ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ ಲೈನ್ ನಲ್ಲಿ ಆಸ್ತಿ ಖಾತಾ ವರ್ಗಾವಣೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

|
Google Oneindia Kannada News

Recommended Video

ಜನರು ಆಸ್ತಿ ಖಾತೆ ಪತ್ರವನ್ನ ಆನ್ಲೈನ್ ನಲ್ಲಿ ಪಡೆಯುವುದು ಹೇಗೆ? | Oneindia Kannada

ಬೆಂಗಳೂರು,ಫೆಬ್ರವರಿ 06 : ರಾಜಧಾನಿಯ ಜನರು ಇನ್ನು ಮುಂದೆ 'ಆನ್ ಲೈನ್‌; ನಲ್ಲೇ ಖಾತಾ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪಡೆಯಬಹುದು.

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಖಾತಾ ಬದಲಾವಣೆಯನ್ನು ಸರಳೀಕರಿಸುವ ಮತ್ತು ವಿಳಂಬ ತಡೆಯುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಬಿಬಿಎಂಪಿ ಮತ್ತು ಇ-ಆಡಳಿತ ಇಲಾಖೆಯು ಜಂಟಿಯಾಗಿ ಸಿದ್ಧಪಡಿಸಿರುವ ತಂತ್ರಾಂಶದ ಮೂಲಕ ನಾಗರಿಕರಿಗೆ ಆನ್ ಲೈನ್ ಅಥವಾ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಖಾತಾ ಬದಲಾವಣೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಅದು ಸಕಾಲ ಮೂಲಕ ಬಿಬಿಎಂಪಿ ಸಂಬಂಧಿತ ಅಧಿಕಾರಿಗೆ ನೇರವಾಗಿ ತಲುಪುತ್ತದೆ.

ಆನ್ ಲೈನ್ ನಲ್ಲಿ ಪ್ರಮಾಣ ಪತ್ರ: ಫೆಬ್ರವರಿ ಮೊದಲ ವಾರದಲ್ಲಿ ಚಾಲನೆಆನ್ ಲೈನ್ ನಲ್ಲಿ ಪ್ರಮಾಣ ಪತ್ರ: ಫೆಬ್ರವರಿ ಮೊದಲ ವಾರದಲ್ಲಿ ಚಾಲನೆ

ಇದರಿಂದ ನಾಗರಿಕರು ಅರ್ಜಿಯ ಸ್ಥಿತಿಗತಿಗಳನ್ನು ಕಾಲಕಾಲಕ್ಕೆ ವೀಕ್ಷಿಸುವುದರೊಂದಿಗೆ ನಿಗದಿತ ಅವಧಿಯಲ್ಲಿ ಖಾತಾ ಬದಲಾವಣೆಯನ್ನು ವೀಕ್ಷಿಸಬಹುದು. ಬೆಂಗಳೂರು ಒನ್ ಕೇಂದ್ರಗಳು ಬೆಳಗ್ಗೆ 8 ರಿಂದ ಸಂಜೆ 7 ರವರೆಗೆ ತೆರದಿರುತ್ತದೆ.

ಈ ಸಂಬಂಧ ಹೊಸ ತಂತ್ರಾಂಶವನ್ನು ಬಿಬಿಎಂಪಿ ಸಿದ್ಧಪಡಿಸಲಾಗಿದ್ದು, ಫೆಬ್ರವರಿ ಮೊದಲ ವಾರದ ನಂತರ ಇದನ್ನು ಜಾರಿಗೊಳ್ಳಲಿದೆ. ನಾಗರಿಕರು ಖಾತಾ ವರ್ಗಾವರಣೆಯನ್ನು ಆನ್ ಲೈನ್ ಮೂಲಕ, ಬೆಂಗಳೂರು ಒನ್ ಕೇಂದ್ರ ಅಥವಾ ಸಕಾಲ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?

