ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆಟ್ರೋಲ್ ಬಂಕಲ್ಲಿ ಗ್ರಾಹಕರ ಜೇಬಿಗೆ ಕತ್ತರಿ, ವಂಚನೆಗೆ ನಾನಾ ದಾರಿ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜನವರಿ 24: ವರ್ಷದಿಂದ ವರ್ಷಕ್ಕೆ ರಸ್ತೆ ಮೇಲೆ ಕಾಣಿಸಿಕೊಳ್ಳುವ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ತೈಲ ಬೆಲೆ ಕೂಡ ಆಕಾಶದ ಕಡೆಗೆ ಮುಖ ಮಾಡಿದೆ. ಆದರೆ ಹಲವು ಪೆಟ್ರೋಲ್ ಬಂಕ್ ಗಳ ಮಾಲೀಕರು ಗ್ರಾಹಕರ ಕಿಸೆಯಿಂದ ಅವರಿಗೆ ಗೊತ್ತಾಗದಂತೆ ಕತ್ತರಿ ಹಾಕುತ್ತಿದ್ದಾರೆ. ಅದು ಹೇಗೆ ಮೋಸ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.

ಪೆಟ್ರೋಲ್ ಹಾಕಿಸುವಾಗ ಅದರ ಪೈಪ್ ನ ಮೂತಿಯ ಸ್ವಲ್ಪ ಹಿಂಭಾಗವನ್ನು ಕೈಯಲ್ಲಿ ಹಿಡಿದು ನಿಂತು, ಟ್ಯಾಂಕ್ ಗೆ ತೈಲ ತುಂಬಿಸುವ ಸರ್ವೀಸ್ ಸ್ಟೇಷನ್ ನ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಸರಾಗವಾಗಿ ಪೆಟ್ರೋಲ್ ತುಂಬದಂತೆ ಪದೇ ಪದೇ ತಡೆದು ಹಾಕ್ತಾನೆ. ಆ ರೀತಿ ಮಾಡುವುದರಿಂದ ಪೆಟ್ರೋಲ್ ಕಡಿಮೆ ಪ್ರಮಾಣದಲ್ಲಿ ಟ್ಯಾಂಕ್ ಸೇರುತ್ತೆ.[ಮೈಸೂರಿನಲ್ಲಿ ಇಂಧನ ಬೆಲೆ ಏರಿಕೆಗೆ ವಿರೋಧ: ಪ್ರತಿಭಟನೆ]

ಇನ್ನೂ ವಿವರವಾಗಿ ಹೇಳಬೇಕು ಅಂದರೆ ನಿಮಗೆ ಕಾಣಿಸುವಂತೆ ಇರುವ ಸ್ಕ್ರೀನ್ ನಲ್ಲಿ ತೋರಿಸುವ ಪೆಟ್ರೋಲ್ ಪ್ರಮಾಣವೇ ಬೇರೆ, ಟ್ಯಾಂಕ್ ನಲ್ಲಿ ತುಂಬುವ ಪ್ರಮಾಣವೇ ಬೇರೆಯಾಗಿರುತ್ತದೆ. ನೀವು ಕೊಟ್ಟ ಹಣಕ್ಕೆ ತಕ್ಕಷ್ಟು ಪೆಟ್ರೋಲ್ ಹಾಕಿರುವುದೇ ಇಲ್ಲ.[ಸಾಂದರ್ಭಿಕ ಚಿತ್ರ]

ಪೈಪ್ ಹಿಂದಕ್ಕೆ ತೆಗೆದುಬಿಡ್ತಾರೆ

ಪೈಪ್ ಹಿಂದಕ್ಕೆ ತೆಗೆದುಬಿಡ್ತಾರೆ

ಪೆಟ್ರೋಲ್ ತುಂಬುವ ಪೈಪ್ ನ ಮೂತಿಯನ್ನು ಟ್ಯಾಂಕ್ ನೊಳಗೆ ತೂರಿಸುತ್ತಾರೆ. ಆ ನಂತರ ನೀವು ಹೇಳಿದ ಪ್ರಮಾಣದ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮುಂಚೆಯೇ ಅದನ್ನು ಹಿಂದಕ್ಕೆ ತೆಗೆದುಬಿಡ್ತಾರೆ. ಆ ಪೈಪ್ ನಲ್ಲಿ ಇನ್ನೂ ಸ್ವಲ್ಪ ಪ್ರಮಾಣದ ತೈಲ ಇದ್ದೇ ಇರುತ್ತದೆ.

ಗಮನ ಬೇರೆಡೆ ಸೆಳೆದು

ಗಮನ ಬೇರೆಡೆ ಸೆಳೆದು

ಮತ್ತೊಂದು ವಿಧದ ಮೋಸ ಅಂದರೆ ಗ್ರಾಹಕರ ಗಮನ ಬೇರೆಡೆ ಸೆಳೆದು ವಂಚಿಸುವುದು. ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಗ್ರಾಹಕರ ಜತೆಗೆ ಮಾತಿಗೆ ಇಳಿಯುತ್ತಾರೆ. ಆ ನಂತರ ಪ್ರಮಾಣದಲ್ಲಿ ನಿಮಗೇ ಗೊತ್ತಿಲ್ಲದೆ ಟೊಪ್ಪಿ ಬಿದ್ದಿರುತ್ತದೆ.

