ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?

Posted By:
Subscribe to Oneindia Kannada

ಬೆಂಗಳೂರು, ಜನವರಿ 06 : ಕಮ್ಮನಹಳ್ಳಿಯಲ್ಲಿ ಜನವರಿ 1ರ ರಾತ್ರಿ ಯುವತಿಯ ಮೇಲೆ ನಡೆದ ಲೈಂಗಿಕ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಪುಂಡರನ್ನು ಬಂಧಿಸಿದ್ದರು. ಅವರಲ್ಲಿ ಇಬ್ಬರು ಯುವತಿಗೆ ಮುತ್ತಿಕ್ಕಿ ದೌರ್ಜನ್ಯ ನಡೆಸಿದ್ದು ಖಚಿತವಾಗಿದೆ.

ಆದರೆ, ಆ ಕಾಮುಕ ಕಿಡಿಗೇಡಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದು ಹೇಗೆ? ಆ ಹೀನಾಯ ಘಟನೆಗೆ ಸಾಕ್ಷಿಯಾಗಿದ್ದ ಆ ಬಡಾವಣೆಯ ಮನೆಯ ಮಾಲಿಕರೊಬ್ಬರ ಸಿಸಿಟಿವಿ ಫುಟೇಜ್ ನ ಸಹಾಯದಿಂದ ಪೊಲೀಸರು ಲಿನೋ ಮತ್ತು ಅಯ್ಯಪ್ಪರನ್ನು ಬಂಧಿಸುವಲ್ಲಿ ಹೇಗೆ ಯಶಸ್ವಿಯಾದರು ಎಂಬುದು ಸದ್ಯದ ಕುತೂಹಲದ ಸಂಗತಿಯಾಗಿದೆ.

ಬಂಧಿತರಾಗಿರುವ ಲಿನೋ, ಅಯ್ಯಪ್ಪ, ಸೋಮು ಮತ್ತು ಸುದೇಶ್ ಕಮ್ಮನಹಳ್ಳಿಯಲ್ಲಿ ಗೂಂಡಾಗಿರಿ ಮಾಡಿಕೊಂಡು, ಪ್ರಶ್ನಿಸಿದವರ ಮೇಲೆ ದರ್ಪ ತೋರುತ್ತ 'ಬ್ಯಾಡ್ ಬಾಯ್ಸ್' ಎಂದು ಕುಖ್ಯಾತಿ ಗಳಿಸಿದ್ದರು. ಇದೇ ಸಂಗತಿ ಕಿರಾತಕರನ್ನು ಹೆಡೆಮುರಿಕಟ್ಟಿ ಅಂದರ್ ಮಾಡಲು ಸಹಾಯ ಮಾಡಿದ್ದು.[ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?]

How police arrested Kammanahalli sexual harassment culprits

ಮನೆಯ ಮಾಲಿಕರ ಸಿಸಿಟಿವಿ ಕ್ಯಾಮೆರಾ ಮಾತ್ರವಲ್ಲ ಸುತ್ತಲಿನ ನಾಲ್ಕು ಬಡಾವಣೆಗಳ ಸಿಸಿಟಿವಿ ಕ್ಯಾಮೆರಾ ಫುಟೇಜನ್ನೂ ಪೊಲೀಸರು ಸಂಗ್ರಹಿಸಿದ್ದಾರೆ. ಒಂದು ವಿಡಿಯೋದಲ್ಲಿ ಕುಳ್ಳಪ್ಪ ವೃತ್ತದ ಬಳಿಯಿರುವ ರಾಜ್ ಕುಮಾರ್ ಪಾರ್ಕ್ ಹತ್ತಿರ ಕುಳಿತಿದ್ದರು. ಇದರಿಂದ ಇವರು ಪಕ್ಕಾ ಲೋಕಲ್ ಎಂಬುದು ಸಾಬೀತಾಯಿತು.

