ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕ್ಷೆಯಲ್ಲಿ ಮಾತ್ರ ಇವೆ ಕೆರೆಗಳು, ಸದನ ಸಮಿತಿಗೆ ಅಚ್ಚರಿ!

|
Google Oneindia Kannada News

ಬೆಂಗಳೂರು, ಮೇ 19 : ಬೆಂಗಳೂರಿನಲ್ಲಿ ನಡೆದಿರುವ ಕೆರೆ ಒತ್ತುವರಿ ಕುರಿತು ವರದಿ ನೀಡಲು ರಚನೆ ಮಾಡಿರುವ ಸದನ ಸಮಿತಿ ಸದಸ್ಯರು ಮಂಗಳವಾರ ವಿವಿಧ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ದೊರೆಸಾನಿಪಾಳ್ಯದ ಕೆರೆ ಸಂಪೂರ್ಣ ಒತ್ತುವರಿಯಾಗಿರುವುದು ತಿಳಿದುಬಂತು, ನಕ್ಷೆಯಲ್ಲಿ ಮಾತ್ರ ಕೆರೆ ಇತ್ತು. [ಬೆಂಗಳೂರು ಕೆರೆಗಳ ಸ್ಥಿತಿ ನೋಡಿ]

ಶಾಸಕ ಕೆ.ಬಿ.ಕೋಳಿವಾಡ ನೇತೃತ್ವದ ಸದನ ಸಮಿತಿ ಮಂಗಳವಾರ ಬೆಳಗ್ಗೆ ಶಾಸಕರ ಭವನದಲ್ಲಿ ಸಭೆ ನಡೆಸಿದ ಬಳಿಕ ಕೆರೆಗಳ ಪರಿಶೀಲನೆಗೆ ತೆರಳಿತು. ಬಿಜೆಪಿ ಶಾಸಕ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು ಸಮಿತಿಯ ಸದಸ್ಯರಾಗಿದ್ದಾರೆ. ಸಮಿತಿಯ ಜೊತೆ ಬಿಡಿಎ ಆಯುಕ್ತ ಶ್ಯಾಂ ಭಟ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. [ಯಮಲೂರು ಕೆರೆ ನೊರೆಯಲ್ಲಿ ಮತ್ತೆ ಬೆಂಕಿ]

ಮೊದಲು ಕೆಂಪಾಂಬುದಿ ಕೆರೆ ಪರಿಶೀಲನೆ ನಡೆಸಲಾಯಿತು. ಕೆರೆಯ ಎಷ್ಟು ಜಾಗ ಒತ್ತುವರಿಯಾಗಿದೆ? ಎಂದು ಕೆ.ಬಿ.ಕೋಳಿವಾಡ ಅವರು ಕೇಳಿದ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. ಕೆಂಪಾಂಬುದಿ ಕೆರೆಯ 47 ಎಕರೆ 7 ಗುಂಟೆಯಲ್ಲಿ ಕೇವಲ 3 ಎಕರೆ 34 ಗುಂಟೆ ಮಾತ್ರ ಉಳಿದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿತು. [ಬೆಂಗಳೂರಿಗರ ಆತಂಕ ದೂರ ಮಾಡಿದ ಸರ್ಕಾರ]

ಕೆಂಪಾಬುದಿ ಕೆರೆ ಬಳಿಕ ಯಡಿಯೂರು ಕೆರೆಗೆ ಸಮಿತಿ ಭೇಟಿ ನೀಡಿತು. ಈ ವೇಳೆ 262 ಜನರು ಈ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಮಿತಿ ಅಧ್ಯಕ್ಷ ಕೋಳಿವಾಡ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದರು. ಚಿತ್ರಗಳಲ್ಲಿ ನೋಡಿ ಸದನ ಸಮಿತಿ ಭೇಟಿ

ಒತ್ತುವರಿ ಪರಿಶೀಲನೆ ಆರಂಭಿಸಿದ ಸಮಿತಿ

ಒತ್ತುವರಿ ಪರಿಶೀಲನೆ ಆರಂಭಿಸಿದ ಸಮಿತಿ

ಬೆಂಗಳೂರಿನಲ್ಲಿ ನಡೆದಿರುವ ಕೆರೆ ಒತ್ತುವರಿ ಕುರಿತು ವರದಿ ನೀಡಲು ರಚನೆ ಮಾಡಿರುವ ಸದನ ಸಮಿತಿ ಸದಸ್ಯರು ಮಂಗಳವಾರ ವಿವಿಧ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಕೆ.ಬಿ.ಕೋಳಿವಾಡ ನೇತೃತ್ವದ ಸದನ ಸಮಿತಿಯಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂತಾದವರಿದ್ದಾರೆ.