ಗಣಿತ ಚಮತ್ಕಾರ

ಗಣಿತ ಚಮತ್ಕಾರ

ಇನ್ನೊಂದು ಗಣಿತದ ಚಮತ್ಕಾರವಿದೆ. ಉದಾಹರಣೆಗೆ ನೀವು 1000 ರುಪಾಯಿಗೆ ಪೆಟ್ರೋಲ್ ಹಾಕುವಂತೆ ಹೇಳುತ್ತೀರಿ. ಅದರಂತೆ 200 ರುಪಾಯಿವರೆಗೆ ತೈಲ ಟ್ಯಾಂಕ್ ಸೇರುತ್ತದೆ. ಪೆಟ್ರೋಲ್ ಹಾಕುತ್ತಿರುವ ವ್ಯಕ್ತಿಗೆ ದಿಢೀರ್ ಅನುಮಾನ ಕಾಡುತ್ತದೆ. ಸಾ..ನೀವು ಎಷ್ಟಕ್ಕೆ ಪೆಟ್ರೋಲ್ ಹಾಕಕ್ಕೆ ಹೇಳಿದ್ದು ಅಂತಾನೆ. ಸಾವಿರ ಅಂತೀರಿ. ಸರಿ ಅಂತ ಮತ್ತೆ ಪೆಟ್ರೋಲ್ ಹಾಕೋಕೆ ಶುರು ಮಾಡಿ, 800 ರುಪಾಯಿಗೆ ನಿಲ್ಲಿಸಿ ಬಿಡ್ತಾನೆ. ಮೊದಲು 200 ರುಪಾಯಿಗೆ ಹಾಕಿದ್ದು, ಆ ನಂತರ 800 ಸೇರಿ ಸಾವಿರ ರುಪಾಯಿ ಆಯ್ತಲ್ಲ ಅಂದುಕೊಳ್ಳಬೇಕು.

ಸೊನ್ನೆಯಿಂದ ಆರಂಭಿಸಿರೋದಿಲ್ಲ

ಸೊನ್ನೆಯಿಂದ ಆರಂಭಿಸಿರೋದಿಲ್ಲ

ಆದರೆ, ಆತ ಮತ್ತೆ ಸೊನ್ನೆಯಿಂದ ಆರಂಭಿಸಿರೋದಿಲ್ಲ. ಎಂಟುನೂರು ರುಪಾಯಿಗೆ ಮಾತ್ರ ಪೆಟ್ರೋಲ್ ಹಾಕಿರ್ತಾನೆ. ಇನ್ನೂ ಕೆಲವು ಕಡೆ ಮೀಟರ್ ನಲ್ಲೇ ಹೊಂದಾಣಿಕೆ ಮಾಡುತ್ತಾರೆ. ಐನೂರು ರುಪಾಯಿಗೆ ಪೆಟ್ರೋಲ್ ಹಾಕಿ ಅಂತ ಹೇಳಿದರೆ, ನಿಮ್ಮನ್ನು ಮಾತನಾಡಿಸುತ್ತಲೇ ಮೀಟರ್ ನಲ್ಲಿ 500 ಕಾಣಿಸಿಬಿಡುತ್ತೆ. ಓಹ್, ಪೂರ್ತಿ ಆಯಿತು ಅಂತ ನೀವಂದುಕೊಂಡಿರ್ತೀರಿ. ನಿಮ್ಮ ಎದುರಿನ ವ್ಯಕ್ತಿ ತನ್ನ ಕೈ ಚಳಕೆ ತೋರಿ ಟೋಪಿ ಮಡಗಿರ್ತಾನೆ.

ವಂಚನೆ ಕಂಡು ಹಿಡಿಯುವುದು ಹೇಗೆ

ವಂಚನೆ ಕಂಡು ಹಿಡಿಯುವುದು ಹೇಗೆ

ಹಾಗಾದರೆ ಮೋಸ ಕಂಡುಹಿಡಿಯುವುದು ಹೇಗೆ ಅಂತೀರಾ? ಪೆಟ್ರೋಲ್ ಬಂಕ್ ನಲ್ಲಿ RS 500 ಅಂತ ಹಾಕಿದರೆ ಡಿಸ್ ಪ್ಲೇ ಸ್ಥಿರವಾಗಿರುತ್ತದೆ. ಬರೀ 500 ಅಂತ ಹಾಕಿದರೆ ಡಿಸ್ ಪ್ಲೇ ಮಿಣಕ ಮಿಣಕ ಅಂತ ಹೊಳೆಯುತ್ತಲೇ ಇರುತ್ತದೆ. RS 500 ಎಂದು ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

English summary
With the number of vehicles plying on the road increasing every year, fuel prices are skyrocketing. Many petrol bunk owners are cheating customers and pocketing the money. How petrol pumps cheat your money. Here's how customers are being hoodwinked at petrol bunks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X