ಬಿಬಿಎಂಪಿಯಿಂದ ಖಾತಾ ನೋಂದಣಿ, ಖಾತಾ ವರ್ಗಾವಣೆ ಮತ್ತು ನಕ್ಷೆ ಮಂಜೂರಾತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳ ಹಿಂದೆ ಸುತ್ತಬೇಕು ಎಂಬ ಕೆಟ್ಟ ಅಭಿಪ್ರಾಯಗಳು ಜನರಲ್ಲಿವೆ. ಇದನ್ನು ಹೋಗಲಾಡಿಸುವ ಸಲುವಾಗಿ ಇ-ಆಡಳಿತದ ಜತೆ ಚರ್ಚಿಸಿ ಆನ್'ಲೈನ್ ಮೂಲಕವೇ ಖಾತಾ ನೋಂದಣಿ, ವರ್ಗಾವಣೆ ಮತ್ತು ನಕ್ಷೆ ಮಂಜೂರಾತಿ ನೀಡಲು ಸೂಕ್ತ ತಂತ್ರಾಂಶ (ಸಾಫ್ಟ್‌ವೇರ್) ಅಭಿವೃದ್ಧಿಪಡಿಸಲಾಗಿದೆ.

ಖಾತಾ ವರ್ಗಾವಣೆ ಹೇಗೆ

ಖಾತಾ ವರ್ಗಾವಣೆ ಹೇಗೆ

ಸಾರ್ವಜನಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಅಪ ಲೋಡ್ ಮಾಡಿಕೊಳ್ಳಬಹುದು. ಆ ದಾಖಲೆಗಳನ್ನು ಅಧಿಕಾರಿಗಳು ಡೌನ್ ಲೋಡ್ ಮಾಡಿಕೊಂಡು ಪರಿಶೀಲಿಸಿ ಖಾತೆ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪ್ರಕ್ರಿಯೆ ನಡೆಸುತ್ತಾರೆ. ಆನ್ ಲೈನ್ ಮೂಲಕ ಅಥವಾ ಬೆಂಗಳೂರು ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಮೊದಲು ಖಾತಾ ವರ್ಗಾವಣೆಗಾಗಿ, ಬಿಬಿಎಂಪಿ ಕಚೇರಿಗೆ ತಿಂಗಳು ಗಟ್ಟಲೆ ಅಲೆಯಬೇಕಿತ್ತು. ದಾಖಲೆಗಳನ್ನು ಪರಿಶೀಲನೆಗೆ ನೀಡಬೇಕಿತ್ತು, ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿಯ ಸ್ಥಿತಿಗತಿ ಪರಿಶೀಲಿಸಲು ಬಿಬಿಎಂಪಿ ಕಚೇರಿಗೆ ಹೋಗಬೇಕಿತ್ತು. ಖಾತೆ ನೋಂದಣಿಗೆ ಹಣವನ್ನು ಕೂಡ ನೀಡಬೇಕಿತ್ತು. ಆದರೆ ಇದೀಗ ಅದೆಲ್ಲವೂ ಸರಳೀಕೃತವಾಗಿದೆ. ಎಲ್ಲವನ್ನೂ ನೀವು ಕುಳಿತಲ್ಲಿಂದಲೇ ಮಾಡಬಹುದಾಗಿದೆ.

ನಾಗರಿಕರು ಹೇಗೆ ಸರ್ಜಿ ಸಲ್ಲಿಸಬೇಕು?

ನಾಗರಿಕರು ಹೇಗೆ ಸರ್ಜಿ ಸಲ್ಲಿಸಬೇಕು?

