ಫೆಬ್ರವರಿ 6ರಿಂದ ನಿಮ್ಮ ಮನೆಬಾಗಿಲಿಗೆ ಹಾಪ್‌ಕಾಮ್ಸ್‌ ಹಣ್ಣು, ತರಕಾರಿ

Written By:
Subscribe to Oneindia Kannada

ಬೆಂಗಳೂರು, ಫೆ 4: ತೋಟಗಾರಿಕೆ ಇಲಾಖೆ ಇದೇ ಬರುವ ಸೋಮವಾರದಿಂದ (ಫೆ 6) ಹೊಸ ಪ್ರಯತ್ನಕ್ಕೆ ಮುಂದಾಗಲಿದೆ. ಇಲಾಖೆಯ ಹಾಪ್ ಕಾಮ್ಸ್ (ತೋಟಗಾರಿಕೆ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ), ಆನ್ಲೈನ್ ಮೂಲಕ ಗ್ರಾಹಕರಿಗೆ ತನ್ನ ಸೇವೆಯನ್ನು ಆರಂಭಿಸಲಿದೆ.

ಐನೂರು ಮತ್ತು ಅದಕ್ಕಿಂತ ಮೇಲ್ಪಟ್ಟು ಹಣ್ಣು ಅಥವಾ ತರಕಾರಿ ಖರೀದಿಸುವವರು ಹಾಪ್ ಕಾಮ್ಸ್ ನಿಂದ ಇನ್ನು ಮುಂದೆ ಆನ್ಲೈನ್ ಮೂಲಕ ಆರ್ಡರ್ ನೀಡಬಹುದಾಗಿದೆ. 24 ಗಂಟೆಯೊಳಗೆ ಆರ್ಡರ್ ಮಾಡಿದ ಹಣ್ಣುಹಂಪಲುಗಳು ಮನೆಬಾಗಿಲಿಗೆ ತಲುಪಲಿದೆ.

Hopcoms to introduce new online service from Feb 6 in Bengaluru

ಈ ಸಂಬಂಧ ಖಾಸಗಿ ಸಂಸ್ಥೆಯ ಜೊತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೋಮವಾರ ಒಡಂಬಡಿಕೆಗೆ ಸಹಿಹಾಕಲಿದ್ದಾರೆ. ಗ್ರಾಹಕರು ಆರ್ಡರ್ ಮಾಡಿರುವ ಹಣ್ಣು ಮತ್ತು ತರಕಾರಿಗಳನ್ನು ಮನೆಬಾಗಿಲಿಗೆ ತಲುಪಿಸುವ ಹೊಣೆಯನ್ನು ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ.

ದೈನಂದಿನ ಹಣ್ಣು ಮತ್ತು ತರಕಾರಿ ಬೆಲೆಗಳನ್ನು ಎಸ್ಎಂಎಸ್ ಮೂಲಕ (97319-79899) ಪಡೆದುಕೊಳ್ಳಬಹುದಾದ ಸೇವೆಯನ್ನು ಹಾಪ್ ಕಾಮ್ಸ್ ಈಗಾಗಲೇ ಆರಂಭಿಸಿದೆ.

ಜೊತೆಗೆ ತನ್ನ ವೆಬ್ ಸೈಟ್ ನಲ್ಲಿ 160ಕ್ಕೂ ಹೆಚ್ಚು ಹಣ್ಣು, ತರಕಾರಿಗಳ ಬೆಲೆಗಳನ್ನು ತನ್ನ ಅಂತರ್ಜಾಲದಲ್ಲಿ ದಿನಾ ಅಪ್ಡೇಟ್ ಮಾಡುತ್ತಿದ್ದೇವೆ ಎಂದು ಹಾಪ್ ಕಾಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲಿ ಹಾಪ್ ಕಾಮ್ಸ್ ಮಳಿಗೆಗಳು ಇರುವುದರಿಂದ, ಗ್ರಾಹಕರಿಗೆ ಉತ್ತಮ ಮತ್ತು ಆಧುನಿಕ ಸ್ಪರ್ಷ ನೀಡುವ ಸೇವೆಯನ್ನು ಯಾವುದೇ ತೊಂದರೆಯಿಲ್ಲದೇ ನೀಡಲಿದ್ದೇವೆ ಎನ್ನುವುದು ಇಲಾಖೆಯ ಅಧಿಕಾರಿಗಳ ಭರವಸೆಯ ಮಾತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hopcoms to introduce new online service from Feb 6 in Bengaluru. Customers who will purchase fruits and vegetables for more than Rs. 500 can use this online service, in this Hopcoms will make arrangement for door-to-door delivery of fruits and vegetables to customer.
Please Wait while comments are loading...