ಇನ್ಮುಂದೆ ಲಾಲ್ ಬಾಗ್ ನ 12 ಕಡೆ ಸೆಲ್ಫಿ ನಿಷೇಧ

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 18 : ಸ್ನೇಹಿತ, ಕುಟುಂಬ, ಪ್ರೇಯಸಿಯೊಂದಿಗೆ ಲಾಲ್ ಬಾಗ್ ಗೆ ತೆರಳಿ ಬಣ್ಣ-ಬಣ್ಣದ ಹೂಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಬೇಕು ಎಂಬ ಆಸೆ ಇದ್ದರೆ ಬಿಟ್ಟುಬಿಡಿ.

ಏಕಂದ್ರೆ ಲಾಲ್ ಬಾಗ್ ​ನ 12 ಕಡೆಗಳಲ್ಲಿ ಇನ್ಮುಂದೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ವಿಕ್ರಂ ಎಂಬ ಬಾಲಕನೊಬ್ಬ ಕಲ್ಲು ಕಂಬದ ಕೆಳಗೆ ಬಿದ್ದು ಅಸು ನೀಗಿದ್ದ. ಈ ದುರಂತದ ಬಳಿಕ ಎಚ್ಚೆತ್ತ ತೋಟಗಾರಿಕಾ ಇಲಾಖೆ ಕೊನೆಗೂ ಇಂತಹುದೊಂದು ದಿಟ್ಟ ಕ್ರಮವನ್ನು ಜಾರಿಗೊಳಿಸಿದೆ.[ಲಾಲ್ ಬಾಗಿನಲ್ಲಿ ವಿಕ್ರಮ್ ಸಾವು, 5 ಲಕ್ಷ ಪರಿಹಾರ ಘೋಷಣೆ]

horticulture department banned selfie in lalbagh 12 location

ಲಾಲ್ ​ಬಾಗ್​ ನ ಇಳಿಜಾರು ಪ್ರದೇಶ, ಕೆರೆ ಕೆರೆದಂಡೆ ಮತ್ತು ಕೆಲವು ಮರ ಸೇರಿದಂತೆ ಒಟ್ಟು 12 ಕಡೆ ಸೆಲ್ಫೀ ತೆಗೆದುಕೊಳ್ಳಲು ನಿಷೇಧಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೇಳಿಕೆ

ಇನ್ನು ಜನವರಿ 20ರಿಂದ ಇಲ್ಲಿ ಫ್ಲವರ್ ಶೋ ಆರಂಭವಾಗೊಳ್ಳಲಿದೆ. ಈ ಸಂದರ್ಭದಲ್ಲಿ ಜನಸ್ತೋಮವೇ ಇಲ್ಲಿ ಹರಿದು ಬರುವ ಕಾರಣದಿಂದ ಮುಂಜಾಗೃತಾ ಕ್ರಮವಾಗಿ ತೋಟಗಾರಿಕಾ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Taking Selfies at 12 location insaid the lalbagh has been banned by horticulture department.
Please Wait while comments are loading...