1)ನಾಗರಿಕರು ಬೆಂಗಳೂರು ಒನ್ ಕೇಂದ್ರ ಅಥವಾ ಆನ್ ಲೈನ್ ನಲ್ಲಿ ಖಾತಾ ಅರ್ಜಿ ಸಲ್ಲಿಸಬಹುದು
2) ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ದಾಖಲೆಗಳ ಸಮೇತವಾಗಿ ಅರ್ಜಿ ಭರ್ತಿ ಮಾಡಬೇಕು.
3) ಅರ್ಜಿಯ ಪಸ್ತುತ ಸ್ಥಿತಿಗತಿ ತಿಳಿಯಲು ಆನ್ ಲೈನ್ ಅಥವಾ ಸಕಾಲದಲ್ಲಿ ಜಿಎಸ್ ಸಿ ನಂಬರ್ ಮೂಲಕ ಪರೀಕ್ಷಿಸಬಹುದು.
4) ನಾಗರಿಕರಿಗೆ ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ ಎಸ್ ಎಂ ಎಸ್ ಮೂಲಕವು ಪಡೆಯಬಹುದು
5) ಬೆಂಗಳೂರು ಒನ್ ಅಥವಾ ಆನ್ ಲೈನ್ ನಲ್ಲಿ ಸಲಲ್ಲಿಸಿದ ಖಾತಾವನ್ನು ಸಕಾಲದ ಮೂಲಕ ಪಡೆದುಕೊಳ್ಳಬೇಕು.

ಬಂದ ಅರ್ಜಿಗಳನ್ನು ಅಧಿಕಾರಿಗಳು ಏನು ಮಾಡಬೇಕು?

ಬಂದ ಅರ್ಜಿಗಳನ್ನು ಅಧಿಕಾರಿಗಳು ಏನು ಮಾಡಬೇಕು?

1) ಭರ್ತಿ ಮಾಡಿದ ಅರ್ಜಿಗಳು ಹಾಗೂ ಬೇಕಾದ ದಾಖಲೆಗಳನ್ನು ಆನ್ ಲೈನ್ ಮೂಲಕ ಪಡೆಯುವುದು
2) ಅರ್ಜಿದಾರರನ್ನು ಇ-ಸೈನ್ ಮೂಲಕ ಆಟೋಮೇಟೆಡ್ ಅಥೆಂಟಿಕೇಷನ್ ಮಾಡಬಹುದು
3)ಬಾಕಿ ಉಳಿದಿರುವ ಅರ್ಜಿಯ ಕುರಿತು ಒಂದು ಬಟನ್ ಒತ್ತುವ ಮಾಡುವ ಮೂಲಕ ಮಾಹಿತಿ ಪಡೆಯಬಹುದು
4) ಕೆಲವು ಸಂದರ್ಭಗಳಲ್ಲಿ ಮಾತ್ರ ನಾಗರೊಕರೊಂದಿಗೆ ಮಾತನಾಡುವ ಅಗತ್ಯ ಬೀಳಬಹುದು
5) ಎಸ್ ಎಂ ಎಸ್ ಮೂಲಕ ಖಾತಾ ಕುರಿತು ಅಟೋಮೆಟಿಕ್ ಮಾಹಿತಿ ರವಾನೆಯಾಗುತ್ತದೆ
6) ಆನ್ ಲೈನ್ ಮೂಲಕ ಇ-ಸೈನ್ ಖಾತಾವನ್ನು ಅಪ್ ಲೋಡ್ ಮಾಡಬೇಕು

