ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಣ ಹುಡುಗಿ ಕಾಂಗ್ರೆಸ್ ಪಾಸು ಮಾಡಿಸಿದ ಲೆಕ್ಕದ ಮೇಷ್ಟ್ರು ದೇವೇಗೌಡರು

|
Google Oneindia Kannada News

Recommended Video

Jayanagar Elections Results 2018 : ಸೌಮ್ಯ ರೆಡ್ಡಿ ಗೆಲುವಿನ ಹಿಂದೆ ದೇವೇಗೌಡ್ರ ಕೈ ಚಳಕ ಇದ್ಯಾ?

ಬೆಂಗಳೂರು ನಗರ ಜಿಲ್ಲೆಯ ಜಯನಗರ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ. ಹೀಗೆ ಏನಾದರೂ ವಿಶ್ಲೇಷಣೆ ಬರೆದರೆ, ಏನು ಜಯನಗರದ ಮತದಾರರು ಬಿಜೆಪಿ ಪಾಲಿಗೆ ಆಸ್ತಿಯೆ? ಮತದಾರರೇನಾದರೂ ಬಿಜೆಪಿಯನ್ನೇ ಗೆಲ್ಲಿಸುವುದಾಗಿ ಬರೆದುಕೊಟ್ಟಿದ್ದಾರಾ ಎಂದು ಸಿಟ್ಟಾಗುವ ಸಾಧ್ಯತೆ ಇದೆ.

ಆದರೆ, 2008 ಹಾಗೂ 2013ರ ವಿಧಾನಸಭಾ ಚುನಾವಣೆಯ ಫಲಿತಾಂಶ ಗಮನಿಸಿದರೆ, ಈ ಸಲ ಬಿಜೆಪಿಯು ತನ್ನದೊಂದು ನೆಲೆ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದರೆ ಜೆಡಿಎಸ್ ನಿಂದ ಅಭ್ಯರ್ಥಿಯನ್ನು ವಾಪಸ್ ತೆಗೆಸಿ, ಕಾಂಗ್ರೆಸ್ ಗೆ ಬೆಂಬಲ ಸೂಚಿಸದಿದ್ದರೆ ಸೌಮ್ಯಾ ರೆಡ್ಡಿ ಅವರ ಸ್ಥಿತಿ ಈಗಿನ ಹಂತಕ್ಕೆ ಬಂದಿರುತ್ತಿರಲಿಲ್ಲ ಎಂಬುದನ್ನೇ ಈ ಹಿಂದಿನ ಚುನಾವಣಾ ಫಲಿತಾಂಶದ ಸಂಖ್ಯೆಗಳು ಬಹಿರಂಗಪಡಿಸುತ್ತವೆ.

ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳುಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳು

ಈ ಎರಡು ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಇಲ್ಲಿ ನಿಂತು ಜಯ ಗಳಿಸಿದ ಬಿಜೆಪಿಯ ಬಿ.ಎನ್.ವಿಜಯ್ ಕುಮಾರ್ ಗಳಿಸಿದ ಮತಗಳ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸ ಆಗಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದ ಮತಗಳ ಲೆಕ್ಕಾಚಾರದಲ್ಲಿ ಗಮನಾರ್ಹ ಏರಿಕೆ ಆಗಿದೆ. ಒಂದು ವೇಳೆ ಜೆಡಿಎಸ್ ನಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ ಎಂಟರಿಂದ ಹತ್ತು ಸಾವಿರ ಮತಗಳು ಕೀಳುವ ಸಾಧ್ಯತೆಯಿತ್ತು.

2018ರಲ್ಲಿ ಪಡೆದ ಮತಗಳು

2018ರಲ್ಲಿ ಪಡೆದ ಮತಗಳು

ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 54,457

ಬಿಜೆಪಿಯ ಬಿ.ಎನ್.ಪ್ರಹ್ಲಾದ್ 51,568

ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,861

ಮೂರು ಸಾವಿರಕ್ಕಿಂತ ಕಡಿಮೆ ಮತಗಳ ಅಂತರ

ಮೂರು ಸಾವಿರಕ್ಕಿಂತ ಕಡಿಮೆ ಮತಗಳ ಅಂತರ

ಆ ಪೈಕಿ ಕಾಂಗ್ರೆಸ್ ನ ಸಾಂಪ್ರದಾಯಿಕ ಮತ ಬುಟ್ಟಿಗೇ ಜೆಡಿಎಸ್ ಕೈ ಹಾಕಿರುತ್ತಿತ್ತು. ಈಗ ಸೌಮ್ಯಾ ರೆಡ್ಡಿ ಅವರ ಪಾಲಿಗೆ ಬಿಜೆಪಿ ವಿರುದ್ಧ ಒಲಿದಿರುವ ಮೂರು ಸಾವಿರಕ್ಕಿಂತ ಕಡಿಮೆ ಮತಗಳ ಅಂತರವು ಆಗ ಸಾಧ್ಯ ಇರಲಿಲ್ಲವೇನೋ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ವಿಜಯ್ ಕುಮಾರ್ ರ ಸಾವಿನಿಂದಾಗಿ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದಕ್ಕೆ ಹೋಗಿತ್ತು.