ಈ ನಾಲ್ವರ ಫೊಟೋ ಮತ್ತು ಸ್ಕೆಚ್ ಹಿಡಿದುಕೊಂಡು ಪೊಲೀಸರು ಬೀದಿಗಿಳಿದಿದ್ದಾರೆ. ಅಲ್ಲಿರುವ ಮನೆ ಮಾಲಿಕರು, ಅಂಗಡಿ ಮಾಲಿಕರು, ಇತರ ವೃತ್ತಿಗಾರರು, ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಶಾಲಾಕಾಲೇಜುಗಳಿಗೂ ಹೋಗಿ ಇವರ ಬಗ್ಗೆ ಅಮೂಲಾಗ್ರವಾಗಿ ವಿಚಾರಿಸಿದ್ದಾರೆ.[ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ: ಸಿದ್ದು]

ಅವರಲ್ಲಿ ಓರ್ವ ಸೋಮಶೇಖರ್ ಅಲಿಯಾಸ್ ಚಿನ್ನಿ ಎಂಬುದು ಓರ್ವ ಕಾಲೇಜು ವಿದ್ಯಾರ್ಥಿನಿಯಿಂದ ತಿಳಿದುಬಂದಿದೆ. ಆತ ಆ ಯುವತಿಗೆ ಹಿಂದೆ ಅಸಹ್ಯಕರವಾದ ಮಾತುಗಳಿಂದ ಹಿಂಸೆ ನೀಡಿದ್ದ. ಆತನ ಪೂರ್ವಾಪರ ತಿಳಿದುಕೊಂಡ ಪೊಲೀಸರು ಆತ ಆನ್ ಲೈನ್ ಪೋರ್ಟಲ್ ಗಳ ಡೆಲಿವರಿ ಬಾಯ್ ಎಂಬುದು ತಿಳಿದುಬಂದಿದೆ.

ಆ ಪೋರ್ಟಲ್ ಗಳಿಂದ ಉತ್ಪನ್ನಗಳನ್ನು ಪಡೆಯುವ ನೆಪವೊಡ್ಡಿ ಆತನ ಮೊಬೈಲ್ ನಂಬರ್ ಮತ್ತು ಆ ಕರಾಳ ರಾತ್ರಿ ಆತ ಮಾತನಾಡಿದ ಮೊಬೈಲ್ ಟವರ್ ವಿವರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಆ ಯುವತಿಯನ್ನು ತಬ್ಬಿ, ಮುತ್ತಿಕ್ಕಿ ಚಿತ್ರಹಿಂಸೆ ನೀಡಿದ ಸಮಯದಲ್ಲಿ ಚಿನ್ನಿ ಆ ಸ್ಥಳದಲ್ಲೇ ಇದ್ದ!

ಚಿನ್ನಿಯನ್ನು ಬೆನ್ನತ್ತಿ ಹಿಡಿಯಲು ಪೊಲೀಸರಿಗೆ ಹೆಚ್ಚುಹೊತ್ತು ಹಿಡಿಯಲಿಲ್ಲ. 'ನಾನೇನು ತಪ್ಪು ಮಾಡಿಲ್ಲ ಸಾ' ಎಂದು ಚಿನ್ನ ಕೈಮುಕ್ಕೊಂಡು ನಿಂತ. ನೀನೇ ಮಾಡಿದ್ದಿ ಅಂತ ಹೇಳೋಕೆ ನಮ್ಮ ಬಳಿ ಸಾಕ್ಷಿ ಐತೆ ಅಂತ ಪೊಲೀಸರು ಹೇಳಿದಾಗ ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದ. ಕೂಡಲೆ ಆ ಘಟನೆಯಲ್ಲಿ ಭಾಗಿಯಾದವರ ಹೆಸರು ಬಾಯಿಬಿಟ್ಟ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How Bengaluru police arrested Kammanahalli sexual harassment culprits? There is an interesting story behind how police went behind the criminals with the help of cctv cameras in that areas.
Please Wait while comments are loading...