ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 07: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲಿನ ಹಲ್ಲೆಗೆ ಗೃಹಸಚಿವ ರಾಮಲಿಂಗಾ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲ್ಲೆಕೋರನನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಆತನ ಹಿನ್ನೆಲೆ ಮತ್ತು ದಾಳಿಯ ಉದ್ದೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತ

ಆರೋಪಿಯ ಪ್ರಾತಮಿಕ ಮಾಹಿತಿಯಷ್ಟೆ ಲಭ್ಯವಿದ್ದು ತೇಜರಾಜ್ ಶರ್ಮಾ, ರಾಜಸ್ಥಾನ ಮೂಲದ ತೇಜಸ್ ಶರ್ಮಾ ಎಂಬಾತ ಲೋಕಾಯುಕ್ತರಿಗೆ ಇರಿದಿದ್ದು, ಎದೆ ಹಾಗೂ ಹೊಟ್ಟೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.

Home minister condemn the attack on judge Vishwanath Shetty

ಮಲ್ಯ ಆಸ್ಪತ್ರೆಯಿಂದ ಬಂದಿರುವ ಮಾಹಿತಿ ಪ್ರಕಾರ ನ್ಯಾಯಮೂರ್ತಿಗಳ ಪ್ರಾಣಕ್ಕೆ ತೊಂದರೆ ಇಲ್ಲ ಎಂಬುದು ಗೊತ್ತಾಗಿದೆ, ಈಗಲೇ ಮಲ್ಯ ಆಸ್ಪತ್ರೆಗೆ ತೆರಳುತ್ತಿದ್ದು, ಪೊಲೀಸ್ ಕಮಿಷನರ್ ಅವರು ಈಗಾಗಲೇ ಮಲ್ಯ ಆಸ್ಪತ್ರೆಯಲ್ಲಿ ಇದ್ದಾರೆ, ಅಲ್ಲಿಗೆ ತೆರಳಿದ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದರು.

English summary
Home minister Ramalinga Reddy condemn the attack on Lokayuktha Judge Vishwanath Shetty. He said no detail of attacker and motive of attack has been known by this time. Police will share the detail as per the interrogation is over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X