ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಆಯೋಗ: ಹೋಟೆಲ್, ಮಾಲ್ ಮಾಲೀಕರ ಜತೆಗಿನ ಸಭೆ ರದ್ದು

|
Google Oneindia Kannada News

ಬೆಂಗಳೂರು, ಮಾರ್ಚ್ 31: ಮತದಾನ ಮಾಡಿರಿ ಹೋಟೆಲ್ ಹಾಗೂ ಮಾಲ್ ನಲ್ಲಿ ರಿಯಾಯಿತಿ ಪಡೆಯಿರಿ ಈ ವಿಷಯ ಕುರಿತು ಚುನಾವಣಾ ಆಯೋಗವು ಹೋಟೆಲ್ ಮಾಲಿಕರೊಂದಿಗೆ ಹಮ್ಮಿಕೊಂಡಿದ್ದ ಸಭೆ ರದ್ದಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಮತದಾನ ನಡೆಯುವುದು ತಿಂಗಳ ಎರಡನೇ ಶನಿವಾರ ಆಗಿದ್ದು ಸಾಕಷ್ಟು ಕಚೇರಿಗಳಿಗೆ ರಜೆ ಇರುತ್ತದೆ.ಹಾಗಾಗಿ ಹೆಚ್ಚು ಜನರು ಮತದಾನ ಮಾಡಲು ಬರುವುದಕ್ಕೆ ಹಿಂಜರಿಯುತ್ತಾರೆ ಎಂದು ಭಾವಿಸಿ ಚುನಾವಣಾ ಆಯೋಗವು ಮತದಾನ ಮಾಡಿ ಹೋಟೆಲ್ ಮತ್ತು ಮಾಲ್ ಗಳಲ್ಲಿ ರಿಯಾಯಿತಿ ಪಡೆಯಿರಿ ಎಂದು ಘೋಷಣೆ ಹೊರಹಾಕಿದ್ದರು.

ಮತ ಹಾಕಿರಿ, ಹೋಟೆಲ್‌ನಲ್ಲಿ ತಿಂಡಿ, ಮಾಲ್ ನಲ್ಲಿ ಡಿಸ್ಕೌಂಟ್ ಪಡೆಯಿರಿ! ಮತ ಹಾಕಿರಿ, ಹೋಟೆಲ್‌ನಲ್ಲಿ ತಿಂಡಿ, ಮಾಲ್ ನಲ್ಲಿ ಡಿಸ್ಕೌಂಟ್ ಪಡೆಯಿರಿ!

ಮಾಲ್ ಮತ್ತು ಹೋಟೆಲ್‌ಗಳಲ್ಲಿ ಮತದಾನದ ದಿನ ಮತ ಚಲಾಯಿಸಿದವರು ಹೆಬ್ಬೆಟ್ಟಿನ ಶಾಯಿ ತೋರಿಸಿದವರಿಗೆ ರಿಯಾಯ್ತಿ ನೀಡಲು ಮನವಿ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಅದರಂತೆ ಮಾಲಿಕರೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು.

Hotel, mall owners meeting cancelled

ಶನಿವಾರ ಐಟಿಪಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಭೆಯನ್ನು ಯಾವುದೋ ಹೋಟೆಲ್ ಅಥವಾ ಮಾಲ್ ಮಾಲೀಕರು ಇಂಥದ್ದೇ ಪಕ್ಷಗಳಿಗೆ ಮತ ಚಲಾಯಿಸಿದರೆ ರಿಯಾಯಿತಿ ನೀಡುವುದಾಗಿ ಆಮಿಷವೊಡ್ಡುವ ಸಾಧ್ಯತೆ ಇರುವ ಕಾರಣ ಸಭೆ ದಿಢೀರ್ ರದ್ದಾಗಿದೆ.

ಬಹುತೇಕ ಎಲ್ಲಾ ಮಾಲ್ ಮತ್ತು ಹೋಟೆಲ್ ಮಾಲೀಕರು ವಿವಿಧ ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದಾರೆ. ಆದರೆ ಮತದಾನ ಹೆಚ್ಚಿಸುವ ಕುರಿತಂತೆ ಸಾರ್ವಜನಿಕರ ಮನವೊಳಿಸಲು ಹೋಟೆಲ್ ಮತ್ತು ಮಾಲ್ ಮಾಲೀಕರಿಗೆ ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಚುನಾವಣಾ ಆಯೋಗದಿಂದಲೇ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ.

English summary
District returning officer cancelled thae hotel and mall woners meeting. Karnaka election commissiom called to discuss about special offer for voters during poll day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X