ಗಲಭೆ ಉಂಟಾದರೆ ಈ ಟ್ವಿಟರ್ ತಾಣದ ಮೇಲೆ ಕಣ್ಣಿಡಿ

Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್, 19: ಸಮಾಜದಲ್ಲಿನ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸಾಮಾಜಿಕ ತಾಣಗಳನ್ನು ಬೆಂಗಳೂರು ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಕಾವೇರಿ ಜಲ ವಿವಾದ ಸಂದರ್ಭ ಉಂಟಾದ ಗಲಭೆ, ಹಿಂಸಾಚಾರ, ಕನ್ನಡಿಗರ ಮೇಲೆ ಹಲ್ಲೆ ಮುಂತಾದ ಘಟನೆಗಳನ್ನು ಆಧರಿಸಿ ಪೊಲೀಸರು ಹೊಸ ತಂತ್ರದ ಮೊರೆ ಹೋಗಿದ್ದಾರೆ.[ಬಸ್ಸು ಸುಡಲು ಕುಮ್ಮಕ್ಕು ನೀಡಿದ್ದು ಯಾದಗಿರಿಯ 22ರ ಯುವತಿ]

How Bengaluru Police Made Good Use of Social Media

ಸಾರ್ವಜನಿಕರು ನೇರವಾಗಿ ಪೊಲೀಸ್ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರದ ಅಂಗಸಂಸ್ಥೆಗಳಿಗೆ ಸಂಬಂಧಿಸಿದ ಫೇಸ್ ಬುಕ್ ಅಥವಾ ಟ್ವಿಟ್ಟರ್ ಖಾತೆಗೆ ತಮ್ಮ ದೂರುಗಳನ್ನು ಅಥವಾ ಅನುಮಾನಾಸ್ಪದ ರೀತಿಯ ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಮಾಹಿತಿ ನೀಡಬಹುದು. ಈ ಮೂಲಕ ಕ್ಷಿಪ್ರ ಪರಿಹಾರಕ್ಕೆ ಮುಂದಾಗಬಹುದು.[ಬಸ್ ಗೆ ಬೆಂಕಿ ಹಾಕೋದಕ್ಕೆ ಜನ ಏನಂತಾರೆ?]

ಬೆಂಗಳೂರು ನಗರ ಪೊಲೀಸ್ ಟ್ವಿಟ್ಟರ್ ಖಾತೆಗೆ 307 ಲಕ್ಷ ಫಾಲೋವರ್ಸ್ ಇದ್ದಾರೆ. ಸಿಎ೦ ಆಫ್ ಕರ್ನಾಟಕ 63 ಲಕ್ಷ ಫಾಲೋವರ್ಸ್, ಇಂಟರ್ ಫೋಲ್ 72.4 ಲಕ್ಷ ಫಾಲೋವರ್ಸ್ ಇದ್ದಾರೆ. ಇಲಾಖೆಗಳು ತಿಳಿಸುವ ಮಾಹಿತಿ ಕ್ಷಣ ಮಾತ್ರದಲ್ಲಿ ಇಷ್ಟು ಜನರನ್ನು ಏಕಕಾಲದಲ್ಲಿ ತಲುಪುತ್ತದೆ.

ಇದಲ್ಲದೇ ಹಿರಿಯ ಪೊಲೀಸ್ ಆರ್. ಹೀತೇ೦ದ್ರ, ಚರಣ್ ರೆಡ್ಡಿ, ಅಭೀಷೇಕ್ ಗೋಯೆಲ್, ಡಾ. ಎ೦.ಬಿ. ಬೋರಲಿ೦ಗಯ್ಯ. ಸ೦ದೀಪ್ ಪಾಟೀಲ್, ಪಿ. ಹರಿಶೇಖರನ್ ಅವರ ಹೆಸರಿನಲ್ಲಿಯೂ ಖಾತೆಗಳಿದ್ದು ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ನಾಗರಿಕರು ಈ ಮೇಲಿನ ಟ್ವೀಟರ್ ಖಾತೆ ವೀಕ್ಷಣೆ ಮಾಡುವುದರೊಂದಿಗೆ ಮಾಹಿತಿಯನ್ನು ನೀಡಿ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

ಟ್ವಿಟರ್ ಖಾತೆಗಳು

ಬೆಂಗಳೂರು ಸಿಟಿ ಪೊಲೀಸ್
ಸಿಎಂ ಆಫ್ ಕರ್ನಾಟಕ
ಅಭೀಷೇಕ್ ಗೋಯಲ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amidst rumours and hearsay, it was Bengaluru City Police's active social media accounts that helped people by providing reliable information. Bengaluru city Police using the social media platform to Help Citizens during like Cauvery Riots
Please Wait while comments are loading...