ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?

Posted By: Staff
Subscribe to Oneindia Kannada

ಬೆಂಗಳೂರು, ಏಪ್ರಿಲ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದು, ಷರಿಷ್ಕೃತ ತೆರಿಗೆ ದರ ಶುಕ್ರವಾರದಿಂದ ಜಾರಿಗೆ ಬರಲಿದೆ. ವಸತಿ ಪ್ರದೇಶಗಳಿಗೆ ಶೇ 20 ಮತ್ತು ವಸತಿಯೇತರ ಪ್ರದೇಶಗಳಿಗೆ ಶೇ 25ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ.

ಆಸ್ತಿ ತೆರಿಗೆ ಪಾವತಿ ಮಾಡುವ ವಿಚಾರದಲ್ಲಿ ಗೊಂದಲಗಳಿದ್ದರೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿಯನ್ನು ಆರಂಭಿಸಿದೆ. 22660000 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ, ಕಂದಾಯ ವಿಭಾಗದ ಅಧಿಕಾರಿಗಳು ಕರೆ ಸ್ವೀಕರಿಸಿ ಗೊಂದಲ ಬಗೆಹರಿಸುತ್ತಾರೆ. [ಬೆಂಗಳೂರಿಗರೇ ಗಮನಿಸಿ: ಏಪ್ರಿಲ್ 01 ರಿಂದ ಆಸ್ತಿ ತೆರಿಗೆ ಹೆಚ್ಚಳ]

bbmp

ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ? : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ 2 ರೀತಿಯ ಸೌಲಭ್ಯವನ್ನು ನೀಡಿದೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಬಹುದು. ಕೆನರಾ ಬ್ಯಾಂಕ್ ಶಾಖೆಗಳಲ್ಲಿಯೂ ತೆರಿಗೆ ಪಾವತಿ ಮಾಡಬಹುದಾಗಿದೆ. [ಆನ್ ಲೈನ್ ಮೂಲಕ ತೆರಿಗೆ ಕಟ್ಟುವುದು ಹೇಗೆ?]

ಬಿಬಿಎಂಪಿಯ ಯಾವುದೇ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವಂತಿಲ್ಲ. ಬೆಂಗಳೂರು ಒನ್ ಕೇಂದ್ರದಲ್ಲಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಪಾಲಿಕೆ ಇನ್ನೂ ಒದಗಿಸಿಲ್ಲ. ಆನ್‌ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಗದು, ಡಿ.ಡಿ ಅಥವಾ ಪೇ-ಆರ್ಡರ್‌ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.

ತೆರಿಗೆ ಪಾವತಿ ಮಾಡಲು ಜನರು ಅರ್ಜಿ ನಮೂನೆ ಮತ್ತು ಚಲನ್‌ಗಳನ್ನು ಆನ್‌ಲೈನ್‌ನಲ್ಲಿಯೇ ಪಡೆದುಕೊಳ್ಳಬೇಕು. bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿ ಮಾಡುವ ಬಗ್ಗೆ ಮಾಹಿತಿ ಇದೆ.

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿ ವಿಭಾಗದಲ್ಲಿ ಪಿಐಡಿ ಸಂಖ್ಯೆ ನೋಂದಣಿ ಮಾಡಿದರೆ. ಕಳೆದ ಬಾರಿ ತುಂಬಿದ ಕಟ್ಟಿದ ಮಾಹಿತಿ ಸಿಗುತ್ತದೆ. ಸ್ವತ್ತಿನಲ್ಲಿ ಏನಾದರೂ ಬದಲಾವಣೆ ಮಾಡಲಾಗಿದ್ದರೆ ಪರಿಷ್ಕರಣೆಗೂ ಅವಕಾಶ ನೀಡಲಾಗಿದೆ.

ನೆಟ್ ಬ್ಯಾಂಕಿಂಗ್ ಸೌಲಭ್ಯವಿದೆ : ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಲು ನೆಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ನೀಡಲಾಗಿದೆ. ಯಾವುದೇ ಬ್ಯಾಂಕಿನ ಮಾಸ್ಟರ್‌ ಹಾಗೂ ವೀಸಾ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ ಮೂಲಕವೂ ಪಾವತಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತ್ಯೇಕ ಸೇವಾ ಶುಲ್ಕವಿರುವುದಿಲ್ಲ.

ಜನರು ಆನ್‌ಲೈನ್ ಮೂಲಕ ಚಲನ್‌ ಡೌನ್‌ಲೋಡ್ ಮಾಡಿಕೊಂಡು, ಕೆನರಾ ಬ್ಯಾಂಕ್‌ನ ಬೆಂಗಳೂರು ನಗರದ 175 ಶಾಖೆಗಳಲ್ಲಿ ಎಲ್ಲಿ ಬೇಕಾದರೂ ಪಾವತಿ ಮಾಡಬಹುದು. ಚೆಕ್‌ ಮೂಲಕ ತೆರಿಗೆ ಕಟ್ಟಿದರೆ, ನಗದೀಕರಣದ ಬಳಿಕ ರಶೀದಿ ದೊರೆಯುತ್ತದೆ.

ಕಚೇರಿಗಳಿಗೆ ಭೇಟಿ : ಮನೆಯಲ್ಲಿ ಇಂಟರ್‌ನೆಟ್ ಸೌಲಭ್ಯ ಇಲ್ಲದಿದ್ದರೆ ಸಮೀಪದ ಬಿಬಿಎಂಪಿ ಸಹಾಯ ಕೇಂದ್ರ, ನಾಗರಿಕ ಸೇವಾ ಕೇಂದ್ರ ಅಥವ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿ ನೆರವಿನೊಂದಿಗೆ ಆನ್‌ಲೈನ್‌ ನಮೂನೆ ಪಡೆದು, ಚಲನ್ ಪಡೆದುಕೊಂಡು ಬ್ಯಾಂಕ್‌ನಲ್ಲಿ ತೆರಿಗೆ ಪಾವತಿ ಮಾಡಬಹುದು.

ಏ.4ರಿಂದ ಪಾವತಿ ಮಾಡಬೇಕು : ಆಸ್ತಿ ತೆರಿಗೆಯನ್ನು ಏಪ್ರಿಲ್‌ನಲ್ಲಿಯೇ ಪಾವತಿ ಮಾಡಿದರೆ ಶೇ 5ರಷ್ಟು ರಿಯಾಯಿತಿ ದೊರೆಯುತ್ತದೆ. ಮೇ 30ರ ಬಳಿಕ ತೆರಿಗೆ ಪಾವತಿಸಿದರೆ ಶೇ 2ರಷ್ಟು ಬಡ್ಡಿ ಕಟ್ಟಬೇಕು. ಏ.4ರಿಂದ ಬ್ಯಾಂಕ್‌ಗಳಲ್ಲಿ ತೆರಿಗೆ ಕಟ್ಟಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bruhat Bangalore Mahanagara Palike (BBMP) made it easy to pay property tax by using their online system. How to pay property tax, here are the points.
Please Wait while comments are loading...