ಒಂದನೇ ತಾರೀಖು ಸಂಬಳಕ್ಕೆ ಮತ್ತೆ ಕ್ಯೂ ಶುರವಾಗುತ್ತಾ..?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಸ್ಯಾಲರಿ ಆಗಲು ಇರುವುದು ಎರಡೇ ದಿನ ಬಾಕಿ, ಡಿಸೆಂಬರ್ 1ಕ್ಕೆ ಮತ್ತೆ ಸಂಬಳಕ್ಕಾಗಿ ಮಾಡುವ ಕೆಲಸವನ್ನು ಬಿಟ್ಟು ಬ್ಯಾಂಕಿನ ಮುಂದೆ ಕೂರಬೇಕಾ? ಅಥವಾ ಹಣ ಸಿಗುತ್ತದಾ? ಎಂದು ಉದ್ಯೋಗಸ್ಥರು ಮಾತಾಡಿಕೊಳ್ಳುತ್ತಿದ್ದಾರೆ.

ನಗರದ ಎಂಜಿ ರಸ್ತೆ, ಜಯನಗರ ಸೇರಿದಂತೆ ಅನೇಕ ಕಡೆ ಎಟಿಎಂಗಳನ್ನು ಎರಡು ಮೂರು ದಿನಗಳಿಂದ ಗಮನಿಸಿದರೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಬೋರ್ಡ್ ಮಾತ್ರ ಕಾಣ ಸಿಗುತ್ತದೆ. ಕೆಲವರು ಕಾರ್ಡ್ ಇದ್ದರೂ ಎಟಿಎಂನಲ್ಲಿ ಹಣವಿಲ್ಲ ಎಂದು ಬ್ಯಾಂಕಿನಲ್ಲಿ ಕೇಳಿದರೆ ಬ್ಯಾಂಕಿನವರು ಬರುತ್ತದೆ, ನೋಡೋಣ, ಕೊಡುತ್ತೇವೆ, ಬ್ಯಾಂಕಿಗೆ ಬನ್ನಿ ಇತ್ಯಾದಿ ಮಾತನ್ನು ಹೇಳುತ್ತಿದ್ದಾರೆ.[500 ರು ನೋಟಿನ ಕೊರತೆಗೆ ಕಾರಣವೇನು?]

How to get salary in upcoming month

ಬ್ಯಾಂಕಿನಲ್ಲಿ ಹಣವಿದ್ದರೂ ಬಳಸದಂತಹ ಸ್ಥಿತಿಯಲ್ಲಿರುವ ಜನರು ಬ್ಯಾಂಕಿನ ಮುಂದೆ ಪರದಾಡುವ ಪರಿಸ್ಥಿತಿ ಇನ್ನು ಪೂರ್ಣವಾಗಿಲ್ಲ. ಕೆಲವೊಂದು ಕಡೆಗಳಲ್ಲಿ ಬ್ಯಾಂಕಿನ ಮುಂದೆ ಸಣ್ಣದಾಗಿ ಸರತಿ ಸಾಲು ಶುರುವಾಗಿದೆ. ಇನ್ನು ಕೆಲವು ಬ್ಯಾಂಕುಗಳಲ್ಲಿ ರು 50 ರು 10 ನೋಟುಗಳನ್ನು ಎಣಿಸಿಕೊಡುತ್ತಿದ್ದಾರೆ.[ಇಂದಿನಿಂದ 1000 ರು ನೋಟು ಬಳಕೆಯಿಲ್ಲ, 500ರು ಎಲ್ಲಿ ಬಳಸಬಹುದು?]

ಅಲ್ಲದೆ ಆರ್ ಬಿಐ ರು 2000 ಸಾವಿರ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆ. ಆದರೂ ರು 500 ನೋಟುಗಳು ಎಲ್ಲಾ ಬ್ಯಾಂಕುಗಳಲ್ಲಿ ಸರಿಯಾಗಿ ಪೂರೈಕೆಯೇ ಆಗಿಲ್ಲ ಹೀಗಿರುವಾಗ ಮತ್ತೊಂದು ತಿಂಗಳ ಸಂಬಳವನ್ನು ಉದ್ಯೋಗಸ್ಥ ಹೇಗೆ ಪಡೆಯಬೇಕು, ವೃದ್ಧರು ಪೆನ್ಶನ್ ಹೇಗೆ ಪಡೆಯಬೇಕು ಎಂಬುದಕ್ಕೆ ಸರಿಯಾದ ವ್ಯವಸ್ಥೆ ಆಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
First day of the month is nearing. Lakhs of people will be eager to withdraw money from bank ATMs on 1st December or on the date of salary. But, do ATMs have money in it? Many ATMs in Bengaluru are showing 'no money' board. Expect queues to become lengthy before the banks.
Please Wait while comments are loading...