ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಖಿಲೇಶ್ ಯಾದವ್ ವಿರುದ್ಧ ಭುಗಿಲೆದ್ದ ಹಿಂದೂ ಸೇನಾ ಆಕ್ರೋಶ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 09 : ಗೋಮಾಂಸ ಶೇಖರಣೆಯಲ್ಲಿ ತೊಡಗಿದ್ದ ಎಂಬ ಆರೋಪದ ಮೇಲೆ ಮಹಮ್ಮದ್ ಇಖ್ಲಾಕ್ ನನ್ನು ಉದ್ರಿಕ್ತ ಗುಂಪು ಆತನ ಮೇಲೆ ಹಲ್ಲೆ ನಡೆಸಿತ್ತು. ಈ ಪ್ರಕರಣವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಿಬಿಐ ತನಿಖೆಗೆ ಒಪ್ಪಿಸಿದರು. ಇದನ್ನು ವಿರೋಧಿಸಿದ ಹಿಂದೂ ಸೇನಾ ನವದೆಹಲಿಯಲ್ಲಿ ಯಾದವ್ ಅವರ ಪ್ರತಿಕೃತಿಯನ್ನು ದಹಿಸಿತು

ಮುಂದಿನ ತಿಂಗಳಲ್ಲಿ ಬರುವ ಬಿಹಾರ ಚುನಾವಣೆಗೆ ಈಗಾಗಲೇ ಭರ್ಜರಿ ಪ್ರಚಾರ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಗೋಮಾಂಸ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಜನರ ನಡುವೆ ದ್ವೇಷ ಭಾವನೆ ಒಡಮೂಡಿದೆ. ಇದರ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಒಟ್ಟಿನಲ್ಲಿ ಶ್ರೀನಗರ ಸಂಪೂರ್ಣವಾಗಿ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ.

ಅಲಹಾಬಾದ್ ನಲ್ಲಿ ಗ್ರಾಮಪಂಚಾಯತ್ ಚುನಾವಣೆ ನಡೆಯುತ್ತಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಆಯ್ಕೆ ಮಾಡಲು ಜನರು ಬಹಳ ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ಗ್ರಾಮವನ್ನು ಅಭಿವೃದ್ಧಿ ಪಡಿಸಲು ಸಮರ್ಥ ನಾಯಕನ ಅವಶ್ಯಕತೆ ಇದೆ ಎಂದು ಅಲಹಾಬಾದ್ ಜನತೆ ಅರ್ಥಮಾಡಿಕೊಂಡಿದೆ.[ಜಮ್ಮು ಮತ್ತು ಕಾಶ್ಮೀರದಲ್ಲಿ ದನದ ಮಾಂಸ ಮಾರಾಟ ಬ್ಯಾನ್!]

ನಾಗಪುರದಲ್ಲಿ ಮಹಿಳಾ ಪೇದೆಗಳಿಗೆ ಪರೇಡ್ ತರಬೇತಿ ನೀಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸೈ ಎನಿಸಿಕೊಳ್ಳುತ್ತಿರುವ ಮಹಿಳೆಯರು ಪರೇಡ್ ತರಬೇತಿಯಲ್ಲಿಯೂ ಬಹಳ ಆಸಕ್ತಿಯಿಂದ ಪಾಲ್ಗೊಂಡಿದ್ದರು.

ಸಿಬಿಐ ತನಿಖೆ ವಾಪಾಸ್ ತೆಗೆದುಕೊಳ್ಳಿ

ಸಿಬಿಐ ತನಿಖೆ ವಾಪಾಸ್ ತೆಗೆದುಕೊಳ್ಳಿ

ಗೋಮಾಂಸ ಪ್ರಕರಣವನ್ನು ಸಿಬಿಐಗೆ ನೀಡಬಾರದೆಂದು ಒತ್ತಾಯಿಸಿ ಉತ್ತರ ಪ್ರದೇಶ ಅಖಿಲೇಶ್ ಯಾದವ್ ಅವರ ಪ್ರತಿಕೃತಿ ದಹಿಸಿ, ಹಿಂದೂ ಸೇನಾ ತನ್ನ ವಿರೋಧ ವ್ಯಕ್ತಪಡಿಸಿತು.

ವಾವ್ ನಾವು ಪಾಸಾದೆವು

ವಾವ್ ನಾವು ಪಾಸಾದೆವು

ನಾಗಪುರದಲ್ಲಿ ನಡೆದ ಪರೇಡ್ ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆಯರು ಪರೇಡ್ ತರಬೇತಿ ಯಶಸ್ವಿಯಾಗಿ ಪೂರೈಸಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು

ದ್ವೇಷದ ಕಿಚ್ಚಿನಲ್ಲಿ ಶ್ರೀನಗರ

ದ್ವೇಷದ ಕಿಚ್ಚಿನಲ್ಲಿ ಶ್ರೀನಗರ

ಜಮ್ಮುಕಾಶ್ಮೀರದಲ್ಲಿ ಗೋಮಾಂಸ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಶ್ರೀನಗರ ಜನತೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಇಡೀ ಶ್ರೀನಗರ ಉದ್ರಿಕ್ತಗೊಂಡಿದ್ದು, ನಗರವನ್ನು ಶಾಂತಿಗೆ ತರಲು ಪೊಲೀಸರು, ಸೇನಾ ಸಿಬ್ಬಂದಿ ಹೆಣಗಾಡಬೇಕಾಯಿತು

ಮತಹಾಕಲು ನಾವು ಫಿಟ್

ಮತಹಾಕಲು ನಾವು ಫಿಟ್

ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ಆಯ್ಕೆ ಮಾಡಲು ಬಂದ ಮುಸ್ಲಿಂ ಮಹಿಳೆಯರು ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಿದ್ದು ಹೀಗೆ.

ಸಹಸ್ರಾರು ಮಂದಿ ದಲಿತರು

ಸಹಸ್ರಾರು ಮಂದಿ ದಲಿತರು

ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪಕ್ಷದ ಮೂಲಕರ್ತ ಕಾಶೀರಾಮ್ ಅವರ ಸ್ಮರಣಾರ್ಥ ದಲಿತ ಸಮ್ಮೇಳನ ಆಯೋಜಿಸಿದ್ದರು. ಸಾವಿರಾರು ಮಂದಿ ಅಲಹಾಬಾದಿನಲ್ಲಿ ನಡೆದ ದಲಿತ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಬಿಜೆಪಿಯನ್ನು ಗೆಲ್ಲಿಸಿ

ಬಿಜೆಪಿಯನ್ನು ಗೆಲ್ಲಿಸಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರ ಚುನಾವಣೆ ನಿಮಿತ್ತ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಲು ಔರಂಗಾಬಾದ್ ತೆರಳಿದರು.

English summary
Hindu Sena activists burning an effigy of the UP Chief Minister Akhilesh Yadav on friday. Prime Minister Narendra Modi waves during an election rally in support of NDA candidates in Aurangabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X