ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ನ.6 : ಮನೆಗೆ ಹೊಸ ಅತಿಥಿ ಆಗಮಿಸಿದ ಸಂತಸದಲ್ಲಿರುವ ಪೋಷಕರು ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯುವುದನ್ನು ಮರೆಯಬಾರದು. 21 ದಿನಗಳವೊಳಗೆ ಜನನ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕು. ಹಲವಾರು ದಾಖಲೆಗಳನ್ನು ಪಡೆಯಲು ಈ ಪ್ರಮಾಣ ಪತ್ರ ಪ್ರಮುಖವಾದ ದಾಖಲೆಯಾಗಿದೆ.

ಬೆಂಗಳೂರಿನಲ್ಲಿ ಜನನ ಪ್ರಮಾಣ ಪತ್ರ ಹೇಗೆ ಪಡೆಯಬೇಕು?, ಅರ್ಜಿ ಎಲ್ಲಿ ಸಿಗುತ್ತದೆ? ಮುಂತಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆನ್‌ಲೈನ್‌ ಮೂಲಕವೇ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು. ಅರ್ಜಿಯೂ ಬಿಬಿಎಂಪಿ ವೆಬ್ ಸೈಟ್‌ನಲ್ಲಿ ಲಭ್ಯವಿದೆ. [ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ]

Child

ಪ್ರಮುಖ ದಾಖಲೆ : ನಿಮ್ಮ ಜನ್ಮ ದಿನಾಂಕವನ್ನು ತಿಳಿಸುವ ಪ್ರಮುಖ ದಾಖಲೆ ಜನನ ಪ್ರಮಾಣ ಪತ್ರವಾಗಿದೆ. ಮಗು ಹುಟ್ಟಿದ 21 ದಿನಗಳವೊಳಗೆ ನೀವು ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಸಂಬಂಧಿಸಿದ ಕಚೇರಿಯಿಂದ ಅದನ್ನು ಪಡೆಯಬಹುದಾಗಿದೆ. ಆಸ್ಪತ್ರೆಗಳಿಂದಲೇ ನೀವು ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಎಲ್ಲಿ ರಿಜಿಸ್ಟರ್ ಮಾಬೇಕು : ಮಗು ಸರ್ಕಾರಿ ಅಥವ ಖಾಸಗಿ ಆಸ್ಪತ್ರೆಯಲ್ಲಿ ಹುಟ್ಟಿರಲಿ ಆಸ್ಪತ್ರೆಯ ಸಿಬ್ಬಂದಿಯನ್ನು ನೀವು ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂದು ವಿಚಾರಿಸಿ. ಖಾಸಗಿ ಆಸ್ಪತ್ರೆಗಳು ಸಹ ಬಿಬಿಎಂಪಿ ಕಚೇರಿಯೊಂದಿಗೆ ಸಂಪರ್ಕದಲ್ಲಿರುತ್ತವೆ, ಅಲ್ಲಿ ನಿಮಗೆ ಅರ್ಜಿ ದೊರೆಯುತ್ತದೆ. [ಬೆಂಗಳೂರು ಒನ್ ಕೇಂದ್ರದ ವಿಳಾಸ]

ಅರ್ಜಿ ಸಲ್ಲಿಸಿದ ನಂತರ ನಿಮ್ಮ ಸಮೀಪದ ಬೆಂಗಳೂರು ಒನ್ ಕಚೇರಿಗೆ ಅಥವ ಬಿಬಿಎಂಪಿ ಕೇಂದ್ರ ಕಚೇರಿಗೆ ಹೋಗಿ ನೀವು ಸಲ್ಲಿಸಿದ ಅರ್ಜಿ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ, ನಂತರ ಪ್ರಮಾಣ ಪತ್ರ ಪಡೆಯಲು ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ದಾಖಲಾತಿ ತೆಗೆದುಕೊಂಡು ಹೋಗಿ : ಬೆಂಗಳೂರು ಒನ್ ಕೇಂದ್ರ ಜನನ ಪ್ರಮಾಣ ಪತ್ರವನ್ನು ನೀಡುವ ಅಧಿಕಾರವನ್ನು ಹೊಂದಿದೆ. ಅಲ್ಲಿ ನೀವು ಸಲ್ಲಿಸಿದ ಅರ್ಜಿಯಲ್ಲಿರುವ ಮಾಹಿತಿ ಅನ್ವಯ ಪ್ರಮಾಣ ಪತ್ರವನ್ನು ಅಧಿಕಾರಿಗಳು ಭರ್ತಿ ಮಾಡುತ್ತಾರೆ. ತಿದ್ದುಪಡಿಗಳಿದ್ದರೆ ನೀವು ಅಲ್ಲಿಯೇ ಸೂಚಿಸಬಹುದು.

ಮಗುವಿನ ಪೋಷಕರ ವಿಳಾಸ, ತಂದೆ ಮತ್ತು ತಾಯಿ ಹೆಸರು, ಮಗುವಿನ ಹೆಸರು ಮುಂತಾದ ವಿವರಗಳನ್ನು ಭರ್ತಿ ಮಾಡಲಾಗುತ್ತದೆ. ಆದ್ದರಿಂದ ನೀವು ವಿಳಾಸ ದೃಡೀಕರಣಕ್ಕಾಗಿ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ನಿಮ್ಮ ವಿವಾಹ ನೋಂದಣಿ ಪತ್ರವನ್ನು ತೆಗೆದುಕೊಂಡು ಹೋಗಬೇಕು.

ಆನ್‌ಲೈನ್‌ನಲ್ಲಿ ನೋಂದಣಿ : ಬೆಂಗಳೂರು ಒನ್ ಕೇಂದ್ರದ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ಆನ್‌ಲೈನ್ ಮೂಲಕವೂ ಜನನ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಎಲ್ಲಾ ಹೆಸರು ಮತ್ತು ಮಾಹಿತಿ ಸರಿಯಾಗಿಯೇ ನೋಡಿಕೊಂಡು ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಕೆಲವು ದಿನಗಳಲ್ಲಿ ಪ್ರಮಾಣ ಪತ್ರ ನಿಮ್ಮ ವಿಳಾಸಕ್ಕೆ ಬರುತ್ತದೆ.

ಆನ್‌ಲೈನ್ ಮೂಲಕ ನೋಂದಣಿ ಮಾಡಿದರೆ, 25 ರೂ. ಸೇವಾಶುಲ್ಕ, 5 ರೂ. ಪ್ರಮಾಣ ಪತ್ರಕ್ಕೆ 5 ರೂ. ಮತ್ತು ಕೋರಿಯರ್ ಶುಲ್ಕಕ್ಕೆ 10 ರೂ. ಪಾವತಿ ಮಾಡಬೇಕು. [ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯುವುದು ಹೇಗೆ?]

English summary
Birth certificate is an important document which is to be used as your residential proof. It is kind of proof in which there are information about your date of birth.How to get birth certificate in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X