ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?

Posted By:
Subscribe to Oneindia Kannada

ಬೆಂಗಳೂರು, ಜನವರಿ 20: ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ ನಿರ್ವಹಣೆಯ ಅಧಿಕೃತ ವೆಬ್ ತಾಣದ ಮೂಲಕ ಸರಳ ಕ್ರಮದಲ್ಲಿ ಹೊಸ ಪಾಸ್ ಪೋರ್ಟ್ ಗೆ ಅರ್ಜಿ ಹಾಕುವಂತೆ, ಪಾಸ್ ಪೋರ್ಟ್ ನವೀಕರಣ ಕೂಡಾ ಸಾಧ್ಯವಿದೆ.

ಆನ್ ಲೈನ್ ನಲ್ಲಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವುದು, ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವ ವಿಧಾನವನ್ನೇ ಬಳಸಿ ಪಾಸ್ಪೋರ್ಟ್ ನವೀಕರಣ ಮಾಡಿಕೊಳ್ಳಬಹುದು. ಹೊಸ ಪಾಸ್ ಪೋರ್ಟ್ ಪಡೆಯಲು ಅಥವಾ ರೆನ್ಯೂ ಮಾಡಿಕೊಳ್ಳಲು ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. [ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

ನಂತರ ಸಿಗುವ ಲಾಗ್ ಇನ್ ಐಡಿ ಹಾಗೂ ಪಾಸ್ ವರ್ಡ್ ಮೂಲಕ ಲಾಗಿನ್ ಆಗಿ ಹೊಸ ಪಾಸ್ ಪೋರ್ಟ್ ಗೆ ಅಥವಾ ಮರು ನವೀಕರಣಕ್ಕಾಗಿ ಕ್ಲಿಕ್ ಮಾಡಬಹುದು. [ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್!]

How to renew Passport Online Reissue of Passport in India

ನೋಂದಣಿಯಾದ ಮೇಲೆ ಏನು ಮಾಡಬೇಕು?
* ನೋಂದಣಿಯಾದ ಮೇಲೆ ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ಗೆ ಬಂದು ನೋಂದಾಯಿಸಿದ ಲಾಗಿನ್ ಐಡಿ ಬಳಸಿ, ಲಾಗಿನ್ ಆಗಿ. [ಪಾಸ್ ಪೋರ್ಟ್ : ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]
* Apply for Fresh Passport/Re-issue of Passport ಆಯ್ಕೆ ಮಾಡಿಕೊಳ್ಳಿ.
* ವಿವರಗಳನ್ನು ತುಂಬಿ, ಸಾಮಾನ್ಯ ಅರ್ಜಿ ಅಥವಾ ತತ್ಕಾಲ್ ಆಯ್ಕೆ ಮಾಡಿಕೊಳ್ಳಿ.
* ಅರ್ಜಿದಾರರು ವಯಸ್ಕರೇ ಅಥವಾ ಅಪ್ರಾಪ್ತರೇ ತಿಳಿಸಿ
* ಉದ್ಯೋಗ: ಸರ್ಕಾರಿ, ನಿವೃತ್ತ ಹಾಗೂ ಇತರೆ ಯಾವುದಾದರೂ ಆಯ್ಕೆ ಮಾಡಿಕೊಂಡ ಮೇಲೆ ಕೆಳಗೆ ನೀಡಿರುವ ದಾಖಲೆ ಪಟ್ಟಿಯನ್ನು ಪರಿಶೀಲಿಸಿ
* ನಿಮ್ಮ ವಿಳಾಸ(ಪಾಸ್ ಪೋರ್ಟ್ ನಲ್ಲಿ ನಮೂದಿಸಿರುವ) ಬದಲಾಗಿದ್ದರೆ ತಿಳಿಸಿ

* Pay and Schedule Appointment ಕ್ಲಿಕ್ ಮಾಡಿ ಸಂದರ್ಶನದ ಸಮಯ ನಿಗದಿ ಮಾಡಿಕೊಳ್ಳಿ.

ಸಂದರ್ಶನಕ್ಕ್ ತೆರಳುವ ಮುನ್ನ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಂಬುದನ್ನು ನೋಟ್ ಮಾಡಿಕೊಳ್ಳಿ.. ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

ಆನ್ ಲೈನ್ ಶುಲ್ಕ ಪಾವತಿ:
* ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್(ಮಾಸ್ಟರ್ ಕಾರ್ಡ್ ಹಾಗೂ ವೀಸಾ)
* ಇಂಟರ್ನೆಟ್ ಬ್ಯಾಂಕಿಂಗ್ (ಎಸ್ ಬಿಐ ಹಾಗೂ ಸಂಬಂಧಿಸಿದ ಬ್ಯಾಂಕ್)
* ಎಸ್ ಬಿಐ ಬ್ಯಾಂಕ್ ಚಲನ್ ಮೂಲಕ ಮಾಡಬಹುದು.
* Print Application Receipt ಕ್ಲಿಕ್ ಮಾಡಿ ಅರ್ಜಿಯ ಗುರುತು ಸಂಖ್ಯೆ/ಸಂದರ್ಶನ ಸಂಖ್ಯೆಯನ್ನು ಪಡೆದುಕೊಳ್ಳಿ
* ನಿಗದಿತ ದಿನದಂದು ಸಂದರ್ಶನಕ್ಕೆ ಹಾಜರಾಗಿ ಸೂಕ್ತ ದಾಖಲೆ ಒದಗಿಸಿ ಪಾಸ್ ಪೋರ್ಟ್ ಪಡೆದುಕೊಳ್ಳಿ.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How to re new Passport Online. Where can I get re-issue Form and Submit? here are the steps follow and visit Passport Seva website maintained by Ministry of External Affairs, Government of India
Please Wait while comments are loading...