ಬುಧವಾರದಿಂದ ಲಾಲ್ ಬಾಗ್ ನಲ್ಲಿ ತಾಜಾ ಹಣ್ಣಿನ ಮೇಳ

Posted By:
Subscribe to Oneindia Kannada

ಬೆಂಗಳೂರು,ಫೆಬ್ರವರಿ,23: ಸಸ್ಯಕಾಶಿ ಲಾಲ್ಬಾಗ್ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಪುಷ್ಪ ಪ್ರದರ್ಶನದಲ್ಲಿ ವೈವಿಧ್ಯಮಯ ಪುಷ್ಪಗಳ ಸೌಂದರ್ಯ ಕಂಡು ಕಣ್ಮನ ತುಂಬಿಕೊಂಡಿದ್ದೀರಿ. ಇದೀಗ ತಾಜಾ ಹಣ್ಣುಗಳ ಸಾಮ್ರಾಜ್ಯ ನೋಡಿ ಬರಲು ಸಿದ್ಧರಾಗಿ.

ಹಾಪ್ ಕಾಮ್ಸ್ (horticultural Producer's Cooperative Marketing and Processing Society Ltd) ಸಂಸ್ಥೆಯು ಫೆಬ್ರವರಿ 24ರಿಂದ 28ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್ ಮರೀಗೌಡ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ 'ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ-2016' ಹಮ್ಮಿಕೊಂಡಿದ್ದು, ಜೊತೆಗೆ ನಾನಾ ಹಣ್ಣುಗಳ ಪ್ರಪಂಚವೂ ಇಲ್ಲಿ ಕಾಣಲಿದೆ.[ಇನ್ನುಮುಂದೆ ತರಕಾರಿ ಅಂಗಡಿ 'ಹಾಪ್ ಕಾಮ್ಸ್'ನಲ್ಲಿ ಕಿಚ್ಚ]

Bengaluru

'ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ-2016' ಮೇಳಕ್ಕೆ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಲಿದ್ದು, ಇದರಲ್ಲಿ ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜೆಲ್ಲೆಗಳ ರೈತರು ಬೆಳೆದ ಹಣ್ಣುಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಜಿ.ಆರ್ ಶ್ರೀನಿವಾಸನ್ ಮಾಹಿತಿ ನೀಡಿದರು.

ಹಣ್ಣಿನ ಮೇಳದ ವಿಶೇಷತೆಗಳು:

ಹಳದಿ ತಿರುಳಿದ ಕಲ್ಲಂಗಡಿ, 10 ಬಗೆಯ ದ್ರಾಕ್ಷಿಗಳು, ಮ್ಯಾಂಗೋಸ್ಟೀನ್, ಬ್ಲ್ಯೂಬೆರಿ, ರಾಸ್ ಬೆರಿ, ಮಿನಿ ಆರೇಂಜ್, ಅಂಜೂರ, ಲಿಚ್ಚಿ, ಸಿಹಿಹುಣಸೆ, ಕೊಬ್ಬರಿ ಹಣ್ಣು ಇತ್ಯಾದಿ.[ಕಾಡು ಫಲಗಳು!]

HOPCOMS organize fruit mela-2016 in Lalbagh, Bengaluru

ದ್ರಾಕ್ಷಿ ಹಾಗೂ ಕಲ್ಲಂಗಡಿ ವಿಧಗಳು:

ಥಾಮ್ಸನ್ ಸೀಡ್ ಲೆಸ್, ಆರದ್ , ಕೃಷ್ಣ ಶರದ್, ಗ್ಲೋಬ್, ಬೆಂಗಳೂರು ಬ್ಲೂ ಇತ್ಯಾದಿ ತಳಿಯ ದ್ರಾಕ್ಷಿ ಹಣ್ಣುಗಳು, ವೈವಿಧ್ಯಮಯ ಕಲ್ಲಂಗಡಿ ಹಣ್ಣುಗಳು ದೊರೆಯಲಿದೆ. ಈ ಎಲ್ಲಾ ಹಣ್ಣುಗಳು ಶೇ.10 ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.[ಕತ್ತರಿಸಿಟ್ಟ ಹಣ್ಣುಗಳನ್ನು ಮಾರಾಟ ಮಾಡಬೇಡಿ]

ಉಚಿತ ತರಬೇತಿ

ತೋಟಗಾರಿಕೆ ಇಲಾಖೆಯು ಹಣ್ಣಿನ ಮೇಳ ನಡೆಯುವ ನಾಲ್ಕು ದಿನವೂ ಸಾರ್ವಜನಿಕರಿಗೆ ಜಾಮ್, ಜೆಲ್ಲಿ, ಜೂಸ್ ಇವುಗಳನ್ನು ತಯಾರಿಸುವುದು ಹೇಗೆ ಎಂಬುದರ ಕುರಿತು ಬೆಳಗ್ಗೆ 10.30 ಯಿಂದ 12.30 ರವರೆಗೆ ಉಚಿತವಾಗಿ ತರಬೇತಿ ನೀಡಲಾಗುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Horticultural Producer's Cooperative Marketing and Processing Society Ltd -HOPCOMS welcomes you to the 'Grape and watermelon Mela-2016' at Lalbagh, Bengaluru from February 24th to 28th. Over 10 varieties of grapes, two varieties watermelon, blueberries, litchis and more..
Please Wait while comments are loading...