು ಇಷ್ಟೆ, ಶಾಸಕ ಮುನಿರತ್ನ ಅವರು ತಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕುಕ್ಕರ್ ಹಂಚಿದ್ದಾರೆ. ಅದು ನಮ್ಮ ಆಲ್‌ ಟೈಮ್ ಹೋರಾಟಗಾರ, ಯೂಟ್ಯೂಬ್ ಸ್ಟಾರ್ ಹುಚ್ಚಾ ವೆಂಕಟ್ ಅವರ ಗಮನಕ್ಕೆ ಬಂದು ಬಿಟ್ಟಿದೆ. ಮುನಿರತ್ನ ಅವರ ಈ ಕುಕ್ಕರ್ ರಾಜಕಾರಣದ ವಿರುದ್ಧ ಹುಚ್ಚಾ ವೆಂಕಟ್ ಕುದ್ದು ಹೋಗಿದ್ದಾರೆ. ಹಾಗಾಗಿ ಮುನಿರತ್ನ ಅವರ ಅಕ್ರಮದ ವಿರುದ್ಧ ಹೋರಾಟದ ಭಾಗವಾಗಿ ಮೊನ್ನೆಯಷ್ಟೆ ಫೇಸ್‌ಬುಕ್ ನಲ್ಲಿ ವಿಡಿಯೋ ಸಹ ಹಾಕಿದ್ದರು.

ನನ್ಮಗಂದ್, ಸ್ವಂತ ಪಕ್ಷ ಶುರು ಮಾಡಿ ಪ್ರಧಾನಿ ಆಗ್ತಾರಂತೆ ಹುಚ್ಚ ವೆಂಕಟ್ ನನ್ಮಗಂದ್, ಸ್ವಂತ ಪಕ್ಷ ಶುರು ಮಾಡಿ ಪ್ರಧಾನಿ ಆಗ್ತಾರಂತೆ ಹುಚ್ಚ ವೆಂಕಟ್

ಈ ಕುರಿತು ಇಂದು (ಮಾರ್ಚ್ 24) ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನೂ ಕರೆದಿದ್ದ ಹುಚ್ಚಾ ವೆಂಕಟ್ ಅವರು 'ಮುನಿರತ್ನ ಅವರ ಅಕ್ರಮಗಳೆಲ್ಲಾ ಬ್ಯಾನ್ ಆಗ್ಬೇಕ್, ಮುನಿರತ್ನ ಚುನಾವಣೆ ಇಂದ ಹಿಂದೆ ಸರೀಬೇಕ್, ಅವರ ವಿರುದ್ಧ ತನಿಖೆ ಆಗ್ಬೇಕ್' ಎಂದೆಲ್ಲಾ ಅಬ್ಬರಿಸಿ ಬೊಬ್ಬಿರಿದರು.

Hucha Venkat lambasted on MLA Muniratna

ಪ್ರೆಸ್‌ ಕ್ಲಬ್‌ನಲ್ಲಿ ಅವರ ಅಬ್ಬರ ನೋಡಿ ಟಿವಿ ಮಾಧ್ಯಮವೊಂದು ಹುಚ್ಚಾ ವೆಂಕಟ್ ಅವರನ್ನು ತಮ್ಮ ಆಫೀಸಿಗೆ ಕರೆಸಿ ಪ್ಯಾನೆಲ್‌ನಲ್ಲಿ ಪ್ರತಿಷ್ಠಾಪಿಸಿ, ಮುನಿರತ್ನ ಅವರನ್ನೂ ಸಂಪರ್ಕಕ್ಕೆ ಪಡೆದು ಇಬ್ಬರನ್ನೂ ಮುಖಾಮುಖಿಯಾಗಿಸಿದರು.

ಒಂದು ಹಂತದ ವರೆಗೂ ಚರ್ಚೆ ಸರಿಯಾಗೇ ನಡೆದಿತ್ತು. ಯಾವಾಗ ಮುನಿರತ್ನ ಅವರು 'ಹುಚ್ಚಾ ವೆಂಕಟ್ ಅವರ ಅಕ್ಕ, ಕುಕ್ಕರ್ ಬೇಕು ಎಂದು ನನಗೆ ಕರೆ ಮಾಡಿದ್ದರು ಹಾಗಾಗಿ ಕೊಟ್ಟೆ' ಎಂದರೊ ವೆಂಕಟ್ ಅವರ ಹೆಸರಲ್ಲಿರುವ ಹುಚ್ಚು ತಲೆಗೆ ಹತ್ತಿತೇನೊ ಎಂಬತೆ ಎಗರಾಡಿ ಕೂಗಾಡಿಬಿಟ್ಟರು ಹುಚ್ಚಾ ವೆಂಕಟ್.

ಆತ್ಮಹತ್ಯೆಗೆ ಯತ್ನಿಸಿದ ವೆಂಕಟ್ ಹುಡುಕಿಕೊಂಡು ಬಂದ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ವೆಂಕಟ್ ಹುಡುಕಿಕೊಂಡು ಬಂದ ಪೊಲೀಸರು

'ನಮಗೆನು 300 ರೂಪಾಯಿಯ ಕುಕ್ಕರ್ ತೆಗೆದುಕೊಳ್ಳಲು ಗತಿ ಇಲ್ಲ ಎಂದು ಕೊಂಡಿದ್ದೀಯಾ' ಎಂದು ಪ್ರಾರಂಭವಾದ ಹುಚ್ಚಾ ವೆಂಕಟ್ ಮಾತು, 'ನಿನ್ ರಾಜಕೀಯಕ್ಕೆ ನನ್ ಎಕ್ಕಡ' ವರೆಗೂ ಬಂದು ನಿಂತಿತು. ಹುಚ್ಚನ ಕೋಪದ ಅಗ್ನಿ ನ್ಯೂಸ್‌ ರೀಡರ್‌ಗೂ ತಾಗಿತು. ಕೋಪದ ಭರದಲ್ಲಿ ಹುಚ್ಚಾ ವೆಂಕಟ್, ನ್ಯೂಸ್‌ ರೀಡರ್‌ನನ್ನೂ ತರಾಟೆಗೆ ತೆಗೆದುಕೊಂಡು ಬಿಟ್ಟರು.

ಕೊನೆಗೆ ಮಣಿದ ಶಾಸಕ ಮುನಿರತ್ನ 'ಸರಿ ಕಣಪ್ಪ ನಾಳೆ ಮನೆಗೆ ಬಾ, ಶಾಂತಿಯಿಂದ ಮಾತನಾಡಿ ಬಗೆಹರಿಸಿಕೊಳ್ಳೋಣ' ಎಂದು ಬಿಳಿ ಬಾವುಟ ಹಾರಿಸಿದರು.

English summary
Hucha Ventak slams MLA Muniratna for distributing cooker to tracts voters. He said Muniratna should not contest in election, Lokayukta inquiry should done against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X