ಬ್ಯಾಂಕಿನಲ್ಲಿ ಹಣವಿಲ್ಲ: ಸಾಮಾನ್ಯನ ಸಹನೆಗೆ ಮಿತಿಯಿಲ್ಲವೇ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್.30; ಆರ್ ಬಿಐ ರು 2000 ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆ. ದೇಶದ ಬ್ಯಾಂಕುಗಳಿಗೆ ರು 500 ಮುಖಬೆಲೆಯ ನೋಟುಗಳು ಸರಿಯಾಗಿ ರವಾನೆಯಾಗಿಲ್ಲ ತಿಂಗಳು ಮುಗಿದು ಹೊಸ ತಿಂಗಳು ಪ್ರಾರಂಭಿವಾಗಲಿದೆ ಜನರಿಗೆ ಬ್ಯಾಂಕಿನಲ್ಲಿ ಹಣವಿದೆಯೇ?, ಇಲ್ಲವೇ? ತಿಳಿಯದಂತಾಗಿದೆ.

ಮನೆ ಬಾಡಿಗೆ, ಕರೆಂಟ್ ಬಿಲ್, ಹಾಲಿನವನಿಗೆ ನೀಡುವ ಹಣ, ತಿಂಗಳ ರೇಶನ್ ಇತ್ಯಾದಿಯಾಗಿ ಮನೆಯ ಬಜೆಟ್ ತಿಂಗಳ ಪ್ರಾರಂಭದಿಂದಲೇ ಶುರುವಾಗಿ ಜನರು ಖರ್ಚಿಗೆ ಮುಂದಾಗುತ್ತಾರೆ. ತಿಂಗಳ ಮೊದಲ ದಿನ ಉದ್ಯೋಗಸ್ಥರಿಗೆ ಸಂಬಳವಾಗಿ ಬ್ಯಾಂಕು, ಎಟಿಎಂಗಳಲ್ಲಿ ಹಣಕ್ಕೆ ಸಾಲು ನಿಲ್ಲುವ ಪರಿಸ್ಥಿತಿ ಎದುರಾಗಿದೆ.[ಒಂದನೇ ತಾರೀಖು ಸಂಬಳಕ್ಕೆ ಮತ್ತೆ ಕ್ಯೂ ಶುರವಾಗುತ್ತಾ..?]

How to common man survive in new money in December

ಮಂಗಳವಾರ ಖಾತೆದಾರರಿಗೆ ನಗದಿನ ಪೂರೈಕೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವಿಧ ಬ್ಯಾಂಕುಗಳ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದಾರೆ. ದೇಶದಲ್ಲಿ ಶೇ.70 ರಷ್ಟು ಮಂದಿ ನೇರ ನಗದಿನಲ್ಲಿಯೇ ವ್ಯವಹಾರ ನಡೆಸುತ್ತಿದ್ದು, ಅವರಿಗೆ ಹಣ ಹೊಂದಿಸಿಕೊಡಲೇ ಬೇಕಾಗಿದೆ. ಇನ್ನು ಶೇ.30 ರಷ್ಟುಜನ ಇ-ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಗಳಲ್ಲಿ ಖರೀದಿ ನಡೆಸುತ್ತಾರೆ. ಈ ಶೇ, 70ರಷ್ಟು ಜನಕ್ಕೆ ಬ್ಯಾಂಕ್ ಹೇಗೆ ಹಣ ಒದಗಿಸುತ್ತದೆ ಎಂಬುದೇ ಪ್ರಶ್ನೆಯಾಗಿದೆ.

ಆರ್ ಬಿಐನಿಂದ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿರುವುದು ಕೇವಲ ರು 170 ಕೋಟಿ ಮಾತ್ರ ಇದನ್ನು ಬೆಂಗಳೂರಿನ ಎಲ್ಲ ಬ್ಯಾಂಕುಗಳಿಗೂ ವಿತರಿಸಬೇಕಿದೆ. ನೋಟು ರದ್ದಾಗುವುದಕ್ಕಿಂತ ಮುನ್ನ ಒಂದು ಬ್ಯಾಂಕ್ ಶಾಖೆಗೆ ಒಂದು ಕೋಟಿ ಹಣ ಬರುತ್ತಿತ್ತು. ಈಗ ರು.5-8 ಲಕ್ಷ ಹಣ ಮಾತ್ರ ಬರುತ್ತಿದೆ.[500 ರು ನೋಟಿನ ಕೊರತೆಗೆ ಕಾರಣವೇನು?]

How to common man survive in new money in December

ಈ ಎಲ್ಲ ವರ್ತಮಾನದ ಸಂಗತಿಗಳನ್ನು ಗಮನಿಸಿದರೆ ಸಾಮಾನ್ಯ ಜನರಿಗೆ ಮತ್ತೊಮ್ಮೆ ಸಹನೆಗೆ ಪರೀಕ್ಷೆಯನ್ನೊಡ್ಡುವ ಸಂದರ್ಭವನ್ನು ಆರ್ ಬಿಐ ಮಾಡಲಿದೆ ಎನ್ನಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Note ban: RBI not send the notes in all bank properly.Rs2000 notes is not printing, Rs500 note are not circulate properly, December is coming what hapan in common man in money situation.
Please Wait while comments are loading...