ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಳುಗುತ್ತಿದ್ದ ಮಹಿಳೆಯ ರಕ್ಷಣೆ ಮಾಡಿದ ವಿಡಿಯೋ ವೈರಲ್

|
Google Oneindia Kannada News

Recommended Video

Bengaluru rain : Nayandahalli underpass pouring water | Oneindia Kannada

ಮಳೆಯ ಬಗ್ಗೆ ಬಹಳ ಒಳ್ಳೊಳ್ಳೆ ರೂಪಕಗಳಿವೆ. ಆದರೆ ಬೆಂಗಳೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಸಾವಿನ ಸುದ್ದಿ ಹೊತ್ತು ತರುತ್ತಿದೆ. ಸಂಜೆ ಹೊತ್ತಿಗೆ ಮನೆಯಲ್ಲಿರುವವರೂ ಕ್ಷೇಮವಲ್ಲ, ಹೊರಗೆ ಹೋದವರ ಬಗ್ಗೆ ಆತಂಕ ಕಡಿಮೆಯಾಗಲ್ಲ. ಹೀಗಿದೆ ಸ್ಥಿತಿ. ಮಳೆಯ ಭೀಕರತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಂಧುಗಳನ್ನು ಕಣ್ತುಂಬ ನೋಡಿಕೊಂಡು ಮನೆಯಿಂದ ಹೊರಡಿಬಂಧುಗಳನ್ನು ಕಣ್ತುಂಬ ನೋಡಿಕೊಂಡು ಮನೆಯಿಂದ ಹೊರಡಿ

ಮಕ್ಕಳು ಆಟವಾಡುವ ಕಾರನ್ನು ಬಕೆಟ್ ನೊಳಗೆ ನೀರನ್ನು ಹಾಕಿ ಮುಳುಗಿಸುತ್ತಾರಲ್ಲ, ಹಾಗೆ ಆಗಿದೆ ಕಾರಿನ ಸ್ಥಿತಿ. ಕಾರಿನೊಳಗೆ ಸಿಲುಕಿಕೊಂಡ ಮಹಿಳೆಯನ್ನು ಹೇಗೆ ಮಳೆ ನೀರು ಮುಳುಗಿಸಿದೆ ಎಂಬ ದೃಶ್ಯಾವಳಿಗಳು ಅದರಲ್ಲಿದೆ.

In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

How Bengaluru woman rescued from flood, video viral

ಬಿಳಿ ಬಣ್ಣದ ಕಾರೊಂದರ ಬಾನೆಟ್ ವರೆಗೆ ನೀರು ಇದ್ದು, ಮುಂಭಾಗಕ್ಕೆ ಬಾಗಿ, ಹಿಂಭಾಗ ನೀರಿನಲ್ಲಿ ತೇಲುತ್ತಿದೆ. ಪ್ರವಾಹದ ರೀತಿ ಜೋರಾಗಿ ನೀರು ಹರಿಯುತ್ತಿರುವ ಕಡೆಗೆ ಕಾರು ಜೋಲಿ ಹೊಡೆಯುತ್ತಿದೆ. ಈ ದೃಶ್ಯ ಕಂಡಂಥ ಜನರು ಕಾರೊಳಗೆ ಸಿಕ್ಕಿಕೊಂಡ ಮಹಿಳೆಯ ರಕ್ಷಣೆಗಾಗಿ ಸೊಂಟದವರೆಗೆ ಹರಿಯುತ್ತಿರುವ ನೀರಿಗೆ ಧುಮುಕುತ್ತಾರೆ.

ಬೆಂಗಳೂರಲ್ಲಿ ಮಳೆಗೆ 4 ಬಲಿ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರಬೆಂಗಳೂರಲ್ಲಿ ಮಳೆಗೆ 4 ಬಲಿ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಕೊನೆಗೂ ನಾಲ್ವರು ಪುರುಷರು ಆ ಮಹಿಳೆಯ ರಕ್ಷಣೆ ಮಾಡುವಲ್ಲಿ ಸಫಲರಾಗುತ್ತಾರೆ. ವರದಿಗಳ ಪ್ರಕಾರ, ಆ ನಾಲ್ವರ ಪೈಕಿ ಮೂವರು ಪೊಲೀಸರು. ಈ ಘಟನೆ ಶುಕ್ರವಾರ ನಾಯಂಡಹಳ್ಳಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಅಂದಹಾಗೆ, ಬೆಂಗಳೂರಿನಲ್ಲಿ ಸುರಿದ ಮಳೆಗೆ ಶುಕ್ರವಾರ ರಾತ್ರಿ ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಅದರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪುರೋಹಿತರು. ಕುರುಬರಹಳ್ಳಿ-ಲಗ್ಗೆರೆಯ ಒಳಚರಂಡಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.

English summary
A day after at least five people were killed in the rains in Bengaluru, a terrifying video has surfaced on social media showing a woman trapped in a car that is being swept away by the waters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X