ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ನ.14 : ಮಹಾನಗರಿ ಬೆಂಗಳೂರಿನಲ್ಲಿ ಕಷ್ಟಪಟ್ಟು ಸೈಟ್ ತೆಗೆದುಕೊಂಡಿದ್ದೀರಿ, ಅಲ್ಲಿ ಮನೆಯನ್ನು ಕಟ್ಟಿದ್ದೀರಿ. ಆದರೆ, ನೀರಿಗೆ ಏನು ಮಾಡುವುದು ಎನ್ನುವ ಚಿಂತೆಯೇ. ಹೊಸದಾಗಿ ನೀರಿನ ಸಂಪರ್ಕ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಗೆ ತೆರಳಿ ನೀವು ಹೊಸ ನೀರಿನ ಸಂಪರ್ಕ ಪಡೆಯಲು 100 ರೂ. ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಪುಸ್ತಕ ರೂಪದಲ್ಲಿರುವ ಅರ್ಜಿಯನ್ನು ತುಂಬಬೇಕಾಗುತ್ತದೆ. ಕಟ್ಟಡದ ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. [ಜಲಮಂಡಳಿ ವೆಬ್ ಸೈಟ್]

 BWSSB

ಎಷ್ಟು ಶುಲ್ಕ ಪಾವತಿಸಬೇಕು : ಮನೆಗಳಿಗೆ ನೀರಿನ ಸಂಪರ್ಕ ಪಡೆಯಲು ನೀವು 100 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನೀರಿನ ಸಂಪರ್ಕ ಪಡೆಯಲು ಒಟ್ಟು 2040 ರೂ.ಗಳನ್ನು ಪಾವತಿ ಮಾಡಬೇಕು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರ ಹೆಸರಿಗೆ ಡಿಡಿ ಪಡೆದು ಈ ಹಣ ಪಾವತಿ ಮಾಡಬೇಕಾಗುತ್ತದೆ.

ಈ 2040 ರೂ.ಗಳಲ್ಲಿ ಮೀಟರ್ ಶುಲ್ಕ 850, ಪರಿವೀಕ್ಷಣಾ ಶುಲ್ಕ 250, ಮೂರು ತಿಂಗಳ ಕನಿಷ್ಠ ಶುಲ್ಕ 315, ಜೋಡಣಾ ಶುಲ್ಕ 25, ತ್ಯಾಜ್ಯ ನೀರು ಕೊಳವೆ ಶುಲ್ಕ 600 (ನೆಲ ಮಹಡಿಗೆ ಮಾತ್ರ) ಸೇರಿರುತ್ತದೆ. ನಿಮ್ಮ ಕಟ್ಟಡಕ್ಕೆ ಪ್ರೊರಾಟ ಶುಲ್ಕ ಅನ್ವಯವಾಗುವುದಿದ್ದರೆ ಅದನ್ನು ಪಾವತಿ ಮಾಡಬೇಕು. 2 ಅಂತಸ್ತಿಗಿಂತ ಹೆಚ್ಚಿದ್ದರೆ ಈ ಶುಲ್ಕ ಪಾವತಿ ಮಾಡಬೇಕು. [ಅರ್ಜಿ ಇಲ್ಲಿ ಸಿಗುತ್ತದೆ]

ಯಾವ ದಾಖಲೆಗಳು ಬೇಕು : ಅರ್ಜಿ ಸಲ್ಲಿಸುವಾಗ ಸಲ್ಲಿಸಬೇಕಾದ ದಾಖಲೆಗಳು
* ಅರ್ಜಿಯೊಂದಿಗೆ ನೀವು ಫಲಾನುಭವಿ ವಂತಿಗೆ ಪಾವತಿಸಿದ ದಾಖಲೆ
* ಮಂಜೂರಾದ ಕಟ್ಟಡದ ನಕ್ಷೆ/ಖಾತೆ ಪ್ರತಿ/ಕಂದಾಯ ರಶೀದಿ
* ವಿಳಾಸ ದೃಢೀಕರಣ ದಾಖಲೆ (ಶುದ್ಧ ಕರ ಪತ್ರ, ಪಡಿತರ ಚೀಟಿ ಜೊತೆ ಜಲಮಂಡಳಿ ನೀಡಿರುವ ಷರತ್ತು ಮತ್ತು ನಿಯಮಗಳನ್ನು ಒಪ್ಪಿ 20 ರೂ. ಸ್ಟಾಂಪ್‌ ಪೇಪರ್‌ನಲ್ಲಿ ನೀಡಬೇಕು)

ಎಷ್ಟು ದಿನದಲ್ಲಿ ಸಂಪರ್ಕ ಸಿಗಲಿದೆ : ಸಮರ್ಪಕ ದಾಖಲೆಗಳಲ್ಲಿ ಸಲ್ಲಿಕೆ ಮಾಡಿದ ನಂತರ 7 ದಿನಗಳವೊಳಗೆ ನೀರಿನ ಸಂಪರ್ಕ ಸಿಗುತ್ತದೆ. ನೀರಿನ ಸಂಪರ್ಕ ನೀಡಿದ ದಿನದಿಂದಲೇ ಗ್ರಾಹಕರಿಗೆ ನೀರು ಬಳಕೆಯ ಬಿಲ್ ನೀಡಲಾಗುತ್ತದೆ. [ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯುವುದು ಹೇಗೆ?]

ಬಿಲ್ ಎಲ್ಲಿ ಪಾವತಿ ಮಾಡಬಹುದು : ಬೆಂಗಳೂರು ಒನ್ ಕೇಂದ್ರ ಅಥವ ಜಲಮಂಡಳಿ ಕಚೇರಿಯಲ್ಲಿ ನೀರಿನ ಬಿಲ್ ಪಾವತಿ ಮಾಡಬಹುದು. ಅನಧಿಕೃತ ನೀರಿನ ಸಂಪರ್ಕ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಶುಲ್ಕ ಕಟ್ಟುವ ಜೊತೆಗೆ ಸೆರೆವಾಸವನ್ನು ಅನುಭವಿಸಬೇಕಾಗುತ್ತದೆ.

English summary
How to apply for The Bangalore Water Supply And Sewerage Board (BWSSB)new connection. How much will it cost and in how many days will the process take. Here is a guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X