ವಿವಿಧ ಕೆರೆಗಳಿಗೆ ಭೇಟಿ ಸಮಿತಿ ಭೇಟಿ

ವಿವಿಧ ಕೆರೆಗಳಿಗೆ ಭೇಟಿ ಸಮಿತಿ ಭೇಟಿ

ಮಂಗಳವಾರ ಸಮಿತಿ ಕೆಂಪಾಂಬುಧಿ, ಯಡಿಯೂರು, ಅರಕೆರೆ, ದೊರೆಸಾನಿಪಾಳ್ಯ, ಪುಟ್ಟೇನಹಳ್ಳಿ, ದೊರೆಕೆರೆ, ಚಿಕ್ಕಲಸಂದ್ರ, ಇಟ್ಟುಮಡು, ಹಲಗೆವಡೇರಹಳ್ಳಿ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಧಿಕಾರಿಗಳ ಮೇಲೆ ಕೋಳಿವಾಡ ಗರಂ

ಅಧಿಕಾರಿಗಳ ಮೇಲೆ ಕೋಳಿವಾಡ ಗರಂ

ಸಮಿತಿ ಮೊದಲು ಕೆಂಪಾಂಬುದಿ ಕೆರೆಗೆ ಭೇಟಿ ನೀಡಿತು. ಕೆರೆಯ 47 ಎಕರೆ 7 ಗುಂಟೆಯಲ್ಲಿ ಕೇವಲ 3 ಎಕರೆ 34 ಗುಂಟೆ ಮಾತ್ರ ಉಳಿದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿತು. ಇಷ್ಟು ಜಾಗ ಒತ್ತುವರಿ ಆಗುತ ತನಕ ಏನು ಮಾಡುತ್ತಿದ್ದಿರಿ? ಎಂದು ಕೋಳಿವಾಡ ಅವರು ಬಿಡಿಎ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

262 ಜನರಿಂದ ಕೆರೆ ಒತ್ತುವರಿ

262 ಜನರಿಂದ ಕೆರೆ ಒತ್ತುವರಿ

ಯಡಿಯೂರು ಕೆರೆಗೆ ಭೇಟಿ ನೀಡಿದಾಗ ಎಚ್.ಡಿ.ಕುಮಾರಸ್ವಾಮಿ ಅವರು, 262 ಜನರು ಈ ಕೆರೆಯನ್ನು ಒತ್ತುವರಿ ಮಾಡಿದ್ದಾರೆ ಎಂದು ಕೋಳಿವಾಡ ಅವರಿಗೆ ಮಾಹಿತಿ ನೀಡಿದರು. ಬಡವರು ಒತ್ತುವರಿ ಮಾಡಿದ್ದರೆ ಇಷ್ಟರೊಳಗೆ ತೆರವು ಮಾಡುತ್ತಿದ್ದರು. ಶ್ರೀಮಂತರಾಗಿರುವುದಕ್ಕೆ ಬಿಟ್ಟಿದ್ದಾರೆ ಎಂದು ಸ್ಥಳೀಯ ನಾಗರಿಕರು ಬಿಡಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. [ಯಡಿಯೂರು ಕೆರೆ ಮೇಲೊಂದು ಪಕ್ಷಿ ನೋಟ]

ಯಾರನ್ನೂ ರಕ್ಷಿಸುವುದಿಲ್ಲ : ಕೋಳಿವಾಡ

ಯಾರನ್ನೂ ರಕ್ಷಿಸುವುದಿಲ್ಲ : ಕೋಳಿವಾಡ

ಕೆರೆ ಒತ್ತುವರಿ ಮಾಡಿದ ಯಾವ ಭೂಗಳ್ಳರನ್ನು ರಕ್ಷಣೆ ಮಾಡುವುದಿಲ್ಲ. ಎಲ್ಲವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಕೆ.ಬಿ.ಕೋಳಿವಾಡ ಹೇಳಿದರು. ಕೆರೆ ಒತ್ತುವರಿ ಮಾಡಿ ನಿರ್ಮಿಸಿದ ಜೆಪಿನಗರ ಡಾಲರ್ಸ್ ಕಾಲೋನಿ ತೆರವುಗೊಳಿಸಲು ಶಿಫಾರಸು ಮಾಡಲಿದ್ದೇವೆ ಎಂದು ಅವರು ಹೇಳಿದರು.

ಸಮಿತಿಯ ವರದಿ ಹೆಚ್ಚು ಮಹತ್ವ ಪಡೆದಿದೆ

ಸಮಿತಿಯ ವರದಿ ಹೆಚ್ಚು ಮಹತ್ವ ಪಡೆದಿದೆ

ಬೆಂಗಳೂರಿನಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದ ಸದನ ಸಮಿತಿಯ ವರದಿ ಬರುವವರೆಗೆ ಕೆರೆ ಜಾಗದಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಗಳ ತೆರವು ಕಾರ್ಯ ಸ್ಥಗಿತಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದ್ದರಿಂದ ಸಮಿತಿಯ ವರದಿ ಮಹತ್ವ ಪಡೆದುಕೊಂಡಿದೆ.

English summary
House committee on lake encroachments headed by Ranebennur (Congress) MLA K.B.Koliwad inspect Kempambudhi, Yediyur, Doresanipalya, Puttenahalli and other lakes in Bengaluru on Tuesday, May 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X