ಜಯನಗರದ ಗೆಲುವಿನಲ್ಲಿ ಮೈತ್ರಿ ಸರ್ಕಾರದ ಪಾತ್ರವೇನು?ಜಯನಗರದ ಗೆಲುವಿನಲ್ಲಿ ಮೈತ್ರಿ ಸರ್ಕಾರದ ಪಾತ್ರವೇನು?

ಅನುಕಂಪದ ಮತ ಪಡೆಯುವ ಬಿಜೆಪಿ ಲೆಕ್ಕಾಚಾರ

ಅನುಕಂಪದ ಮತ ಪಡೆಯುವ ಬಿಜೆಪಿ ಲೆಕ್ಕಾಚಾರ

ವಿಜಯ್ ಕುಮಾರ್ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಹೆಸರು ಮಾಡಿದ್ದ ನಾಯಕ. ಅವರದೇ ಕುಟುಂಬದಿಂದ ವ್ಯಕ್ತಿಯೊಬ್ಬರನ್ನು ಕಣಕ್ಕೆ ಇಳಿಸಿದರೆ ಮತದಾರರ ಅನುಕಂಪವೂ ಬಿಜೆಪಿ ಪರವಾಗಿ ಇರುತ್ತದೆ ಎಂಬ ಲೆಕ್ಕಾಚಾರವಿತ್ತು. ಆ ಅಂಶ ನಿಜವೂ ಕೂಡ ಹೌದು. ಏಕೆಂದರೆ ಕಳೆದ ಎರಡು ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ.

ಮತ ವಿಭಜನೆ ಆಗದಂತೆ ನೋಡಿಕೊಳ್ಳಲಾಯಿತು

ಮತ ವಿಭಜನೆ ಆಗದಂತೆ ನೋಡಿಕೊಳ್ಳಲಾಯಿತು

ಆದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಿಗೆ ಸೇರಿ ಚುನಾವಣೆ ಎದುರಿಸಿದ್ದು, ಮತ ವಿಭಜನೆ ಆಗದಂತೆ ತಡೆಯಲು ಸಾಧ್ಯವಾಗಿದೆ. ಈ ಸಲ ವಿಜಯ್ ಕುಮಾರ್ ಅವರಿಗೇ ಸ್ಪರ್ಧೆ ಕಠಿಣ ಆಗುತ್ತದೆ ಎಂಬ ಮಾತಿತ್ತು. ಏಕೆಂದರೆ, ಅವರು ಎರಡು ಬಾರಿ ಸತತ ಗೆಲುವು ಸಾಧಿಸಿ, ಹ್ಯಾಟ್ರಿಕ್ ಗೆಲುವಿನ ಪ್ರಯತ್ನದಲ್ಲಿದ್ದರು. ಇಂಥ ಸಂದರ್ಭದಲ್ಲಿ ವಿವಿಧ ಕಾರಣಗಳಿಗೆ ಜನರು ಬದಲಾವಣೆ ಬಯಸುತ್ತಾರೆ. ಜತೆಗೆ ರಾಮಲಿಂಗಾ ರೆಡ್ಡಿ ಅವರ ಮಗಳೇ ಕಣದಲ್ಲಿ ಇದ್ದುದರಿಂದ ಸವಾಲು ಇನ್ನಷ್ಟು ಕಠಿಣವಾಗಿತ್ತು.

ಜೆಡಿಎಸ್- ಕಾಂಗ್ರೆಸ್ ಗೆ ಪ್ರಯೋಗ, ಬಿಜೆಪಿ ಪಾಲಿಗೆ ಪಾಠ

ಜೆಡಿಎಸ್- ಕಾಂಗ್ರೆಸ್ ಗೆ ಪ್ರಯೋಗ, ಬಿಜೆಪಿ ಪಾಲಿಗೆ ಪಾಠ

ದೇವೇಗೌಡರನ್ನು ಮನವೊಲಿಸಿದ ರಾಮಲಿಂಗಾ ರೆಡ್ಡಿ, ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಬಿಜೆಪಿ ಪಾಲಿಗೆ ಭಾರೀ ಭದ್ರ ಕೋಟೆ ಎಂದೇ ಪರಿಗಣಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರವನ್ನು 'ಕೈ' ವಶ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ - ಜೆಡಿಎಸ್ ಗೆ ಇದೊಂದು ಪ್ರಯೋಗ ಹೌದು, ತನ್ನ ರಣತಂತ್ರ ಬದಲಿಸಿಕೊಳ್ಳಲು ಬಿಜೆಪಿಗೆ ಪಾಠವೂ ಹೌದು.

English summary
How JDS support helped in Jayanagar assembly constituency to win Congress candidate Sowmya Reddy? Here is the analysis of previous election result and also comparison with 2018 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X