ಆಸ್ತಿ ಖಾತಾ ಬದಲಾವಣೆಗೆ ಒದಗಿಸಬೇಕಾದ ದಾಖಲೆ

ಆಸ್ತಿ ಖಾತಾ ಬದಲಾವಣೆಗೆ ಒದಗಿಸಬೇಕಾದ ದಾಖಲೆ

ವಿಲ್ ಪ್ರಕಾರ ಆಸ್ತಿ ನೋಂದಣಿ: ಸೇಲ್ ಡೀಡ್: ಸೇಲ್ ಡೀಡ್, ತೆರಿಗೆ ಕಟ್ಟಿರುವ ರಶೀತಿ, ಫಾರ್ಮ್ 15 ಇಂದ ಎನ್ ಕ್ಯುಂಬ್ರೆನ್ಸ್ ಸರ್ಟಿಫಿಕೇಟ್ ಹಳೆಯ ಸೇಲ್ ಡೀಡ್, ತೆರಿಗೆ ರಶೀತಿ, ನೋಂಧಣಿ ವಿಲ್ ನ ಜೆರಾಕ್ಸ್ ಅಥವಾ ಅಫಿಡೆವಿಟ್, ಒಂದೊಮ್ಮೆ ವಿಲ್ ಇಲ್ಲದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಎನ್ ಓಸಿ ಸರ್ಟಿಫಿಕೇಟ್ ನೀಡಬೇಕು.

ವಿಲ್ ನಲ್ಲಿ ಇರುವ ಹಾಗೆ ಖಾತಾ ವರ್ಗಾವಣೆ ಮಾಡದಿದ್ದರೆ ಏನು ದಾಖಲೆ

ವಿಲ್ ನಲ್ಲಿ ಇರುವ ಹಾಗೆ ಖಾತಾ ವರ್ಗಾವಣೆ ಮಾಡದಿದ್ದರೆ ಏನು ದಾಖಲೆ

ಹಳೆಯ ಸೇಲ್ ಡೀಡ್, ಪೊಸೆಷನ್ ಸರ್ಟಿಫಿಕೇಟ್, ಪ್ರಸಕ್ತ ವರ್ಷದ ತೆರಿಗೆ ರಶೀತಿ, ಒಂದೊಮ್ಮೆ ವಿಲ್ ಇಲ್ಲದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಎನ್ ಓಸಿ ಸರ್ಟಿಫೀಕೇಟ್ ನೀಡಬೇಕು. ಖಾತಾ ಹೊಂದಿದ್ದವರು ಅಸಲಿ ಮರಣ ಪ್ರಮಾಣ ಪತ್ರ, ಸೇಲ್ ಡೀಡ್, ತೆರಿಗೆ ಕಟ್ಟಿರುವ ರಶೀತಿ, ಫಾರ್ಮ್ 15 ಇಂದ ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್ ದಾಖಲೆ ಒದಗಿಸಬೇಕು.

ಉಡುಗೊರೆಯ ಆಸ್ತಿ ಖಾತಾ ಪಡೆಯುವುದು ಹೇಗೆ

ಉಡುಗೊರೆಯ ಆಸ್ತಿ ಖಾತಾ ಪಡೆಯುವುದು ಹೇಗೆ

ಹಳೆಯ ಸೇಲ್ ಡೀಡ್, ಗಿಫ್ಟ್ ಡೀಡ್, ತೆರಿಗೆ ಕಟ್ಟಿರುವ ರಶೀತಿ, ಫಾರ್ಮ್ 15 ಇಂದ ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್ ದಾಖಲೆ ಒದಗಿಸಬೇಕು.

ಕೋರ್ಟ್ ಮೂಲಕ ಆಸ್ತಿ ದೊರೆತರೆ ಒದಗಿಸಬೇಕಾದ ದಾಖಲೆಗಳು

ಕೋರ್ಟ್ ಮೂಲಕ ಆಸ್ತಿ ದೊರೆತರೆ ಒದಗಿಸಬೇಕಾದ ದಾಖಲೆಗಳು

ಕೋರ್ಟ್ ಮೂಲಕ ಆಸ್ತಿ ದೊರೆತಿದ್ದರೆ ಕೋರ್ಟ್ ನೀಡಿರುವ ಅನುಮತಿ ಪತ್ರ, ಹಳೆಯ ಡೀಡ್, ಆದಾಯ ತೆರಿಗೆ ರಶೀತಿ, ಫಾರ್ಮ್ 15 ಇಂದ ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್ ಒದಗಿಸಬೇಕು.

English summary
BBMP will launch online khata distribution system, BBMP building map and transfer of property through only from end of February .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X