ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ್ಣು ಖರೀದಿಗೆ ಹಾಪ್‌ಕಾಮ್ಸ್‌ಗೆ ಬನ್ನಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10 : ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ್ಣುಗಳನ್ನು ಹಾಪ್‌ಕಾಮ್ಸ್‌ನಲ್ಲಿ ಖರೀದಿ ಮಾಡಬಹುದು. ಹಬ್ಬದ ಪ್ರಯುಕ್ತ ಹಣ್ಣುಗಳ ಖರೀದಿ ಮೇಲೆ ಶೇ 5ರಷ್ಟು ರಿಯಾಯಿತಿಯನ್ನು ಹಾಪ್‌ಕಾಮ್ಸ್ ಘೋಷಣೆ ಮಾಡಿದೆ.

ರಂಜಾನ್ ಸಂದರ್ಭದಲ್ಲಿ ಹಾಪ್‌ಕಾಮ್ಸ್ ಹಣ್ಣುಗಳ ಖರೀದಿಗೆ ರಿಯಾಯಿತಿ ನೀಡಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನಲೆಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೂ ರಿಯಾಯಿತಿ ನೀಡಲಾಗಿದೆ.[ಇನ್ನು Hopcoms ನಲ್ಲಿ ಎಂಟಿಆರ್ ಉತ್ಪನ್ನಗಳು ಲಭ್ಯ]

Hopcoms shops in festival mode

'ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ಕಾಮ್ಸ್‌)ದ ಎಲ್ಲಾ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಲಭ್ಯವಿರುತ್ತದೆ' ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸನ್ ಹೇಳಿದರು.

ಮಿನರಲ್ ವಾಟರ್ ಮಾರಾಟ : ಹಾಪ್‌ಕಾಮ್ಸ್‌ನ ಮಳಿಗೆಗಳಲ್ಲಿ ಮಿನರಲ್ ವಾಟರ್ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿಯೇ ಅರ್ಧ ಮತ್ತು 1 ಲೀಟರ್ ಮಿನರಲ್ ವಾಟರ್ ಬಾಟಲಿಗಳು ಹಾಪ್‌ಕಾಮ್ಸ್‌ನಲ್ಲಿ ದೊರೆಯಲಿವೆ.[ಹಾಪ್ ಕಾಮ್ಸ್ ವ್ಯಾಪಾರ ಕುಂಠಿತಕ್ಕೆ ಕಾರಣವೇನು?]

ಎಸ್‌ಎಂಎಸ್ ಮಾಡಿ ದರ ತಿಳಿಯಿರಿ : ಹಾಪ್‌ಕಾಮ್ಸ್‌ಗೆ ಹೋಗುವುದಕ್ಕೂ ಮೊದಲೇ ನೀವು ಇಂದಿನ ತರಕಾರಿಗಳ ದರವನ್ನು ಬೆರಳ ತುದಿಯಲ್ಲಿ ಪಡೆಯಬಹುದು. HOPCOMS VEG ಅಥವ HOPCOMS FRUIT ಎಂದು ಟೈಪ್ ಮಾಡಿ 9731979899 ನಂಬರ್‌ಗೆ ಸಂದೇಶ ಕಳುಹಿಸಿದರೆ ದರ ಮೊಬೈಲ್‌ಗೆ ಬರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Horticultural Producers Co-operative Marketing and Processing Society Ltd (HOPCOMS)shops will now provide festival special offers.
Please Wait while comments are loading...