ಬೆಂಗಳೂರಿನ ಆತಿಥ್ಯದಲ್ಲಿ 14ನೇ ಪ್ರವಾಸಿ ಭಾರತೀಯ ದಿವಸ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28 : ಕನಸುಗಳನ್ನು ಹೊತ್ತು ದೇಶ ತೊರೆದಿರುವ ಅನಿವಾಸಿ ಭಾರತೀಯರು ಭಾರತದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಕಾಣಿಕೆಗಳನ್ನು ಪರಾಮರ್ಶಿಸುವ ಉದ್ದೇಶದಿಂದ 'ಪ್ರವಾಸಿ ಭಾರತೀಯ ದಿವಸ'ವನ್ನು ಪ್ರತಿವರ್ಷ ಜನವರಿ 9ರಂದು ಆಚರಿಸಲಾಗುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ಬರಲು ಅಹಿಂಸಾತ್ಮಕವಾಗಿ ಸೆಣಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕಾಲಿರಿಸಿದ ದಿನದ ನೆನಪಿಗಾಗಿ ಪ್ರವಾಸಿ ಭಾರತೀಯ ದಿವಸವನ್ನಾಗಿ 2003 ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ, 14ನೇ ಪ್ರವಾಸಿ ಭಾರತೀಯ ದಿವಸದ ಆತಿಥ್ಯ ವಹಿಸಿರುವುದು ಬೆಂಗಳೂರು.

ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಜನವರಿ 7ರಿಂದ 9ವರೆಗೆ ನಡೆಯಲಿರುವ ಸಮಾವೇಶದಲ್ಲಿ ಭಾರತದ ಹಲವಾರು ಗಣ್ಯರು ಮತ್ತು ಹಲವಾರು ಅನಿವಾಸಿ ಭಾರತೀಯರು ಭಾಗವಹಿಸಿ ವಿಚಾರವಿನಿಮಯ ಮಾಡಿಕೊಳ್ಳಲಿದ್ದಾರೆ.

How to register for Pravasi Bharatiya Divas in Bengaluru

ಈ ಸಮಾರಂಭದಲ್ಲಿ ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೋರ್ಚುಗೀಸ್‌ನ ಪ್ರಧಾನಿ ಅಂಟೋನಿಯೋ ಕೋಸ್ಟಾ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಮುಂತಾದವರು ಭಾಗವಹಿಸುತ್ತಿದ್ದಾರೆ.

ಆಯಾ ರಾಜ್ಯಗಳ ಸರಕಾರದೊಂದಿಗೆ ವಿದೇಶಾಂಗ ಖಾತೆ ಸಚಿವಾಲಯ ಮತ್ತು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆ ಸಚಿವಾಲಯ ಜಂಟಿಯಾಗಿ ಈ ಅಂತಾರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುತ್ತವೆ. ಬೆಂಗಳೂರು ಮೊದಲ ಬಾರಿಗೆ ಈ ಸಮಾವೇಶವನ್ನು ಆಯೋಜಿಸುತ್ತಿದೆ.

ನೋಂದಾಯಿಸಿಕೊಳ್ಳುವುದು ಹೇಗೆ?
ಈ ಸಮಾವೇಶದಲ್ಲಿ ಭಾಗವಹಿಸಬೇಕೆನ್ನುವವರು ಕಡ್ಡಾಯವಾಗಿ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ವೈಯಕ್ತಿಕವಾಗಿ ಅಥವಾ ಗುಂಪು ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು. ನೀವು ಅಧಿಕಾರಿ, ಕಲಾಕಾರು, ಜಾಹೀರಾತುದಾರರು, ಪ್ರದರ್ಶನಕಾರರು, ಯಾರೇ ಆಗಿರಬಹುದು, ವೆಬ್ ಸೈಟ್ ನಲ್ಲಿ (https://pbdindia.gov.in) ನೋಂದಾಯಿಸಿಕೊಳ್ಳುವುದು ಕಡ್ಡಾಯ.ೇ

ನೋಂದಾಯಿಸಿಕೊಳ್ಳಲು ಲಾಗಿನ್ ಕ್ರಿಯೇಟ್ ಮಾಡಿಕೊಂಡು, ವೈಯಕ್ತಿಕವಾಗಿ ಅಥವಾ ಗ್ರೂಪ್ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು. ಗ್ರೂಪ್ ಮಾಡಿಕೊಂಡು ನೋಂದಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ (https://pbdindia.gov.in/how-register). ಗ್ರೂಪ್ ಮಾಡಿಕೊಂಡು ನೋಂದಾಯಿಸಿಕೊಂಡವರಿಗೆ ರಿಯಾಯಿತಿಯೂ ಇದೆ. ನೋಂದಾಯಿಸಿಕೊಳ್ಳಲು ಕಡೆಯ ದಿನ : ಡಿಸೆಂಬರ್ 31, 2016.

ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಗಾಗಿ ಕೊಡುಗೆ ನೀಡಿದ ಅನಿವಾಸಿ ಭಾರತೀಯರನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ಮಾಡುವ ಪರಿಪಾಠವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Register online for participating in the 14th Pravasi Bharatiya Divas Convention to be held in Bengaluru from January 7 to 9, 2017. Registrations Close on 31 December, 2016. This day is celebrated to mark the return of Mahatma Gandhi from South Africa on 9 January 1915.
Please Wait while comments are loading...