'ನಮ್ಮ ಮೆಟ್ರೋ'ದಲ್ಲಿ ಹಿಂದಿ ಬಳಕೆ ನಿರ್ಧಾರ ಸರ್ಕಾರದ್ದಲ್ಲವೇ ಅಲ್ಲ!

Posted By:
Subscribe to Oneindia Kannada

ಬೆಂಗಳೂರು, ಜುಲೈ 21: ಬೆಂಗಳೂರು 'ನಮ್ಮ ಮೆಟ್ರೋ'ದಲ್ಲಿ ಹಿಂದಿ ಬಳಸುವ ನಿರ್ಧಾರ ನಮ್ಮ ಮೆಟ್ರೊ ಆಡಳಿತ ಮಂಡಳಿ(ಬಿಎಂಆರ್ ಸಿಎಲ್)ಯದ್ದೇ ಹೊರತು, ಕರ್ನಾಟಕ ಸರ್ಕಾರದ್ದಲ್ಲ! ಇಂಥದೊಂದು ಮಾಹಿತಿಯನ್ನು ಮಾಹಿತಿ ಹಕ್ಕು ವಿಭಾಗ ನೀಡಿದೆ.

ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಮತ್ತೆ ಬಿತ್ತು ಮಸಿ!

ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತು ನಿಲ್ದಾಣಗಳಲ್ಲಿ ಅನಗತ್ಯವಾಗಿ ಹಿಂದೀ ಭಾಷೆಯ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನ ಅರ್ಜಿಯೊಂದಕ್ಕೆ ಉತ್ತರ ನೀಡಿದ ನಮ್ಮ ಮೆಟ್ರೋ ಆಡಳಿತ ಮಂಡಳಿ, ಮೆಟ್ರೋ ಆಡಳಿತ ಮಂಡಳಿಯೇ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ನೀಡಿದೆ.

Hindi Signboards in Namma Metro: not Karnataka governments decision

ನಮ್ಮ ಮೆಟ್ರೋ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಇದು ಕರ್ನಾಟಕ ಸರ್ಕಾರದ ನೀತಿಗಳಿಗೆ ಅನುಗುಣವಾಗಿ ನಡೆಯಬೇಕು. ಆದರೆ ಸರ್ಕಾರದ ವಿಶ್ವಾಸವನ್ನೇ ತೆಗೆದುಕೊಳ್ಳದೆ ಹೀಗೆ ಹಿಂದಿ ಹೇರಿಕೆಯಲ್ಲಿ ಉತ್ಸುಕತೆ ತೋರುತ್ತಿರುವ ನಮ್ಮ ಮೆಟ್ರೋ ಆಡಳಿತ ಮಂಡಳಿಯ ನಿರ್ಧಾರವನ್ನು ಜನಸಾಮಾನ್ಯರು ವಿರೋಧಿಸಿದ್ದು, ಈ ಕುರಿತು ಆನ್ ಲೈನ್ ಮೂಲಕ ಸಹಿ ಅಭಿಯಾನವನ್ನೂ ಆರಂಭಿಸಲಾಗಿದೆ.

Namma Metro : BMRCL masked Hindi signage boards in Bengaluru | Oneindia Kannada

ನಿನ್ನೆ(ಜುಲೈ 19) ತಾನೇ ದೀಪಾಂಜಲಿನಗರ, ಯಶವಂತಪುರ, ಇಂದಿರಾನಗರ ಮೆಟ್ರೋ ಸ್ಟೇಶನ್ನಿನಲ್ಲಿನ ಹಿಂದಿ ಸೈನ್ ಬೋರ್ಡ್ ಗಳಿಗೆ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The of using Hindi signboards in Namma Metro rails and in stations in Bengaluru is not the Karnataka government's decision. But Bengaluru Metro Rail Corporation Ltd has taken this decision, Metro management itself said this in an answer to an RTI appication.
Please Wait while comments are loading...