ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಹೇಗೆ ದೂರು ನೀಡಬೇಕು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 24 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಬಯಲಾದ ಪ್ರಕರಣವನ್ನು ಸಿಐಡಿಯಿಂದ ತನಿಖೆ ನಡೆಸಬೇಕೆಂದು ಸರಕಾರ ಆದೇಶ ನೀಡಿದೆ. ಆದರೆ, ಮುಂದೆ ಆಗುವುದನ್ನು ತಡೆಯಲು ಸಿಐಡಿ ಘಟಕ ಸಾರ್ವಜನಿಕರಿಗೆ ಸಂಪರ್ಕಿಸಬೇಕಾದ ಈಮೇಲ್ ವಿಳಾಸ, ದೂರವಾಣಿ ಸಂಖ್ಯೆಗಳನ್ನು ನೀಡಿದೆ.

ಪ್ರಸ್ತುತ ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ಇನ್ನೂ ಚಾಲನೆಯಲ್ಲಿರುವುದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಆಗದ ರೀತಿಯಲ್ಲಿ ತನಿಖೆಯನ್ನು ಮುಂದುವರಿಸಲು ಸಿಐಡಿ ತೀರ್ಮಾನಿದೆ. ತನಿಖೆ ಸುಸೂತ್ರವಾಗಿ ನಡೆಸಬೇಕಾದಲ್ಲಿ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಮತ್ತು ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರು, ಪಿ.ಯು. ಮಂಡಳಿಯ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರವು ಅತ್ಯಾವಶ್ಯಕವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಿ.ಐ.ಡಿ.ಯೊಂದಿಗೆ ಸಹಕರಿಸಬೇಕು. ಸಾರ್ವಜನಿಕರ ಬಳಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಪಟ್ಟಂತಹ ಯಾವುದೇ ಮಾಹಿತಿ ಇದ್ದಲ್ಲಿ ಮಾಹಿತಿಯನ್ನು ಕಡ್ಡಾಯವಾಗಿ ಮತ್ತು ಧೈರ್ಯದಿಂದ ಸಿ.ಐ.ಡಿ. ಘಟಕಕ್ಕೆ ನೀಡಬೇಕೆಂದು ಮನವಿ ಮಾಡಿದೆ. [ದ್ವಿತೀಯ ಪಿಯು ರಸಾಯನಶಾಸ್ತ್ರ ಮರು ಪರೀಕ್ಷೆ ಮಾ.31ಕ್ಕೆ]

How to complain to CID when question papers leak

ಸಾರ್ವಜನಿಕರು/ಪೋಷಕರು /ಉಪನ್ಯಾಸಕರು/ಕಾಲೇಜುಗಳ ಆಡಳಿತ ಮಂಡಳಿ ಮತ್ತು ಪಿ.ಯು. ಮಂಡಳಿಯ ಸಿಬ್ಬಂದಿಗಳು ಪ್ರಶ್ನೆ ಪತ್ರಿಕೆ ಸಂಬಂಧಪಟ್ಟ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಮೊಬೈಲ್ ದೂರವಾಣಿ/ ಫೇಸ್ ಬುಕ್ /ಟ್ವಿಟ್ಟರ್ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಮತ್ತು ಮಾಹಿತಿಯನ್ನು ಡಿಲೀಟ್ ಮಾಡಬಾರದು ಎಂದು ಮನವಿ ಮಾಡಿಕೊಂಡಿದೆ.

ಮೊಬೈಲ್ ಸಂಖ್ಯೆ : 9480800123
ವಾಟ್ಸ್ ಅಪ್ ಸಂಖ್ಯೆ : +91 9480800123
ಇ-ಮೇಲ್ : alertcid@ksp.gov.in
ಫೇಸ್ ಬುಕ್ : CID Karnataka
ಟ್ವಿಟ್ಟರ್ : @CIDKarnataka

ಗೌಪ್ಯವಾದ ಮಾಹಿತಿಗಳನ್ನು ಮೊಬೈಲ್, ವಾಟ್ಸ್‌ಅಪ್ ಅಥವಾ ಇ-ಮೇಲ್ ಮುಖಾಂತರ ಮಾತ್ರವೇ ಸಿ.ಐ.ಡಿ. ಕಛೇರಿಗೆ ಸಲ್ಲಿಸತಕ್ಕದ್ದು, Facebook ಮತ್ತು Twitterಗಳನ್ನು ಗೌಪ್ಯವಾದ ಮಾಹಿತಿಗಾಗಿ ಉಪಯೋಗಿಸತಕ್ಕದ್ದಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Where to complain to CID when question papers leak? The CID, which is conducting the investigation of PUC question paper leakage, has requested students, teachers, public, school authorities to share such information to CID to facilitate, help and support investigations.
Please Wait while comments are loading...