ಬೆಂಗಳೂರಿನಲ್ಲಿ ಇನ್ನು ಉಳಿಯುವ ಮರಗಳೆಷ್ಟು?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 19: ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ಇತ್ತೀಚೆಗೆ ಎಗ್ಗುಸಿಗ್ಗಿಲ್ಲದೆ ಬೆಳೆಯುತ್ತದೆ. ಸಿಟಿಯ ಮೂಲ ಸ್ವರೂಪವೇ ಬದಲಾಗುತ್ತಿದ್ದಾಗ ಬೆಂಗಳೂರಿನಲ್ಲಿ ಉಳಿಯುವ ಮರಗಳೆಷ್ಟು ಎಂಬ ಪ್ರಶ್ನೆ ಮೂಡದೇ ಇರದು?

ಇತ್ತೀಚೆಗೆ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಒಲವು ತೋರುತ್ತಿದ್ದ ಪರಿಸರ ಪ್ರೇಮಿಗಳು ಸುಮಾರು 812ಕ್ಕೂ ಅಧಿಕ ಮರಗಳು ನಾಶವಾಗುತ್ತವೆ ಎಂದು ವಿರೋಧ ವ್ಯಕ್ತ ಪಡಿಸಿದ್ದವು.

tree

ಕನಕಪುರ ರೋಡಿನಲ್ಲಿರುವ ರಾಯಸಂದ್ರ ಹೌಸಿಂಗ್ ಬೋರ್ಡ್ ಗಾಗಿ ಒಟ್ಟು 4,116 ಮರಗಳನ್ನು ಕತ್ತರಿಸಲು ಚಿಂತಿಸಿದೆ. ಹಾಗೆಯೇ ಇಬ್ಬರು ಡೆವೆಲಪರ್ಸ್ ಗಳು ಬೇರೆ ಬೇರೆ ಪ್ರಾಜೆಕ್ಟ್ ಗಳಿಗಾಗಿ ಜಕ್ಕಸಂದ್ರ ಮತ್ತು ಕೆಆರ್ ಪುರಂ ನಲ್ಲಿ ಕ್ರಮವಾಗಿ 730 ಮತ್ತು 806 ಮರಗಳನ್ನು ಕಡೆಯಲು ಮುಂದಾಗಿದ್ದಾರೆ.[ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?]

ಬೆಂಗಳೂರು ಮಿರರ್ ಸರ್ವೆ ಪ್ರಕಾರ 2011-2014 ರ ವೇಳೆಗೆ ನಮ್ಮ ಮೆಟ್ರೋ ಮತ್ತು ರಸ್ತೆ ಅಗಲೀಕರಣಕ್ಕೆ ಸುಮಾರು 8000- 9,218 ಮರಗಳ್ನು ಕಡಿಯಲಾಗಿದೆ ಎಂದು ತಿಳಿಸಿದೆ.

ಇನ್ನು ಬೆಂಗಳೂರಿನಲ್ಲಿ 2001 ರಿಂದ 2011 ರ ವೇಳೆಗೆ 65 ಲಕ್ಷ ವಿದ್ದ ಜನಸಂಖ್ಯೆ 95 ಲಕ್ಷಕ್ಕೂ ಹೆಚ್ಚಾಗಿದೆ. ಅಂದರೆ ಹತ್ತು ವರ್ಷದಲ್ಲಿ ದ್ವಿಗುಣಗೊಂಡಿದೆ. ಇದೇ ಅವಧಿಯಲ್ಲಿ ಭೂಮಿ ಮತ್ತು ಜಮೀನಿಗಾಗಿ ಮರಗಳನ್ನು ಹೆಚ್ಚು ಕಡಿಯಲಾಗಿದೆ.[ಕೊಡಗಿನ ಕಂಪು ಸೂಸುವ ಶ್ರೀಗಂಧದ ಸಾವಿನ ಕಥೆ!]

2014ರಲ್ಲಿ ಅಧ್ಯಯನ ನಡೆಸಲಾದ 'ಟ್ರೀ ಆಫ್ ಬೆಂಗಳೂರು' ಬಗ್ಗೆ ಮಾತನಾಡಿರುವ ಇಂಡಿಯನ್ ಇನ್ಸಟಿಟ್ಯೂಟಿನ ಟಿ.ವಿ ರಾಮಚಂದ್ರ ಹೇಳುವಂತೆ ಶೇ 46ರಷ್ಟು ಮರಗಳು ಇಲ್ಲವಾಗಿವೆ ಎಂದಿದ್ದಾರೆ. ಇದೇ ರೀತಿ ಮುಂದುವರೆದರೆ 2020ರ ವೇಳೆಗೆ ಹೆಚ್ಚಿನ ಮಾಲಿನ್ಯದಿಂದಾಗಿ ಬೆಂಗಳೂರಿನ ರೂಪವೇ ಬದಲಾಗುತ್ತದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as the strong protest against the proposed steel flyover in the city which could axe 812 trees is yet to die down, the Karnataka Housing Board plans to chop down 4,166 trees for a housing project in Rayasandra on Kanakpura Road. Two private developers have also sought permission to cut 730 and 806 trees for separate projects in Jakkasandra and KR Puram.
Please Wait while comments are loading...