ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾರನ್ ಇಲ್ಲದ ಸೋಮವಾರ: ಜಾಗೃತಿ ಮೂಡಿದರೆ ಮಾತ್ರ ಪರಿಹಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಬೆಂಗಳೂರು ಮಹಾನಗರದ ಜನತೆಯನ್ನು ಸಂಚಾರ ಸಮಸ್ಯೆ ಜತೆಗೆ ವಾಹನಗಳ ಕರ್ಕಶ ಶಬ್ದ ಮಾಲಿನ್ಯವೂ ಎಡ ಬಿಡದೆ ಕಾಡುತ್ತಿದೆ. ಒಂದು ದಿನವಾದರೂ ಕರ್ಕಶ ಶಬ್ದವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎರಡು ಮೂರು ವರ್ಷಗಳ ಹಿಂದೆಯೇ ' ಹಾರ್ನ್ ನಾಟ್ ಓಕೆ ಪ್ಲೀಸ್' ಎನ್ನುವ ಅಭಿಯಾನವನ್ನು ಸಂಚಾರ ಪೊಲೀಸರು ಪ್ರಾರಂಭಿಸಿದ್ದರು.

ಆದರೆ ವಾರದಲ್ಲಿ ಒಂದೇ ಒಂದು ದಿನ ಕರ್ಕಶ ಹಾರನ್ ಮಾಡುವುದನ್ನು ನಿಲ್ಲಿಸಿ ಎಂದರೂ ಜನರು ಪೊಲೀಸರ ಮಾತುಗಳಿಗೆ ಬೆಲೆಯನ್ನೇ ನೀಡದೆ ಅವರಷ್ಟಕ್ಕೆ ಅವರು ಹಾರನ್ ಮಾಡುತ್ತಾಹೋಗುತ್ತಾರೆ.

ಬೆಂಗಳೂರಲ್ಲಿ ಕರ್ಕಶ ಶಬ್ದದ ಹಾರ್ನ್ ಗಳು ಐದು ಪಟ್ಟು ಹೆಚ್ಚಳ! ಬೆಂಗಳೂರಲ್ಲಿ ಕರ್ಕಶ ಶಬ್ದದ ಹಾರ್ನ್ ಗಳು ಐದು ಪಟ್ಟು ಹೆಚ್ಚಳ!

ದ್ವಿಚಕ್ರ, ಮೂರು, ನಾಲ್ಕು ಚಕ್ರದ ವಾಹನಗಳಲ್ಲಿ ಸಂಚರಿಸುವ ಸವಾರರು ಶಬ್ದ ಕಾರಣವಿಲ್ಲದೇ ಹಾರನ್ ಬಾರಿಸುತ್ತಾ ಮಾಲಿನ್ಯಕ್ಕೆ ತಮ್ಮ ಕೊಡುಗೆಯನ್ನು ನಿರಂತರ ನೀಡುತ್ತಲೇ ಇದ್ದಾರೆ. ಹೀಗಾಗಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.

Horn Not Ok Please on Mondays

ಇದೀಗ ಅಂತಹ ಕರ್ಕಶ ಶಬ್ದ ಮಾಡುವ ವಾಹನದ ಹಾರನ್ ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಅರಿವಿನ ಅಭಾವ: ವಾಯುಮಾಲಿನ್ಯಕ್ಕಿಂತಲೂ ಅಪಾಯಕಾರಿ ಈ ಶಬ್ದಮಾಲಿನ್ಯ. ಇದರಿಂದ ಹೆಚ್ಚಿನ ತೊಂದರೆ ಅನುಭವಿಸುವುದೇ ಪುಟಾಣಿ ಮಕ್ಕಳು. ಅನಗತ್ಯ ಶಬ್ದದ ಕಿರಿಕಿರುಯಿಂದ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮನೆಯಲ್ಲಿ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಂದಿ ವಾಹನ ಓಡಿಸುವ ವೇಳೆ ಅದನ್ನು ಮರೆತುಬಿಡುತ್ತಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ವಿದೇಶದಲ್ಲಿ ಹಾರನ್ ಮಾಡಿದರೆ ಅವರಿಗೆ ವಾಹನ ಚಲಾಯಿಸಲು ಬರುವುದಿಲ್ಲ ಎಂದರ್ಥ. ಮದುವೆ ಮೆರವಣಿಗೆ ಹೊರತುಪಡಿಸಿದರೆ ಮತ್ಯಾವುದೇ ವೇಳೆಯಲ್ಲಿಯೂ ಅವರು ಹಾರನ್ ಬಾರಿಸುವುದಿಲ್ಲ. ಆದರೆ ಭಾರತೀಯರು ಒಂದು ಸಿಗ್ನಲ್ ಬಿಡುವಷ್ಟರಲ್ಲಿ ಹತ್ತು ಬಾರಿ ಹಾರನ್ ಮಾಡುತ್ತಾರೆ. ಈ ಕುರಿತು ಜಾಗೃತಿ ಮೂಡಿಸಬೇಕೆಂಬುದು ಮಂಡಳಿಯ ಯೋಚನೆ.

ಆರೋಗ್ಯಕ್ಕೆ ಕುತ್ತು: ಶಬ್ದಮಾಲಿನ್ಯದಿಂದಾಗಿ ಕಿವುಡುತನ, ಅತಿ ಮಾನಸಿಕ ಒತ್ತಡ, ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಅನಗತ್ಯ ಕಿರಿಕಿರಿ ಹಾಗೂ ನಿದ್ರಾಹೀನತೆ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಲಿವೆ. ವಿಶೇಷವಾಗಿ ಬೆಳೆಯುವ ಮಕ್ಕಳ ಆರೋಗ್ಯದ ಮೇಲೂ ಶಬ್ದಮಾಲಿನ್ಯ ಅಡ್ಡಪರಿಣಾಮ ಗ್ಯಾರಂಟಿ. ಜತೆಗೆ ಮಕ್ಕಳು ಸೂಕ್ಷ್ಮತೆ ಕಳೆದುಕೊಳುವ ಆತಂಕ ಎದುರಾಗಿದೆ.

English summary
After cracking down against flouting of various traffic rules especially speaking on mobile phones while driving the police have now shifted their focus to the honking menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X