ಬ್ಲಾಕ್ ಅಂಡ್ ವೈಟ್ ಆಟದಲ್ಲಿ ಸೋತು ಗೆಲ್ಲುವವರಾರು?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 17: ದೇಶದಲ್ಲಿ ಹೊಸ ನೋಟಿನ ಚಲಾವಣೆಯಿಂದ ಜನರು ಪರಿತಪಿಸುತ್ತಿರುವುದೇನೋ ನಿಜ. ಹಾಗೇ ದೇಶದ ಆರ್ಥಿಕತೆಯಲ್ಲಿಯೂ ಬದಲಾವಣೆಯಾಗಿದೆ.

ಈ ಪರಿಸ್ಥಿತಿಯಲ್ಲಿ ಪ್ರತಿಪಕ್ಷದವರು ಮೋದಿಜೀಯವರಿಂದ ಆರ್ಥಿಕ ಮುಗ್ಗಟ್ಟು ಉಂಟಾಗಿದೆ ಎನ್ನುತ್ತಿದ್ದಾರೆ. ಜನರ ಬಳಿ ಹಣವಿಲ್ಲದೆ ಪೇಚಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಭ್ರಷ್ಟಾಚಾರ, ಕಪ್ಪುಹಣವನ್ನು ನಿಗ್ರಹಿಸುತ್ತೇವೆ ಎಂದು ಹೇಳುತ್ತೀರಾ, ಈ ರೀತಿ ಮಾಡುವುದು ಸರೀನಾ? ಕಪ್ಪುಹಣ ಹೇಗೆ ನಿಗ್ರಹವಾಗುತ್ತೆ, ಬದಲಾವಣೆ ಹೇಗೆ ಸಾಧ್ಯ ಎಂದು ಚಿಂತಕರು ಪ್ರಶ್ನೆಕೇಳಲು ಮುಂದಾಗಿದ್ದಾರೆ.[ಮೋದಿಯನ್ನು ಹಿಟ್ಲರ್, ಗಡ್ಡಾಫಿಗೆ ಹೋಲಿಸಿದ ವಿಪಕ್ಷ]

how to corruption vanish who is the winner

ಬದಲಾವಣೆ ಹೇಗೆ ಸಾಧ್ಯ?
ನೋಟು ರದ್ಧತಿಯಿಂದ ನಕ್ಸಲರು, ಭೂಗತ ಜಗತ್ತು, ಭಯೋತ್ಪಾದಕರ ಬಳಿ ಇದ್ದ ರು 500, 1000 ನೋಟಿನ ಕಂತೆ ಕಂತೆಗಳು ಕಾಗದವಾಗಿ ಮಾರ್ಪಟ್ಟು ಬೆಂಕಿಗಾಹುತಿಯಾಗುತ್ತಿವೆ. ಖೋಟಾ ನೋಟುಗಳೂ ಸಹ.['ಸತ್ಯಾನ್ವೇಷಣೆಗೆ ಹೊರಟ ಪತ್ರಕರ್ತರ ಸಾವು ಕಳವಳಕಾರಿ'!]

ಜಮ್ಮು ಕಾಶ್ಮೀರದಲ್ಲಿ ಆಗ್ಗಿಂದಾಗ್ಗೆ ಮನೆಗಳಿಗೆ ಕಲ್ಲು ತೂರಾಡಿ ದಾಂಧಲೆ ನಡೆಸುತ್ತಿದ್ದ ಉಗ್ರರು ಸಹತೆಪ್ಪಗಾಗಿದ್ದಾರೆ.

ದೇಶದ ಮುನ್ಸಿಪಾಲಿಟಿಗಳಲ್ಲಿ ಆಸ್ತಿ ತೆರಿಗೆ, ಮನೆ ಕಂದಾಯ, ಸೆಸ್ ಗಳು ಸಂದಾಯವಾಗುತ್ತಿದೆ.

ಅನೇಕ ಕಾರ್ಖಾನೆಗಳ ಮಾಲೀಕರು ಹೊಂದಿರುವ ಕಪ್ಪುಹಣದಿಂದ ತಮ್ಮ ವಿದ್ಯುತ್ ಬಾಕಿ, ಸರ್ಕಾರಿ ಸಾಲಗಳು ಇತ್ಯಾದಿಗಳನ್ನು ಕಟ್ಟಿ ತೀರಿಸಿದ್ದಾರೆ.[ಮೋದಿ ದೊಡ್ಡ ಕೆಲಸಕ್ಕೆ ಪುತ್ತೂರಿನ ಸಾಧಿಕ್ ಸಣ್ಣ ಸಹಕಾರ]

ದಿಢೀರನೆ ಹೊಸ ನೋಟಿನ ಬದಲಾವಣೆಯಿಂದ ಏನು ಮಾಡಬೇಕೆಂದು ತೋಚದೆ ದೇವರು ಕೊಟ್ಟ ಹಣ ದೇವರಿಗೇ ಅರ್ಪಿಸಿಬಿಡೋಣ ಎಂದು ಕೆಲವರು ತಮ್ಮ ಮನೆ ದೇವರಿಗೆ, ತಿರುಪತಿಗೆ ಇತರ ಪುಣ್ಯಕ್ಷೇತ್ರಗಳಿಗೆ ಅರ್ಪಿಸಿದ್ದಾರೆ.

ಮತ್ತೆ ಕೆಲವರು ತಾವು ಹೊಂದಿರುವ ಹೆಚ್ಚು ಹಣ ಎಂದಿದ್ದರೂ ಕುತ್ತು ಎಂದು ಭಾವಿಸಿ ತಮ್ಮ ಆಪ್ತ ವಲಯಕ್ಕೆ ಸಹಾಯರೂಪದಲ್ಲಿ ಹಂಚಿಬಿಟ್ಟಿದ್ದಾರೆ.

ಮನೆಯ ಅಕ್ಕಿ, ಬೇಳೆ, ಸಾಸಿವೆ, ಮೆಣಸು ಡಬ್ಬಿಗಳಲ್ಲಿದ್ದ ಹಣವೆಲ್ಲಾ ಈಚೆಗೆ ಬಂದು ಬ್ಯಾಂಕುಗಳಲ್ಲಿ ಜಮೆಯಾಗುತ್ತಿವೆ. ಬ್ಯಾಂಕಿನಿಂದ ಸಾಲ ಪಡೆದವರು ಮರು ಪಾವತಿಸುತ್ತಿದ್ದಾರೆ.

ಹೇಗೆ ಬದಲಾಗುತ್ತೆ ಎಂದು ಕೇಳಿದ ಪ್ರಶ್ನೆಗಳಿಗೆ ಮೋದಿಜೀ ತಮ್ಮ ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ಉತ್ತರ ಕೊಡುತ್ತಿದ್ದಾರೆ. ಆದರೆ ಅವರ ಮುಂದಿನ ಯೋಜನೆ, ಯೋಚನೆ ಏನೆಂಬುದು ಯಾರಿಗೂ ತಿಳಿಯದ ವಿಷಯ. ಅದನ್ನು ಅರಿತುಕೊಳ್ಳುವ ವೇಳೆಗೆ ಇನ್ನೇನು ಮಾಡುತ್ತಾರೋ ನೋಡಬೇಕು. ಒಟ್ಟಿನಲ್ಲಿ ಬ್ಲಾಕ್ ಅಂಡ್ ವೈಟ್ ಆಟದಲ್ಲಿ ಗೆಲ್ಲುವವರಾರು, ಸೋಲುವವರಾರು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Note ban is oppous the all parties and qustion it how Corruption vanish. The black and white is the game who is the winner?
Please Wait while comments are loading...